Rain Alert: ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧೆಡೆ ವ್ಯಾಪಕ ಮಳೆ ಆರ್ಭಟ

ಬೆಂಗಳೂರು, ಏಪ್ರಿಲ್ 18: ನಿರಂತರ ಬಿಸಲಿನ ತಾಪಕ್ಕೆ ಕಂಗೆಟಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿ ಮಂದಿಗೆ ಮಳೆರಾಯ ತಂಪೆರೆದಿದ್ದಾನೆ. ಗುರುವಾರ ಮಧ್ಯಾಹ್ನ ದಿಢೀರನೇ ಜೋರು ಗಾಳಿ ಸಹಿತ ವ್ಯಾಪಕ ಮಳೆ ಸುರಿಯಿತು.

ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯ ಹಲವು ಕಡೆಗಳಲ್ಲಿ ವಿಪರೀತ ಮಳೆ ದಾಖಲಾಯಿತು. ಹುಬ್ಬಳ್ಳಿ, ಲಕ್ಷ್ಮೇಶ್ವರ, ಶಿಗ್ಗಾವಿ, ಬಂಕಾಪುರದಲ್ಲಿ ಕೆಲ ಕಾಲ ಮಳೆ ಅಬ್ಬರಿಸಿತು. ಹಾವೇರಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಲಘು ಮಳೆ ಆಗಿದೆ.

Karnataka Rain Rain Lashes Several Parts of Hubballi and other Distrtics

ಸದ್ಯ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ಪ್ರತಿ ದಿನ ಒಂದಿಲ್ಲ ಒಂದು ಜಿಲ್ಲೆಯಲ್ಲಿ ಮಳೆಯ ದರ್ಶನವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಹುಬ್ಬಳ್ಳಿ ಭಾಗದಲ್ಲಿ ಸಂಜೆ ವೇಳೆ ಜೋರು ಮಳೆ ಆಗಿತ್ತು. ನಂತರ ಎಂದಿನಂತೆ ಬಿಸಿಲ ಸೆಕೆ ಕಂಡು ಬಂದಿತ್ತು.

ಎಲ್ಲೆಡೆ ಮಬ್ಬು ವಾತಾವರಣ

ಬಿಸಿಲಿಗೆ ತತ್ತರಿಸಿದ ಛೋಟಾ ಮುಂಬೈ ನಿವಾಸಿಗಳಿಗೆ ವರುಣ ತಂಪೆರೆದಿದ್ದಾನೆ. ಇಂದು ರಾತ್ರಿವರೆಗೂ ವಿವಿಧ ಕಡೆಗಳಲ್ಲಿ ಮಳೆ ಅಬ್ಬರಿಸುವ ಮುನ್ಸೂಚನೆ ಇದೆ. ನಗರದಲ್ಲಿ ಮಳೆ ಬರುತ್ತಿದ್ದಂತೆ ನೀಲಿ ಆಕಾಶ ಮಾಯವಾಗಿ ಮೋಡ ಕವಿದ, ಕಡು ಕಪ್ಪು ಮಬ್ಬು ವಾತಾವರಣ ನಿರ್ಮಾಣವಾಯಿತು.

ಕಳೆದೊಂದು ವಾರದಿಂದ ಕೊಡಗು, ಶಿವಮೊಗ್ಗ, ಚಾಮರಾಜನಗರ, ವಿಜಯಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆ ಅಬ್ಬರು ಜೋರಾಗಿದೆ. ಏಪ್ರಿಲ್ 20ರಂದು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಧಾರಾಕಾರ ಮಳೆ ಬರುವ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ತಿಳಿಸಿದೆ.

ಮೊನ್ನೆ ಮಳೆಗೆ ಬೆಳೆ ಹಾನಿ, ನಷ್ಟ

ಇತ್ತೀಚೆಗೆ ಧಾರವಾಡ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಘಲಘಟಗಿಯಲ್ಲಿ ಬಾಳೆ ಗಿಡ (ಪೈರು), ಮಾವು ನಾಶವಾಗಿತ್ತು, ಬರಗಾದಲ್ಲಿ ತತ್ತರಿಸಿದ್ದ ರೈತರಿಗೆ ಕೈ ಹಿಡಿಯಬೇಕಿದ್ದ ಬಾಳೆ, ಮಾವು ಮಳೆಯಿಂದ ಹಾನಿ ಆಯಿತು. ಬಾಳೆ ಗಿಡ ನೆಲಕಚ್ಚಿದ್ದವು. ಮಾವು ಮರದಿಂದ ಉರಿದು ಬಿದ್ದಿದ್ದವು. ರೈತರು ಪರಿಹಾರ ನೀಡುವಂತೆ ಆಗ್ರಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+