ರೇಪಿಸ್ಟ್, ಆರೋಪಿಗಳ ಪರ ಸರ್ಕಾರ ನಿಲ್ಲುತ್ತಿದೆ: ಬೊಮ್ಮಾಯಿ ಆರೋಪ
ಹುಬ್ಬಳ್ಳಿ, ಜನವರಿ 20: ಅಪರಾಧ ಕೃತ್ಯ ಎಸಗಿದವರಲ್ಲಿ ವೋಟ್ ಬ್ಯಾಂಕ್ ಇದೆ. ಈ ಕಾರಣದಿಂದಲೇ ಕರ್ನಾಟಕ ರಾಜ್ಯ ಸರ್ಕಾರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರದವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಪಾದಿಸಿದರು.
ಹಾನಗಲ್‌ನಲ್ಲಿ ಗ್ಯಾಂಗ್ ರೇಪ್ ಪ್ರಕರಣವನ್ನು ಖಂಡಿಸಿ ಇವತ್ತು ಪ್ರತಿಭಟನೆ ಮಾಡುವ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕ್ರಿಮಿನಲ್‌ಗಳಿಗೆ ಕುಮಕ್ಕು ಸಿಗುತ್ತಿದೆ.

ಅಪರಾಧ ಕೃತ್ಯ ಎಸಗಿದವರಲ್ಲಿ ವೋಟ್ ಬ್ಯಾಂಕ್ ಇದೆ ಎಂದು ಅವರು ಕಿಡಿ ಕಾರಿದರು.
ಹಾನಗಲ್‌ನಲ್ಲಿ ನಡೆದ ಸಾಮೂಹಿಕ ಅತ್ಯಚಾರದಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇಷ್ಟಾದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡಯುತ್ತಿದೆ ಎನ್ನುತ್ತಾರೆ. ಹಾಗಾದರೆ ಇಬ್ಬರು ಪೊಲೀಸರನ್ನ ಅಮಾನತು ಮಾಡಿದ್ದು ಏಕೆ..? ಎಂದು ಅವರು ಪ್ರಶ್ನಿಸಿದರು.
ಸರ್ಕಾರ ಬಗ್ಗದಿದ್ದರೆ ಕಾನೂನು ಹೋರಾಟ
ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡವುದು ಇವರಿಂದ ಆಗಿಲ್ಲ. ಇಂತಹ ಘಟನೆಯಾದಾಗ ಸರ್ಕಾರವೇ ಸಂತ್ರಸ್ತರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು. ಈ ಪ್ರಕರಣವನ್ನ ಎಸ್‌ಐಟಿಗೆ ತನಿಖೆಗೆ ಕೊಡಬೇಕೆಂದು ಅವರು ಆಗ್ರಹಿಸಿದರು. ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಹ ಈ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ.
ಹೋರಾಟಕ್ಕೆ ಸರ್ಕಾರ ಬಗ್ಗದೆ ಹೋದರೆ ಕಾನೂನು ಹೋರಾಟ ಮಾಡುತ್ತೇನೆ ಎಂದರು.

ಆಡಳಿತ ವ್ಯವಸ್ಥೆ ರೇಪಿಸ್ಟ್ ಜತೆ ನಿಂತಿದೆ: ಆರೋಪ
ರಾಜ್ಯದಲ್ಲಿ ಗ್ಯಾಂಗ್ ರೇಪ್ ಆಗಿದ್ದು, ಹಲವರು ಪ್ರಕರಣಗಳು ಬೆಳಕಿಗೆ ಬರ್ತಿದೆ. ನೈತಿಕ ಪೊಲೀಸಗಿರಿ ಮಾಡುತ್ತಿದ್ದಾರೆ
ಈ ರೀತಿಯಾಗಿ ಒಂದು ಗ್ಯಾಂಗ್ ನಿರಂತರವಾಗಿ ಮಾಡುತ್ತಿದೆ. ರಾಜಕೀಯ ಒತ್ತಡ ವಿದ್ದು, ಆಡಳಿತ ವ್ಯವಸ್ಥೆ ರೇಪಿಸ್ಟ್ ಜೊತೆಗೆ ನಿಂತಿದೆ. ಪೊಲೀಸರು ಪಕ್ಷಪಾತ ಮಾಡಿ, ಕೇಸ್ ಮುಚ್ಚುತ್ತಿದ್ದಾರೆ ಎಂದು ತಿಳಿಸಿ ಎಸ್‌ಐಟಿಗೆ ತನಿಖೆಗೆ ಆಗ್ರಹಿಸಿದ್ದೆವು.
ಪ್ರಕರಣ ಮುಚ್ಚಲು ಯತ್ನ ಸ್ಪಷ್ಟ: ಬೊಮ್ಮಾಯಿ
ಪೋಕ್ಸೋ ಕಾಯ್ದೆಯಲ್ಲಿ ರೇಪ್ ಎಂದು ದೂರು ಕೊಟ್ಟರೆ ಕೂಡಲೇ ಎಫ್ಐಆರ್ ಮಾಡಿ ತನಿಖೆ ಮಾಡಬೇಕು. ಆದರೆ
ಅದನ್ನು ಕೂಡ ಮಾಡಲೇ ಇಲ್ಲ. ಪ್ರಕರಣ ನಡೆದು ಐದು ದಿನಕ್ಕೆ ದಾಖಲೆ ಮಾಡಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಲ್ಲ. ಸುಳ್ಳು ವರದಿ ಸೃಷ್ಟಿಸಿದ್ದಾರೆ. ಇದೆಲ್ಲ ನೋಡಿದರೆ ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಹೆಣ್ಣು ಮಗಳಿಗೆ 50 ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದರು. ಮೆಡಿಕೋ ಲೀಗಲ್ ಕೇಸ್ ನಲ್ಲಿ ಸರ್ಕಾರ ಹೆಣ್ಣು ಮಗಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಈ ಬಗ್ಗೆ ನಿರ್ಲಕ್ಷೆ ವಹಿಸಿರುವ ಸರ್ಕಾರ, ಶಾಸಕರಿಗೆ ಹೇಳಿದ್ದೇನೆ ಎಂದು ತಿಳಿಸುತ್ತಾರೆ. ಸರ್ಕಾರ, ಆರೋಗ್ಯ ಇಲಾಖೆ ಸತ್ತಿದೆಯಾ?, ಅವರ ಮುಖಾಂತರ ಕೂಡ ಮುಚ್ಚಿ ಹಾಕುವ ಕೆಲಸ ನಡೆಯುತ್ತಿವೆ. ನಿರ್ಭತಿಯಾಗಿ ಕ್ರಿಮಿನಲ್ ಗಳು ರಾಜ್ಯದ ತುಂಬಾ ಓಡಾಡುತ್ತಿದ್ದಾರೆ ಎಂದು ತಿಳಿಸಿದರು.












Click it and Unblock the Notifications