Jagadish Shettar: ಕರ್ನಾಟಕಕ್ಕೆ ಗೂಂಡಾ ರಾಜ್ಯ ಎನ್ನುವಂತಾಗಿದೆ: ಸರ್ಕಾರ ನಿರ್ಲಕ್ಷ್ಯ ವಹಿಸಿದೆ
ಹುಬ್ಬಳ್ಳಿ, ಮೇ 17: ಹುಬ್ಬಳ್ಳಿಯಲ್ಲಿ ಕೆಲವು ವಾರಗಳ ಅಂತರದಲ್ಲಿ ಒಂದೇ ಮಾದರಿಯಲ್ಲಿ ಇಬ್ಬರು ಯುವತಿಯರ ಭೀಕರ ಹತ್ಯೆ ನಡೆದಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಮೃತ ನೇಹಾಳಂತೆ ಯುವತಿ ಅಂಜಲಿ ಕೊಲೆ ಬಳಿಕವು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ದೊಡ್ಡ ದೊಡ್ಡ ನಾಯಕರು, ಶ್ರೀಗಳು ಮೃತರ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ಸರ್ಕಾರವನ್ನು ವಿಪಕ್ಷ ನಾಯಕ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಶುಕ್ರವಾರ ಮೃತ ಅಂಜಲಿ ನಿವಾಸಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

ಇತ್ತೀಚಿಗೆ ನೇಹಾ ಹಿರೇಮಠ ಅವರ ಕೊಲೆಯಾದಾಗ ರಾಜ್ಯ ತಲ್ಲಣಗೊಂಡಿತ್ತು. ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಕೊಲೆಯಾದಾಗಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸರಿಯಿಲ್ಲ ಎಂಬ ಚರ್ಚೆ ನಡೆದಿತ್ತು. ಸರ್ಕಾರ ಇದನ್ನು ಗಂಭಿರವಾಗಿ ತಗೆದುಕೊಳ್ಳಬೇಕಿತ್ತು. ಹಾಗಾಗದ್ದಕ್ಕೆ ಕೊಲೆ ಸುಲಿಗೆ ದರೋಡೆ ಮುಂದುವರಿದಿದೆ. ರಾಜ್ಯ ಸರ್ಕಾರಕ್ಕೆ ಇದನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ ಎಂದು ದೂರಿದರು.
ರಾಜ್ಯದ ಕಾನೂನು-ಸುವ್ಯವಸ್ಥೆ ಕುಸಿದೆ
ಕಾಂಗ್ರೆಸ್ ಸಚಿವರು ನೇಹಾ ಹತ್ಯೆಯಾದಾಗ ಬೇಜಾವ್ದಾರಿಯಾಗಿ ಮಾತನಾಡಿದ್ದರು. ಇದೀಗ ಮತ್ತೊಂದು ಕೊಲೆ ಆಗಿದೆ. ಅಂಜಲಿಯ ತಾಯಿ ಅವರು ಹೇಳುವ ಪ್ರಕಾರ, ಅವರಿಗೆ ಮೊದಲೇ ಜೀವ ಬೆದರಿಕೆ ಇತ್ತು. ಅವರ ತಾಯಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದರು. ಆದರೆ ಪೊಲೀಸರು ಕುಚೇಷ್ಠೆ ಮಾಡಿ ಕಳಸಿದ್ದರು. ಇದೆಲ್ಲ ನೋಡಿದರೆ ಸರ್ಕಾರದ ವ್ಯವಸ್ಥೆ ಕುಸಿದು ಹೋಗಿದೆ ಎಂದನಿಸುತ್ತದೆ ಎಂದು ಅವರು ಆರೋಪಿಸಿದರು.

ಕರ್ನಾಟಕ ಗುಂಡಾ ರಾಜ್ಯವಾಗುತ್ತಿದೆ
ಹುಬ್ಬಳ್ಳಿ ಧಾರವಾಡದಲ್ಲಿ ಕಾನೂನು ಸವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ವ್ಯವಧಾನದಿಂದ ಹೇಳುವ ಮಾತೇ ಇಲ್ಲ. ಪೊಲೀಸರು ಆತನನ್ನ ಬಂಧಸಿದ್ದರೆ ಏನು ಆಗುತ್ತಿರಲಿಲ್ಲ. ದೇಶದಲ್ಲಿ ಬಿಹಾರ್, ಉತ್ತರ ಪ್ರದೇಶ, ಗುಂಡಾ ರಾಜ್ಯ ಅಂತ ಕರಿಯುತ್ತಿದ್ದೇವು. ಇಂದು ಆ ಹೆಸರು ಕರ್ನಾಟಕಕ್ಕೆ ಬಂದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನರ ನೆಮ್ಮದಿ ಕಸಿಯುವ ಕೆಲಸ ರಾಜ್ಯ ಸರ್ಕಾರ ಮಾಡಿದೆ. ಅಂಜಲಿ ಕೊಲೆಗಾರ ವಿಶ್ವ ಅಲಿಯಾಸ್ ಗಿರೀಶ್ ನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಅಂಜಲಿ ಕುಟುಂಬಕ್ಕೆ ನ್ಯಾಯ ಸಿಗಬೇಕು, ಮೃತರ ಆತ್ಮಕ್ಕೆ ಶಾಂತಿ ಸಿಗಬೇಕು. ಸರ್ಕಾರ ಈ ಪ್ರಕರಣವನ್ನಾದರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಗೃಹ ಸಚಿವರಿಗೆ ಶೆಟ್ಟರ್ ತಿರುಗೇಟು
ಜಗದೀಶ್ ಶೆಟ್ಟರ್ ಗೃಹ ಸಚಿವರಿದ್ದಾಗಲೂ ಅನೇಕ ಕೊಲೆಗಳಾಗಿವೆ ಎಂದು ಹೇಳುತ್ತಾರೆ. ನಿಮ್ಮ ಸರ್ಕಾರದಲ್ಲಿ ಕೊಲೆಗಳೇ ಆಗಿಲ್ಲ. ಕೊಲೆಯಾಗದೆ ಹೋದ್ರೆ ನಾನು ಶಹಬ್ಬಾಸ್ ಗಿರಿ ಕೊಡ್ತೀನಾ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ ಅವರು ವಿಫಲವಾಗಿದ್ದಾರೆ ಎಂದು ಅವರು ತಿರುಗೇಟು ಕೊಟ್ಟರು.
ಅಂಜಲಿ ಮನೆಗೆ ಗೃಹ ಸಚಿವರು ಯಾಕೆ ಬಂದಲ್ಲ. ಪೊಲೀಸ್ ಸಿಬ್ಬಂದಿ ಅಮಾನತು ನಾಟಕ ಬಿಡಿ. ಗೃಹ ಸಚಿವರು ಬಂದು ಇಲ್ಲಿ ಸಭೆ ಮಾಡಬೇಕಿತ್ತು. ಇದೆಲ್ಲ ನೋಡಿದರೆ ಅವರ ಗಂಭೀರವಾಗಿ ಪರಿಗಣಿಸಿಲ್ಲ. ಇದು ಹೀಗೆ ಮುಂದುವರಿದರೆ ಸಾಕಷ್ಟು ಅನಾಹುತಗಳು ಆಗಬಹುದು ಎಂದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಅಂಜಲಿ ಅವರ ಮನೆಗೆ ಬರಬೇಕಿತ್ತು. ಸದ್ಯ ಅವರ ಕುಟುಂಬ ಭಯದ ವಾತಾವರಣದಲ್ಲಿದೆ. ಸರ್ಕಾರ ಅವರಿಗೆ ಧೈರ್ಯ ತುಂಬಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರದು ಬೇಜಾವ್ದಾರಿ ಪರಮಾವಧಿ. ನೇಹಾ ಹಿರೇಮಠ ಕೊಲೆ ಪ್ರಕರಣ ಏನಾಯಿತು..?
ನೇಹಾ ಕೊಲೆ ತನಿಖೆ ಪ್ರೊಗ್ರೆಸ್ ಏನಾಗಿದೆ?
ನೇಹಾ ಅವರ ಕೊಲೆಯಾಗಿ ಮೇ 18 ನಾಳೆ ಒಂದು ತಿಂಗಳ ಆಯ್ತು. ತನಿಖೆಯಲ್ಲಿ ಏನೆಲ್ಲ ಬೆಳವಣಿಗೆ ಆಗಿದೆ. ಇಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಗಟ್ಸ್ ಇಲ್ಲ ಎಂದು ಗೃಹ ಇಲಾಖೆ ಮೇಲೆ ದೂರಿದರು.
ಅಂಜಲಿ ಅಂಬಗೇರ ಕೊಲೆ ಕಾಡಿನಲ್ಲಿ ಆಗಿಲ್ಲ ಜನ ನೀಬಿಡ ಪ್ರದೇಶದಲ್ಲಿ ಆಗಿದೆ. ಅದು ಹುಬ್ಬಳ್ಳಿ ವಾಣಿಜ್ಯ ನಗರದಲ್ಲಿ ಜನಸಾಮಾನ್ಯರು ಇರುವ ಜಾಗದಲ್ಲಿ ಆಗಿದೆ. ಪೋಲಿಸ್ ಠಾಣೆ ಮುಚ್ಚಿಬಿಡಿ ಹಾಗಾದರೆ ಇದ್ದು ಎನು ಉಪಯೋಗ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎನ್ ರವಿಕುಮಾರ ಆಕ್ರೋಶ ವ್ಯಕ್ತಪಡಿಸಿದರು.
ಕೊಲೆ ಖಂಡಿಸಿ ಪ್ರತಿಭಟನೆ: ಆಸ್ಪತ್ರೆಗೆ ಆರೋಪಿ ಸೇರಿಸಿದ್ದೇಕೆ?
ಅಂಜಲಿ ಕೊಲೆ ಖಂಡಿಸಿ ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆದಿವೆ. ವಿವಿಧ ಸಂಘಟನೆಗಳು, ಇಂದು ಶ್ರೀರಾಮ್ ಸೇನೆಯಿಂದ ಫ್ರತಿಭಟನೆಗಳು ನಡೆದಿವೆ. ಅಂಜಲಿ ಸಹೋದರಿ ಯಶೋಧಾ ಅವರು ಸುದ್ದಿಗಾರರ ಜೊತೆ ಮಾತನಾಡಿ, ಅಂಜಲಿ ಕೊಂದ ಆರೋಪಿ ಗಿರೀಶ್ ಆಸ್ಪತ್ರೆಗೆ ಸೇರಿಸಿ ಯಾಕೆ ಚಿಕಿತ್ಸೆ ನೀಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ನಮ್ಮ ಅಕ್ಕ ಹೇಗೆ ರಕ್ತ ಹರಿದು ನರಳಿ ನರಳಿ ಸತ್ತಳೊ ಹಾಗೇ ಅವನು ಸಾಯಲಿ ಅವನು ಎಂದು ಆರೋಪಿ ವಿರುದ್ದ ಆಕ್ರೋಶ ಹೊರಹಾಕಿದ ಅಂಜಲಿ ಸಹೋದರಿ ಯಶೋಧ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications