ಬೆಳಗಾವಿ ದಂಡು ಮಂಡಳಿಯ ಜಾಗ ಹಸ್ತಾಂತರ: ರಕ್ಷಣಾ ಸಚಿವರಲ್ಲಿ ಜಗದೀಶ್ ಶೆಟ್ಟರ್ ಮನವಿ
ಹುಬ್ಬಳ್ಳಿ, ಜುಲೈ 25: ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ಎಲ್ಲ ನಾಗರೀಕ ಕ್ಷೇತ್ರವನ್ನು/ಜಮೀನನ್ನು ರಕ್ಷಣಾ ಸಚಿವಾಲಯದ ನಿರ್ದೇಶನಗಳಡಿ, ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡುವಂತೆ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮನವಿ ಮಾಡಿದರು.
ಈ ಕುರಿತು ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿರುವ ಜಗದೀಶ್ ಶೆಟ್ಟರ್ ಅವರು ವಿಸ್ತೃತವಾಗಿ ಚರ್ಚಿಸಿದರು. ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ಎಲ್ಲ ನಾಗರೀಕ ಕ್ಷೇತ್ರವನ್ನು/ಜಮೀನನ್ನು ರಕ್ಷಣಾ ಸಚಿವಾಲಯದ ನಿರ್ದೇಶನಗಳಡಿ, ಬೆಳಗಾವಿ ಮಹಾನಗರ ಪಾಲಿಕೆಗೆ ಹಸ್ತಾಂತರವಾಗುವ ನಿಟ್ಟಿನಲ್ಲಿ ಪ್ರಸ್ತಾವನೆ ತಯಾರಿಸಬೇಕು.

ಈ ಬಗ್ಗೆ ಕಟ್ಟು ನಿಟ್ಟಿನ ಸೂಚನೆಯನ್ನು ದಂಡು ಮಂಡಳಿ ಅಧಿಕಾರಿಗಳಿಗೆ ನೀಡುವಂತೆ ಜಗದೀಶ್ ಶೆಟ್ಟರ್ ಮನವಿ ಮಾಡಿದರು. ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಸಂಸದರ ಮನವಿಗಳನ್ನು ಆಲಿಸಿದರು. ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಜಾಗ ಹಸ್ತಾಂತರ ಮಾಡಲು ಮನವಿ
ಬೆಳಗಾವಿ ದಂಡು ಮಂಡಳಿ ಇದರ ವ್ಯಾಪ್ತಿಯಲ್ಲಿ ನೊಟಿಫೈಡ್ ಸಿವಿಲ್ ಪ್ರದೇಶಗಳನ್ನು ಮಾತ್ರ ಅಧಿಕಾರಿಗಳು ಗುರುತಿಸಿದ್ದಾರೆ. ಉಳಿದ ಸಿವಿಲ್ ಏರಿಯಾಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ಕರಡು ಪ್ರಸ್ತಾವನೆಯಲ್ಲಿ ಪ್ರಸ್ತಾಪ ಮಾಡಿರಲ್ಲಿಲ ಎಂಬುದನ್ನು ಶೆಟ್ಟರ್ ಸಚಿವರ ಗಮನಕ್ಕೆ ತಂದರು.
ಅಧಿಕಾರಿಗಳು ಕೇವಲ 'ಬಜಾರ ಏರಿಯಾ' ಮಾತ್ರ ಪರಿಗಣಿಸಿ 'ಬಂಗಲೋ ಏರೊಯಾ' ಮಾಡಿರಿಲ್ಲಿಲ. ಈ ಕುರಿತು ದಿನಾಂಕ 06.07.2024 ರಂದು ಜರುಗಿದ ದಂಡು ಮಂಡಳಿ ಸಭೆಯಲ್ಲಿ ಖುದ್ದಾಗಿ ಹಾಜರಿದ್ದು, ಮಾಹಿತಿ ನೀಡಿದರು. ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿರಲಿಲ್ಲ.

ರಕ್ಷಣಾ ಸಚಿವಾಲಯದ ಆದೇಶಗಳಂತೆ ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ಎಲ್ಲ ಸಿವಿಲ್ ಏರೀಯಗಳನ್ನು ಗುರುತಿಸಿ "ಕರಡು ಪ್ರಸ್ತಾವನೆಯನ್ನು ತಯಾರಿಸಿ ಸಲ್ಲಿಸುವಂತೆ ಕರ್ನಾಟಕ ರಾಜ್ಯಕ್ಕೆ ಸೂಚಿಸಲು ಮನವಿ ಮಾಡಿಕೊಂಡರು.
ಎಲ್ಲ ವಿಷಯವನ್ನು ಆಲಿಸಿದ ಮಾನ್ಯ ರಕ್ಷಣಾ ಸಚಿವರು, ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಕ್ಷಣಾ ಸಚಿವಾಲಯದ ನಿರ್ದೇಶಗಳಡಿಯಲ್ಲಿಯೇ ಪ್ರಸ್ತಾಪಿತ ಕರಡು ಪ್ರಸ್ತಾವನೆ ತಯಾರಿಸಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆಯನ್ನು ಬೆಳಗಾವಿ ದಂಡು ಮಂಡಳಿ ಅಧಿಕಾರಿಗಳಿಗೆ ನೀಡಲಾಗುವುದು ಎಂದು ಭರವಸೆಯನ್ನು ನೀಡಿದರು.












Click it and Unblock the Notifications