ಈದ್ಗಾ ಮೈದಾನದಲ್ಲಿ ಹೇಗಿರಲಿದೆ 'ಗಣೇಶ ಪ್ರತಿಷ್ಠಾಪನೆ', ಮೆರವಣಿಗೆ & ಪೊಲಿಸ್ ಭದ್ರತೆ
ಹುಬ್ಬಳ್ಳಿ, ಸೆಪ್ಟಂಬರ್ 05: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈ ಬಾರಿಯು ವಿವಾದಾತ್ಮಾಕ ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಹುಬ್ಬಳ್ಳಿ ಧಾರವಾಡ ಪಾಲಿಕೆಯಿಂದ ಅನುಮತಿ ನೀಡಿದೆ. ಇದರ ಬೆನ್ನಲ್ಲೆ 'ರಾಣಿ ಚನ್ನಮ್ಮ ಗಜಾನನ ಉತ್ಸವ ಮಹಾ ಮಂಡಳಿ'ಯು ವಿಶೇಷ ಗಣಪ ಪ್ರತಿಷ್ಠಾಪಿಸಿ ಅದ್ಧೂರಿ ಗಣೇಶೋತ್ಸವ ಆಚರಿಸಲು ಭರದ ಸಿದ್ಧತೆ ಮಾಡಿಕೊಂಡಿದೆ. ಮೈದಾನದಲ್ಲಿ ಎಲ್ಲ ಬಗೆಯ ತಯಾರಿಗಳು ನಡೆಯುತ್ತಿವೆ.
'ಹುಬ್ಬಳ್ಳಿಯಲ್ಲಿಯೇ ಮೂರ್ತಿ ತಯಾರಾಗುತ್ತಿದೆ. ಸೆಪ್ಟಂಬರ್ 6ರಂದು ಮೂರು ಸಾವಿರಮಠಕ್ಕೆ ಮೂರ್ತಿ ತರಲಾಗುತ್ತದೆ. ಹಬ್ಬದ ದಿನ ಬೆಳಗ್ಗೆ ಒಳ್ಳೆಯ ಮಹೂರ್ತದಲ್ಲಿ 9ರಂದು ಗಣಪನಮೂರ್ತಿಯನ್ನು ಪ್ರಮುಖ ನಗರಗಳ ಮಾರ್ಗವಾಗಿ ಬೃಹತ್ ಮೆರವಣಿಗೆ ನಡೆಸಿ, ಮೈದಾನದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಮಹಾಮಂಡಳದ ಅಧ್ಯಕ್ಷ ಬೃಹತ್ ಸಂಜೀವ್ ಬಡಸ್ಕರ ತಿಳಿಸಿದರು.

ತಿಷ್ಠಾಪನಾ ಮೆರವಣಿಗೆಗೆ ರಾಜ್ಯ ಅಥವಾ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲು ಚಿಂತನೆ ನಡೆಸಲಾಗಿದೆ. ಗಣಹೋಮ, ಅನ್ನಸಂತರ್ಪಣೆ, ಗಂಗಾರತಿ, ಮೂರು ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಹಬ್ಬದ ಕಾರ್ಯಕ್ರಮಗಳು ನಡೆಯಲಿವೆ.
ಸೆಪ್ಟೆಂಬರ್ 9 ರಂದು ಬೆಳಿಗ್ಗೆ 11.55 ಕ್ಕೆ ಈದ್ಗಾ ಮೈದಾನದಿಂದ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ವಾಹನ ನಿಷೇಧ ರದ್ದು, ಪರದೆ ಅಳವಡಿಕೆ
ಈಗಾಗಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಈದ್ಗಾ ಮೈದಾನದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದ. ಪೆಂಡಾಲ್ ಹಾಕಲಾಗುತ್ತಿದೆ. ಇಲ್ಲಿ ವಾಹನಗಳ ನಿಲ್ಲುವುದನ್ನು ನಿಷೇಧಿಸಲಾಗಿದೆ. ಕಟ್ಟಡದ ಭದ್ರತೆಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ದೊಡ್ಡ ಪ್ರಮಾಣದಲ್ಲಿ ಪರದೇ ಅಳವಡಿಕೆಗೆ ಸಿಬ್ಬಂದಿ ಮುಂದಾಗಿದ್ದಾರೆ .ಇಡೀ ಮೈದಾನವನ್ನು ಪೊಲೀಸ್ ಸುಪರ್ದಿಗೆ ಪಡೆಯಲಾಗಿದೆ. ಶಾಂತಿ ಸುವ್ಯವಸ್ಥೆಯಿಂದ ಆಚರಣೆಗಳು ನಡೆಯುವಂತ ನೋಡಿಕೊಳ್ಳಲಾಗುತ್ತಿದೆ.
ಮೈದಾನದಲ್ಲಿನ ಕಟ್ಟಡ ಸೇರಿ ಶೇಕಡಾ 70ರಷ್ಟು ಭಾಗಕ್ಕೆ 20 ಅಡಿ ಎತ್ತರದಷ್ಟು ಪರದೆ ಕಟ್ಟಿ, ಉಳಿದ ಭಾಗವನ್ನು ಗಣೇಶಮೂರ್ತಿ ಪ್ರತಿಷ್ಠಾಪಿಸುವ ಸಮಿತಿಗೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆ ಪರದೆ ಕಟ್ಟಿಸುವ, ಕಟ್ಟಿಗೆ ಕಂಬಗಳಿಂದ ಬ್ಯಾರಿಕೇಡ್ ಹಾಕಿ ಕಟ್ಟಡದ ಕಡೆ ಪ್ರವೇಶ ನಿಷೇಧಿಸಲಾಗುತ್ತಿದೆ.

ಮೈದಾನಕ್ಕೆ ಪೂರ್ವ ದ್ವಾರದಿಂದ ಪ್ರವೇಶ
ಇನ್ನೂ ಈದ್ಗಾ ಮೈದಾನದ ಸೆ. 6ರಂದು ಉತ್ತರ ಹಾಗೂ ದಕ್ಷಿಣದ್ವಾರ ಬಂದ್ ಮಾಡಿ, ಪೂರ್ವ ದ್ವಾರದ ಮೂಲಕ ಮೈದಾನ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಇದೆಲ್ಲ ಆದ ಬಳಿಕವೇ ಮೈದಾನ ನೀಡಲಾಗುತ್ತದೆ.
ಮೈದಾನದಲ್ಲಿ ಮೂರು ದಿನಗಳ ಕಾಲ ನಾಲ್ಕು ಕಡೆ ಹೈಮಾಸ್ಟ್ ದೀಪಗಳನ್ನು ಅಳವಡಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಪೊಲೀಸರು ಸೂಚಿದ ಜಾಗದಲ್ಲಿಯೇ 30 ಅಡಿ ಉದ್ದ, 30 ಅಡಿ ಅಗಲದ ಪೆಂಡಾಲ್ ನಿರ್ಮಿಸಬೇಕು' ಈಗಾಗಲೇ ಸಮಿತಿಗೆ ಕರಾರು ಹಾಕಿ ಒಪ್ಪಿಗೆ ನೀಡಲಾಗಿದೆ ನೀಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿದರು.
ಮೈದಾನ ಸುತ್ತಮುತ್ತ 422 ಪೊಲೀಸರಿಂದ ಭದ್ರತೆ
ಮೈದಾನದ ಒಳಗೆ ಹಾಗೂ ಹೊರಗೆ ಬಿಗಿ ಪೊಲಿಸ್ ಬಂದೋಬಸ್ತ್ ಮಾಡಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ. ಈ ಸಂಬಂಧ ಅಗತ್ಯ ರೂಪರೇಷೆ ಸಿದ್ಧಪಡಿಸಲಾಗಿದೆ. ನಾಲ್ವರು ಎಸಿಪಿ ನೇತೃತ್ವದಲ್ಲಿ ಎಂಟು ತಂಡಗಳನ್ನು ರಚಿಸಿದೆ. ಭದ್ರತೆಗೆ ಒಟ್ಟು 422 ಸಿಬ್ಬಂದಿ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ.
6 ಪಿಐ, 12 ಪಿಎಸ್‌ಐ, 40 ಎಎಸ್‌ಐ, 160 ಹೆಡ್ ಕಾನ್‌ಸ್ಟೆಬಲ್, 40 ಮಹಿಳಾ ಹೆಡ್ ಕಾನ್‌ಸ್ಟೆಬಲ್, 160 ಕಾನ್‌ಸ್ಟೆಬಲ್ ಮೈದಾನದ ಪ್ರವೇಶದ್ವಾರ, ಪೆಂಡಾಲ್ ಸುತ್ತಮುತ್ತ ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳು ಭದ್ರತೆಯಲ್ಲಿ ಸ್ಥಳದಲ್ಲಿರುವ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತದೆ. ಶಾಂತಿ ಸುವ್ಯವಸ್ಥೆಯಿಂದ ಆಚರಣೆ ಮಾಡುವಂತೆ ಈಗಾಗಲೇ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಇದೇ ವರ್ಷ ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಆಗಿದೆ. ಇದೀಗ ಅದೇ 'ಶ್ರೀರಾಮನ ಅವತಾರದ ಗಣೇಶಮೂರ್ತಿ' ಯನ್ನು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಲು ತೀರ್ಮಾನಿಸಲಾಗಿದೆ.
-
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications