ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ; ಬಸವರಾಜ ಹೊರಟ್ಟಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜುಲೈ 01: "ನಾನು ಎಂಎಲ್‌ಸಿಯಾಗಿ ಯಾವ ಅಧಿಕಾರವನ್ನು ಕೇಳುವುದಿಲ್ಲ. ನನ್ನ ಮೇಲೆ ನಂಬಿಕೆಯಿಟ್ಟು ಯಾವುದೇ ಹುದ್ದೆ ನೀಡಿದರೂ ಸಮರ್ಥವಾಗಿ ನಿಭಾಯಿಸುವೆ" ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಶುಕ್ರವಾರ ಹುಬ್ಬಳ್ಳಿ ಪತ್ರಕರ್ತರ ಭವದಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. "ನನಗೆ ಯಾವುದೇ ಹುದ್ದೆಯನ್ನು ನೀಡಿದರೂ ನಾನು ಬೇಡ ಎನ್ನುವುದಿಲ್ಲ. ನನ್ನ ಆತ್ಮದ ವಿರುದ್ಧ ಎಂದಿಗೂ ನಾನು ನಡೆಯುವುದಿಲ್ಲ" ಎಂದರು.

ತಹಶೀಲ್ದಾರ್ ಕಚೇರಿಯಲ್ಲಿ ವಂಚನೆ; ಪ್ರಕರಣ ಬಯಲಿಗೆ ತಂದ ಸಚಿವರು ತಹಶೀಲ್ದಾರ್ ಕಚೇರಿಯಲ್ಲಿ ವಂಚನೆ; ಪ್ರಕರಣ ಬಯಲಿಗೆ ತಂದ ಸಚಿವರು

"ಈ ಹಿಂದಿನಂತೆಯೇ ನೇರ ನುಡಿಯಲ್ಲಿಯೇ ಮಾತನಾಡುವೆ.ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹಿಂದೆ ಉಳಿದಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಯಾರಿಂದಲೂ ಸಾಧ್ಯವಿಲ್ಲ. ದೇವರು ಕೆಳಗೆ ಬಂದರೂ ಅದು ಆಗದು. ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿರುತ್ತದೆ" ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

I Will Work Which Part Will Assigned Me Says Basavaraj Horatti

ಯಾರೂ ಕಮರ್ಷಿಯಲ್ ಆಗಬಾರದು; "ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ಸರ್ಕಾರ ಎಲ್ಲ‌ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳ ವಿಷಯದಲ್ಲಿ ಯಾರು ಕಮರ್ಷಿಯಲ್ ಆಗಬಾರದು. ಇದೀಗ ಪಠ್ಯಪುಸ್ತಕ, ಸಮವಸ್ತ್ರ ಸರಿಯಾಗಿ ಮಕ್ಕಳಿಗೆ ತಲುಪುತ್ತಿಲ್ಲ. ಅದನ್ನು ಸರ್ಕಾರ ಮತ್ತು ಅಧಿಕಾರಿಗಳು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡಬೇಕು" ಎಂದು ಬಸವರಾಜ ಹೊರಟ್ಟಿ ಆಗ್ರಹಿಸಿದರು.

ಮಾನ್ಯತೆ ರದ್ದಾದರೂ ಟಿಸಿ ಕೊಡದೆ ಹುಬ್ಬಳ್ಳಿ ಶಾಲೆ; ಪೋಷಕರ ಕಣ್ಣೀರು ಮಾನ್ಯತೆ ರದ್ದಾದರೂ ಟಿಸಿ ಕೊಡದೆ ಹುಬ್ಬಳ್ಳಿ ಶಾಲೆ; ಪೋಷಕರ ಕಣ್ಣೀರು

"ನನ್ನ ಅಧಿಕಾರದ ಅವಧಿಯಲ್ಲಿ ಮೇ ತಿಂಗಳಲ್ಲಿಯೇ ಸೈಕಲ್, ಪುಸ್ತಕ ಕೊಡುವ ಪದ್ದತಿ ಇತ್ತು. ಆದರೆ ಕೆಲವೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡ ಮಟ್ಟದ ಸಮಸ್ಯೆಗೆ ಕಾರಣವಾಗುತ್ತದೆ‌. ಹಾಗಾಗಿ ಶಾಲೆ ಪ್ರಾರಂಭದಲ್ಲೇ ಎಲ್ಲ ಸೌಲಭ್ಯ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು" ಎಂದು ಒತ್ತಾಯಿಸಿದರು.

I Will Work Which Part Will Assigned Me Says Basavaraj Horatti

"ನಾನು ಸಭಾಪತಿಯಂತಹ ಜವಾಬ್ದಾರಿ ಸ್ಥಾನದಲ್ಲಿದ್ದಾಗ ಶಿಕ್ಷಣ ವ್ಯವಸ್ಥೆಯ ಕೆಲ ಸಮಸ್ಯೆಗಳ ಕುರಿತು ಸರ್ಕಾರಕ್ಕೆ 112 ಪತ್ರಗಳನ್ನು ಬರೆದಿದ್ದೆ. ಆದರೆ ಅದ್ಯಾವುದಕ್ಕೂ ಸರ್ಕಾರದಿಂದ ಒಂದೇ ಒಂದು ಉತ್ತರ ಬಂದಿಲ್ಲ" ಎಂದು ಬಸವರಾಜ ಹೊರಟ್ಟಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Recommended Video

England ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿಶೇಷ ಪ್ರಯೋಗ | *Cricket | OneIndia Kannada

English summary
I will do work which party will assigned me said MLC and BJP leader Basavaraj Horatti. Recently he won the MLC elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X