ದೇವೇಗೌಡರ ಬಳಿ ಬಾಗಿಲೇ ಇಲ್ಲ: ಪ್ರಹ್ಲಾದ್ ಜೋಶಿ ಲೇವಡಿ

ಹುಬ್ಬಳ್ಳಿ, ಅಕ್ಟೋಬರ್ 24: ದಕ್ಷಿಣಿ ಭಾರತದಲ್ಲಿ ಬಿಜೆಪಿ ಬಾಗಿಲು ಬಂದ್ ಮಾಡುವುದಾಗಿ ಹೇಳಿಕೆ ನೀಡಿರುವ ದೇವೇಗೌಡರ ವಿರುದ್ಧ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಬಾಗಿಲು ಮುಚ್ಚುವ ಮೊದಲು ಬಾಗಿಲಿನ ಕೀ ಯಾರ ಬಳಿ ಇದೆ, ಬಾಗಿಲು ಯಾರ ಹತ್ತಿರ ಇದೆ ಎಂಬುದನ್ನು ದೇವೇಗೌಡರು ತಿಳಿದುಕೊಳ್ಳಲಿ ಎಂದು ಅವರು ಲೇವಡಿ ಮಾಡಿದ್ದಾರೆ.

ದೇವೇಗೌಡರು ಬಿಜೆಪಿಯ ಬಾಗಿಲು ಮುಚ್ಚುತ್ತಾರಂತೆ. ಆದರೆ ಅವರ ಬಳಿ ಬಾಗಿಲೇ ಇಲ್ಲ ಎಂದು ಹೇಳಿದರು.

Hubli Prahlad Joshi criticized Devegowda on BJP door close remark

ನಾವು ಅನಿವಾರ್ಯತೆಯಿಂದ ಒಟ್ಟಾಗಿ ಇದ್ದೇವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ನವರಿಬ್ಬರೂ ಹೇಳುತ್ತಾರೆ. ಅಂದರೆ ಅವರು ಪ್ರೀತಿ ಪ್ರೇಮದಿಂದ ಒಟ್ಟಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ನಮ್ಮ ಭಯದಿಂದಲೇ ಒಟ್ಟಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ.

ಇಬ್ಬರಲ್ಲಿಯೂ ಪರಸ್ಪರ ವಿಶ್ವಾಸವಿದೆ. ಬೇರೆ ಕಾರಣಗಳಿಂದ ಎರಡು ಪಕ್ಷಗಳು ಪ್ರತ್ಯೇಕವಾಗಿವೆ ಎಂದು ಹೇಳುವುದರಲ್ಲಿ ಅರ್ಥವಿದೆ. ಆದರೆ, ಅವರು ಹೇಳುವುದು ನಮಗೆ ಈಗ ಕಾಂಗ್ರೆಸ್ ಜತೆ ಕೈಜೋಡಿಸುವುದು ಅನಿವಾರ್ಯವಾಗಿದೆ ಎಂದು.

ಕಾಂಗ್ರೆಸ್ ಪರಿಸ್ಥಿತಿ ದಿಕ್ಕಿಲ್ಲದೇ ದೇವರನ್ನು ತಬ್ಬಿಕೊಂಡ ಹಾಗಿದೆ. ಜೆಡಿಎಸ್‌ನವರು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸರ್ವನಾಶ ಮಾಡುತ್ತಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+