ಒಂದು ದಿನದ ಮಟ್ಟಿಗೆ ಬ್ರಿಟೀಷ್‌ ರಾಯಭಾರಿಯಾದ ಹುಬ್ಬಳ್ಳಿ ಬೆಡಗಿ

ಹುಬ್ಬಳ್ಳಿ, ಅಕ್ಟೋಬರ್‌, 12: ಹುಬ್ಬಳ್ಳಿಯ ಸಂಜನಾ ಹಿರೇಮಠ ಎಂಬ ಯುವತಿ ಬೆಂಗಳೂರಿನಲ್ಲಿ ಒಂದು ದಿನದ ಮಟ್ಟಿಗೆ ಬ್ರಿಟೀಷ್‌ ರಾಯಭಾರಿ ಕಾರ್ಯನಿರ್ವಹಿಸಿದರು.

ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನದ ಪ್ರಯುಕ್ತ ಭಾರತದಲ್ಲಿರುವ ಬ್ರಿಟಿಷ್‌ ರಾಯಭಾರಿ ಕಚೇರಿಯು ಏರ್ಪಡಿಸಿದ್ದ ಒಂದು ದಿನದ ರಾಯಭಾರಿ ಸ್ಪರ್ಧೆಯಲ್ಲಿ 180 ಯುವತಿಯರು ಪಾಲ್ಗೊಂಡಿದ್ದರು. ಲಂಡನ್‌ ಸ್ಟಾಕ್‌ ಎಕ್ಸಚೇಂಜ್‌ ‌ಗ್ರೂಪ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಜನಾ ಹಿರೇಮಠ ವಿಜೇತರಾದರು. ಅವರು ಮಾಧ್ಯಮ ಹಾಗೂ ಸಂವಹನದಲ್ಲಿ ಸ್ನಾತಕೋತ್ತರ ಪದವೀಧರರು.

Hubballi young woman who became an British ambassador for just one day

"ಬ್ರಿಟಿಷ್‌ ರಾಯಭಾರಿ ಕಚೇರಿಯಲ್ಲಿ ಸಮಯ ಕಳೆಯಬೇಕೆಂಬ ನನ್ನ ಕನಸು ನನಸಾಗಿದೆ. ರಾಯಭಾರಿ ಕಚೇರಿಯಲ್ಲಿರುವ ತಂಡದ ಸದಸ್ಯರನ್ನು ಹಾಗೂ ನಾಯಕಿಯರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು" ಎಂದು ಸಂಜನಾ ಹಿರೇಮಠ ಹರ್ಷ ವ್ಯಕ್ತಪಡಿಸಿದರು.

ಕರ್ನಾಟಕ ಹಾಗೂ ಕೇರಳಕ್ಕೆ ಬ್ರಿಟೀಷ್‌ ಡೆಪ್ಯೂಟಿ ಹೈಕಮಿಷನರ್‌ ಚಂದ್ರು ಐಯ್ಯರ್‌ ಮಾತನಾಡಿ, "ಹೆಣ್ಣುಮಕ್ಕಳ ಹಕ್ಕುಗಳ ಹಾಗೂ ಮಹಿಳಾ ನಾಯಕತ್ವದ ಬಗ್ಗೆ ಜಾಗೃತಿ ಮೂಡಿಸಲು ಯುವತಿಯರಿಗೆ ಇದು ಒಳ್ಳೆಯ ಅವಕಾಶ. ಸಂಜನಾ ಅವರು ಒಂದು ದಿನದ ಮಟ್ಟಿಗೆ ಬ್ರಿಟೀಷ್‌ ರಾಯಭಾರಿಯಾಗಿ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸಿದರು" ಎಂದರು.

ಅಲ್ಲದೆ ನಂತರ ಸಂಜನಾ ಅವರು ಆಸ್ಟ್ರೇಲಿಯಾದ ಕೌನ್ಸಲ್‌ ಜನರಲ್‌ ಹಿಲರಿ ಮ್ಯಾಕ್‌ಗಿಚಿ ಅವರೊಂದಿಗೆ ಜೋಳದ ರೊಟ್ಟಿ ಊಟ ಸವಿದರು. ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳ ಕುರಿತು ಹಾಗೂ ಮಹಿಳಾ ನಾಯಕತ್ವ ಕುರಿತು ಅವರೊಂದಿಗೆ ಚರ್ಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+