ಹುಬ್ಬಳ್ಳಿ- ವಾರಣಾಸಿ ಮಧ್ಯೆ ಮೇ 28ರಿಂದ ರೈಲು ಸಂಚಾರ
ಹುಬ್ಬಳ್ಳಿ, ಮೇ 22: ಹುಬ್ಬಳ್ಳಿ ಹಾಗೂ ವಾರಣಾಸಿ ಮಧ್ಯೆ ವಾರಕ್ಕೆ ಒಂದು ಸಲ ಸಂಚರಿಸುವ ಎಕ್ಸ್ ಪ್ರೆಸ್ ರೈಲಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನವದೆಹಲಿಯ ರೈಲು ಭವನದಲ್ಲಿ ಮೇ ಇಪ್ಪತ್ಮೂರರ ಮಂಗಳವಾರ ವಿಡಿಯೋ ಲಿಂಕ್ ಮೂಲಕ ಚಾಲನೆ ನೀಡಲಿದ್ದಾರೆ. ಇದೇ ತಿಂಗಳ ಇಪ್ಪತ್ತೆಂಟನೇ ತಾರೀಕು ವಾರಣಾಸಿಯಿಂದ ಹಾಗೂ ಜೂನ್ ಎರಡರಂದು ಹುಬ್ಬಳ್ಳಿಯಿಂದ ಅಧಿಕೃತವಾಗಿ ಚಾಲನೆ ಸಿಕ್ಕಲಿದೆ.
ಪ್ರತಿ ಶುಕ್ರವಾರ ಸಂಜೆ 5.50ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು (17323) ಭಾನುವಾರ ಬೆಳಗ್ಗೆ 11.44ಕ್ಕೆ ವಾರಣಾಸಿಯನ್ನು ತಲುಪುತ್ತದೆ. ಇನ್ನು ವಾರಣಾಸಿಯಿಂದ ಭಾನುವಾರದಂದು ಬೆಳಗ್ಗೆ 9.05ಕ್ಕೆ ಹೊರಡುವ ರೈಲು (17324) ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಯನ್ನು ತಲುಪುತ್ತದೆ.

ಈ ರೈಲು ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮೂಲಕ ರೈಲು ಸಂಚರಿಸಲಿದೆ. ಈ ರೈಲಿನಲ್ಲಿ ಎಸಿ-2 ಟೈರ್ ನ ಒಂದು ಬೋಗಿ, ಎಸಿ- 3 ಟೈರ್ ನ ಒಂದು ಬೋಗಿ ಸೇರಿದ ಹಾಗೆ ಒಟ್ಟು 16 ಬೋಗಿಗಳು ಇರುತ್ತವೆ. ಇದರಿಂದ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ. ಸಮಯ ಹಾಗೂ ಇತರ ಮಾಹಿತಿಗಳು ನಿಮ್ಮ ಗಮನದಲ್ಲಿರಲಿ.
{promotion-urls}












Click it and Unblock the Notifications