Get Updates
Get notified of breaking news, exclusive insights, and must-see stories!

Hubballi Siddharoodha Math: ಮಠದಲ್ಲಿ ಭಕ್ತರು-ಟ್ರಸ್ಟಿಗಳ ಮಧ್ಯೆ ಗಲಾಟೆ: ಭ್ರಷ್ಟಾಚಾರದ ವಾಸನೆ?

ಹುಬ್ಬಳ್ಳಿ, ಮಾರ್ಚ್ 04: ವಾಣಿಜ್ಯನಗರಿ ಎಂದು ಖ್ಯಾತವಾಗಿರುವ ಉತ್ತರ ಕರ್ನಾಟಕದ ಹುಬ್ಬಳ್ಳಿ ಎಂದ ಕೂಡಲೇ ನೆನಪಾಗುವುದು. ಇಲ್ಲಿನ ಸದ್ಗುರು ಶ್ರೀ ಸಿದ್ಧರೂಢ ಸ್ವಾಮೀ ಮಠ. ಈ ಮಠಕ್ಕೆ ಭೇಟಿ ನೀಡದವರೇ ಇಲ್ಲ. ಸದ್ಯ ಈ ಮಠವು ಗಲಾಟೆ ವಿಚಾರವಾಗಿ ಸುದ್ದಿಯಲ್ಲಿದೆ.

ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ ಮಠದ ಟ್ರಸ್ಟ್ ಕಮಿಟಿ ಮತ್ತು ಭಕ್ತರ ನಡುವೆ ತೀವ್ರ ವಾಗ್ವಾದ ನಡೆದಿದೆ. ಶಿವರಾತ್ರಿ ಉತ್ಸವ ಆಚರಣೆ ಹಾಗೂ ಲೆಕ್ಕಪತ್ರ ಮಂಡನೆ ವಿಚಾರಕ್ಕೆ ಸಭೆ ಕರೆಯಲಾಗಿತ್ತು. ಈ ವೇಳೆ ಭಕ್ತರು ಖರ್ಚು ವೆಚ್ಚದ ಬಗ್ಗೆ ಮಾಹಿತಿ ಕೇಳಿದ್ದರು.

Hubballi Shri Siddharoodha Math Trustee and Devotees between A Fight for Expenses of mutt

ಆದರೆ ಭಕ್ತರ ಈ ಮನವಿಗೆ ಒಪ್ಪದ ಶ್ರೀ ಸಿದ್ಧರೂಢ ಸ್ವಾಮೀ ಮಠದ ಟ್ರಸ್ಟ್ ಮಾಹಿತಿ ನೀಡಲು ನಿರಾಕರಿಸಿತು. ಈ ವೇಳೆ ಭಕ್ತರು ಹಾಗೂ ಟ್ರಸ್ಟ್ ಕಮಿಟಿ ನಡುವೆ ಗಲಾಟೆ ನಡೆದು ತೀವ್ರ ವಾಗ್ವಾದ, ಜಗಳ ಸೃಷ್ಟಿಗೆ ಕಾರಣವಾಯಿತು. ಈ ವಿಷಯ ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ.

ಭಕ್ತರ ಮನವಿ-ಆಕ್ಷೇಪವೇನು?

ಸಿದ್ಧಾರೂಢ ಸ್ವಾಮಿಗಳ ಮಠದ ಟ್ರಸ್ಟ್ ಕಮಿಟಿ ಕರೆದಿದ್ದ ಸಭೆಯಲ್ಲಿ ಭಕ್ತರು ಭಾಗಿಯಾಗಿದ್ದರು. ಈ ವೇಳೆ ಮಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಖರ್ಚುವೆಚ್ಚದ ಕುರಿತು ಪ್ರಶ್ನಿಸಿದ್ದರು, ಮನವಿ ಮಾಡಿದ್ದಾರೆ. ಕಳಪೆ ಕಾಮಗಾರಿ, ಹಣ ದುರ್ಬಳಕೆ, ಅನವಶ್ಯಕ ಕರ್ಚಿನ ಕುರಿತು ಭಕ್ತರು ಆಕ್ಷೇಪ ಹೊರಹಾಕಿದರು. ಆದರೆ ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿ ಭಕ್ತರಿಗೆ ಉತ್ತರ ನೀಡಲು ನಿರಾಕರಿಸಿತು. ಟ್ರಸ್ಟ್ ಕಮಿಟಿ ಅಧ್ಯಕ್ಷರು ಮತ್ತು ಧರ್ಮದರ್ಶಿಗಳ ನಡೆಗೆ ಭಕ್ತರು ಆಕ್ರೋಶ ಹೊರ ಹಾಕಿದ್ದು ಸಭೆಯಲ್ಲಿ ಪರಸ್ಪರ ವಾಗ್ವಾದ, ಗದ್ದಲ ಸೃಷ್ಟಿಯಾಯಿತು.

Hubballi Shri Siddharoodha Math Trustee and Devotees between A Fight for Expenses of mutt

ಮಾತಿನ ಚಕಮಕಿ ಹೆಚ್ಚಾಗುತ್ತಿದ್ದಂತೆ ಮಠದ ಟ್ರಸ್ಟ್ ಕಮಿಟಿ ಸಭೆ ರದ್ದುಪಡಿಸಿತು. ಸಭೆ ಮಾಡುವುದಿಲ್ಲ ಏನು ಮಾಡುತ್ತಿರೋ ಮಾಡಿಕೊಳ್ಳಿ ಎಂದು ಮಠದ ಧರ್ಮದರ್ಶಿ ಅವಾಜ್ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎರಡು ದಿನದಲ್ಲಿ ಸಭೆ ನಡೆಸಿ ಭಕ್ತರ ಪ್ರಶ್ನೆಗೆ ಉತ್ತರ ಕೊಡಬೇಕು. ಕೊಡದಿದ್ದರೆ ಮಠದ ಎದುರು ಸತ್ಯಾಗ್ರಹ ಮಾಡುವುದಾಗಿ ಭಕ್ತರು ಎಚ್ಚರಿಕೆ ಕೊಟ್ಟರು.

ನಾಡಿಗೆ ಮಾದರಿಯಾದ ಶ್ರೀಮಠದಲ್ಲಿ ಭ್ರಷ್ಟಾಚಾರದ ವಾಸನೆ

ಶ್ರೀ ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ. ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ. ಎಂಬ ಭಕ್ತರ ಜಯಘೋಷಗಳು ನಾಡಿಗೆ ಮಾದರಿಯಾಗಿವೆ. ಬೀದರ್‌ ಜಿಲ್ಲೆಯ ಚಳಕಾಪುರದಲ್ಲಿ 1836ರ ಮಾರ್ಚ್ 26 ರಂದು ಜನಿಸಿದ ಸಿದ್ಧಾರೂಢ ಸ್ವಾಮೀಜಿ ಅವರು ಚಿಕ್ಕಂದಿನಲ್ಲಿ ಸಿದ್ಧ ಎಂದು ಅವರನ್ನು ಕರೆಯಲಾಗುತ್ತಿತ್ತು. ಮನೆ ಬಿಟ್ಟು ಲೋಕಸಂಚಾರ ಆರಂಭಿಸಿದ ಅವರು, ಎಷ್ಟೋ ಜನರ ಸಂಕಷ್ಟಗಳನ್ನು ಪವಾಡಗಳ ಮೂಲಕ ಪರಿಹರಿಸಿದ ದೈವಿ ಪುರುಷರು.

ಈ ಸಿದ್ಧರೂಢರು ತಮ್ಮ 41ನೇ ವಯಸ್ಸಿನಲ್ಲಿ (1877ರಲ್ಲಿ) ಹುಬ್ಬಳ್ಳಿಗೆ ಬಂದು ನೆಲೆನಿಂತರು. ಅನೇಕ ಪವಾಡಗಳನ್ನು ಮಾಡಿದ ಅವರು 1929ರ ಆಗಸ್ಟ್‌ 21ರಂದು ಲಿಂಗೈಕ್ಯರಾದರು. ಇವರ ನಿಧನ ಸುದ್ದಿ ತಿಳಿದು ಮಹಾತ್ಮಾ ಗಾಂಧೀಜಿಯವರು, ಬಾಲಗಂಗಾಧರ ತಿಲಕ ಅವರು ಭೇಟಿ ಕೊಟ್ಟಿದ್ದರು.

1918 ಬಾಲಗಂಗಾಧರ ತಿಲಕ 1924ರಲ್ಲಿ ಮಹಾತ್ಮ ಗಾಂಧಿ ಅವರು ಹುಬ್ಬಳ್ಳಿಗೆ ಬಂದಾಗ ಸಿದ್ಧಾರೂಢರನ್ನು ಭೇಟಿಯಾಗಿದ್ದರು. ಅಸ್ಪೃಶ್ಯರೊಂದಿಗೆ ಊಟಕ್ಕೆ ಕುಳಿತಿದ್ದ ಸಿದ್ಧಾರೂಢರನ್ನು ಕಂಡು ಮಹತ್ಮಾ ಗಾಂಧೀಜಿ ಮೂಕವಿಸ್ಮಿತರಾಗಿದ್ದರು. ಹಿಂದು ಮುಸ್ಲಿಮ್ ಎನ್ನದೇ ಮತ ಪಂಥ ಎನ್ನದೇ ನಾಡಿಗೆ ಮಾದರಿಯಾಗಿದ್ದ ಮಠದಲ್ಲಿ ಈಗ ಭ್ರಷ್ಟಾಚಾರದ ವಾಸನೆ ಆಡುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಇದು ಇಲ್ಲಿಗೆ ಕೊನೆಗೊಳ್ಳುತ್ತದೆಯೋ? ಮುಂದುವರಿಯಲಿದೆಯೋ? ಎಂಬುದರ ಬಗ್ಗೆ ಅಪಾರ ಭಕ್ತರು, ನಾಡಿನ ಜನರು ಕುತೂಹಲದಿಂದ ನೋಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+