ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಣಕು ಶವಯಾತ್ರೆ ಮೂಲಕ ಪ್ರಧಾನಿ ವಿರುದ್ಧ ಕನ್ನಡ ಪರ ಸಂಘಟನೆಗಳ ಆಕ್ರೋಶ

By Sachhidananda Acharya
|
Google Oneindia Kannada News

ಹುಬ್ಬಳ್ಳಿ ಜನವರಿ 25: ಮಹಾದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಕರೆ ನೀಡಿರುವ ಕರ್ನಾಟಕ ಬಂದ್ ನಲ್ಲಿ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಹುಬ್ಬಳ್ಳಿ ಬಸ್ ಡಿಪೋದಲ್ಲಿ ಕನ್ನಡ ಪರ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅಣಕು ಶವಯಾತ್ರೆ ಮಾಡಿದರು. ನಂತರ ಪ್ರಧಾನಿ ಪ್ರತಿಕೃತಿಗೆ ಬೆಂಕಿ ಹಚ್ಚಿ ತಮ್ಮ ಸಿಟ್ಟು ಹೊರ ಹಾಕಿದರು.

Recommended Video

ಮಹದಾಯಿಗಾಗಿ ಕರ್ನಾಟಕ ಬಂದ್ | ಹುಬ್ಬಳ್ಳಿಯಲ್ಲಿ ಬಂದ್ ಬಿಸಿ ಜೋರು | Oneindia Kannada

LIVE: ಕರ್ನಾಟಕ ಬಂದ್: ಸದ್ಯಕ್ಕೆ ಓಲಾ, ಊಬರ್ ಕ್ಯಾಬ್ ಸೇವೆ ಲಭ್ಯLIVE: ಕರ್ನಾಟಕ ಬಂದ್: ಸದ್ಯಕ್ಕೆ ಓಲಾ, ಊಬರ್ ಕ್ಯಾಬ್ ಸೇವೆ ಲಭ್ಯ

ಈ ವೇಳೆ ಪ್ರಧಾನಿಯನ್ನು ಚಾಯ್ ವಾಲಾ ಎಂದು ಜರೆದ ಪ್ರತಿಭಟನಾಕಾರರು, 'ನೀವು ಚಹಾ ಮಾರಲು ಲೇಸು ದೇಶ ನಡೆಸೋಕಲ್ಲ' ಎಂದು ಚಹಾ ವಿತರಣೆ ಮಾಡಿ ವಿಡಂಬನೆ ಮಾಡಿದ್ದಾರೆ.

ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್

Hubballi: Pro Kannada organisations shows outrage against 'Chai Wala Prime Minister'


'ನಾವು ನೀರು ಕೇಳಿದ್ದೆವು. ಆದರೆ ನೀವು ಮಾಡಿದ್ದು ಏನು?'... 'ಚಹಾವೂ ನಮ್ಮದೇ, ನೀರು ನಮ್ಮದೇ'.. ಎಂದು ಪ್ರತಿಭಟಕಾರರು ಘೋಷಣೆ ಕೂಗಿದರು. ಪ್ರಧಾನಿ, ಅಮಿತ್ ಶಾ, ಯಡಿಯೂರಪ್ಪ, ಪ್ರಹ್ಲಾದ್ ಜೋಷಿ, ಅನಂತ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಇದೇ ವೇಳೆ ಕನ್ನಡ ಕಾರ್ಯಕರ್ತರು ಧಿಕ್ಕಾರ ಕೂಗಿದರು.

ಇನ್ನು ಚನ್ನಪಟ್ಟಣದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮತ್ತು ಅಲ್ಲಿನ ಜಲಸಂಪನ್ಮೂಲ ಸಚಿವರ ಅಣಕು ಶವಯಾತ್ರೆ ನಡೆಸಲಾಯಿತು.

English summary
The Karnataka Bandh has been called on to demand that Prime Minister Narendra Modi intervene in the Mahadayi river water dispute. PM Modi is outraged at the protest in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X