ಹುಬ್ಬಳ್ಳಿಯ ಐಟಿಐ ಕಾಲೇಜಿನಲ್ಲಿ ಸಾಮೂಹಿಕ ನಕಲು?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 27: ಸ್ಥಳೀಯ ಧಾರವಾಡ ರಸ್ತೆಯ ಉಣಕಲ್ ಕ್ರಾಸ್ ನಲ್ಲಿರುವ ಸರಕಾರಿ ಐಟಿಐ ಕಾಲೇಜಿನಲ್ಲಿ ಪರೀಕ್ಷೆಯೊಂದಕ್ಕೆ ಸಾಮೂಹಿಕ ನಕಲು ಮಾಡಿರುವ ಪ್ರಕರಣ ಶನಿವಾರ ವರದಿಯಾಗಿದೆ.

ಉಣಕ್ರಾಸ್ ನ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಐಟಿಐ ಕಾಲೇಜ್ ಗೆ ಕೆಳಗೇನೆ ರಾಷ್ಟ್ರೀಯ ಇಂಗ್ಲೀಷ್ ದೈನಿಕ ಪತ್ರಿಕೆಯೊಂದರ ಕಚೇರಿಯಿದೆ. ಇಷ್ಟಿದ್ದರೂ ಐಟಿಐ ಸಿಬ್ಬಂದಿ ಸಾಮೂಹಿಕ ನಕಲಿಗೆ ಅವಕಾಶ ನೀಡಿದ್ದು ವಿಚಿತ್ರ.[ಅಂತಾರಾಷ್ಟ್ರೀಯ ಮನ್ನಣೆ ಪಡೆದ ಈ ಫೋಟೋ ತೆಗೆದವ ಯಾರು?]

hubballi

ಸಾಮೂಹಿಕ ನಕಲಿನ ವಿಷಯ ತಿಳಿದೊಡನೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಟಿವಿ ವಾಹಿನಿಯೊಂದರ ಕ್ಯಾಮರಾ ನೋಡಿ ವಿದ್ಯಾರ್ಥಿಗಳು ಮತ್ತು ಕಾಲೇಜ್ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ನಕಲು ನಡದೇ ಇಲ್ಲ ಎಂದು ಸಮಜಾಯಿಸಿ ನೀಡಲಾರಂಭಿಸಿದ್ದಾರೆ.

ನಂತರ ನಕಲಿನ ಕುರಿತು ಚಿತ್ರೀಕರಣ ಮಾಡುತ್ತಿದ್ದಂತೆಯೇ ಕೂಡಲೇ ಪರೀಕ್ಷೆಯನ್ನು ನಿಲ್ಲಿಸಿ ನಕಲಿಗೆ ಬಳಸಿದ ಚೀಟಿಗಳನ್ನು ಹೊರಗೆಸೆದಿದ್ದಾರೆ. ಸಾಮೂಹಿಕ ನಕಲಿನ ಕುರಿತು ಯಾವುದೇ ದೂರು ದಾಖಲಾಗಿಲ್ಲ.[ಆ.28ಕ್ಕೆ ಕೇಂದ್ರ ಸಚಿವರಿಂದ ಧಾರವಾಡ ಐಐಟಿ ಉದ್ಘಾಟನೆ]

ಶನಿವಾರ ಐಟಿಐ 2ನೇ ವರ್ಷದ ವಿದ್ಯಾರ್ಥಿಗಳಿಗೆ ಎಜಿನೀಯರಿಂಗ್ ಡ್ರಾಯಿಂಗ್ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿತ್ತು.ಈ ಪರೀಕ್ಷೆಯಲ್ಲಿಯೇ ಎಲ್ಲರಿಗೂ ನಕಲು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಗೊತ್ತಾಗಿದೆ.

ಸ್ವತಃ ಕಾಲೇಜ್ ಪ್ರಿನ್ಸಿಪಲ್ ಜಿ.ಆರ್.ಘೋಡಕೆ ಮತ್ತು ಉಪನ್ಯಾಸಕರು ಒಂದು ಸಬ್ಜೆಕ್ಟ್ ಗೆ 5 ಸಾವಿರ ರೂ. ತೆಗೆದುಕೊಂಡು ನಕಲಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ ಎಂದು ಕೆಲ ವಿದ್ಯಾರ್ಥಿಗಳು ದೂರಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ನೀಡಿ ಒಂದೇ ಸ್ಥಳದಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಪ್ರತಿ ವರ್ಷವೂ ಇದೇ ತರಹ ಪರೀಕ್ಷೆ ನಡೆಸಲಾಗುತ್ತಿದೆ ಎನ್ನಲಾಗಿದೆ.[ಹುಬ್ಬಳ್ಳಿ-ಧಾರವಾಡದಲ್ಲೇ ಬೀಡು ಬಿಟ್ಟಿರುವ ಮನೆಗಳ್ಳರು]

ಆದರೆ, ನಕಲು ಕುರಿತು ಕಾಲೇಜ್ ಪ್ರಿನ್ಸಿಪಾಲ್ ಜಿ.ಆರ್ ಘೋಡಕೆ ಮಾತ್ರ ಕಾಲೇಜಿನಲ್ಲಿ ಸ್ಥಳಾವಕಾಶದ ಕೊರತೆಯಿರುವುದರಿಂದ ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಕೂಡಸಿ ಪರೀಕ್ಷೆ ಬರೆಸಲಾಗಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: Second year ITI students of Government ITI College Unakal Cross Hubballi who allegedly resorted to mass copying, were caught on Saturday by Media People.
Please Wait while comments are loading...