ಹುಬ್ಬಳ್ಳಿ: ರೈಲಿನಲ್ಲಿಯೇ ಅಯ್ಯಪ್ಪನ ಹಾಡಿಗೆ ಭರತನಾಟ್ಯ ಮಾಡಿದ ಬಾಲಕಿ, ವಿಡಿಯೋ ವೈರಲ್
ಹುಬ್ಬಳ್ಳಿ, ಜನವರಿ, 13: ಶಬರಿಮಲೆ ಯಾತ್ರೆಗೆ ಹೋಗುತ್ತಿದ್ದ ಮಾಲಾದಾರಿಗಳಲ್ಲಿ ಬಾಲಕಿಯೊಬ್ಬಳು ಅಯ್ಯಪ್ಪನ ಹಾಡಿಗೆ ರೈಲಿನಲ್ಲೇ ಭರತನಾಟ್ಯ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಬ್ಬಳ್ಳಿಯ ಶಿರೂರ ಪಾರ್ಕ್‌ನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಅಯ್ಯಪ್ಪ ಮಾಲಾದಾರಿಗಳು ಶಬರಿ ಯಾತ್ರೆಗೆ ತೆರೆಳಿದ್ದಾರೆ. ಅದರಲ್ಲಿಯೂ ಹುಬ್ಬಳ್ಳಿಯ ನಿವಾಸಿ ಯಲ್ಲಪ್ಪ ಭೂಸನೂರ ಅವರ ಮಗಳು ಅಪೂರ್ವ ಎಂಬ ಬಾಲಕಿ ರೈಲಿನಲ್ಲಿ ಪ್ರಯಾಣ ಆರಂಭಿಸಿದ್ದಾರೆ. ಅಯ್ಯಪ್ಪ ಮಾಲೆ ಹಾಕಿದ ಈ ಬಾಲಕಿ ಶ್ರೀ ಅಯ್ಯಪ್ಪರ ಇರುಮುಡಿ ಕಟ್ಟು ಶಬರಿಮಲಲೈಕಿ ಎಂಬ ಹಾಡಿಗೆ ಭರತನಾಟ್ಯ ಮಾಡಿದ್ದಾಳೆ. ಬಾಲಕಿ ಭಾರತ ನಾಟ್ಯ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.ಹುಬ್ಬಳ್ಳಿ ಜನವರಿ 13: ರಾಷ್ಟ್ರೀಯ ಪ್ರಧಾನಿ ಮೋದಿ ಅವರ ಬಳಿ ಬಂದ ಬಾಲಕ ಯಾರು..? ಪೊಲೀಸರನ್ನು ದಾಟಿ ಆತ ಪ್ರಧಾನಿಗಳ ಬಳಿ ಬಂದಿರುವುದು ಯಾಕೆ ಎನ್ನುವ ಪ್ರಶ್ನೆಗೆ ಸ್ವತಃ ಬಾಲಕನೇ ಉತ್ತರಿಸಿದ್ದಾನೆ.
ಹಾರ ಹಾಕಲು ಬಂದಿದ್ದ ಬಾಲಕ ಹೇಳಿದ್ದೇನು?
ಯುವಜನೋತ್ಸವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೇ ಬಾಲಕನೊಬ್ಬ ಬ್ಯಾರಿಕೇಡ್ ದಾಟಿ ಪ್ರಧಾನ ಮಂತ್ರಿಗೆ ಹೂವಿನ ಹಾರ ಹಾಕಲು ಓಡಿ ಬಂದ ಘಟನೆ ನಡೆದಿದೆ. ಪ್ರಧಾನಿಗಳಿಗೆ ಹಾರ ಹಾಕಲು ಹೊರಟ ಬಾಲಕ ಕುನಾಲ್ ಧೋಂಗಡಿ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾನೆ. ನನಗೆ ಪ್ರಧಾನಿ ಮೋದಿ ಅಂದರೆ ಬಹಳ ಪ್ರೀತಿ. ಈ ಹಿನ್ನೆಲೆ ಪ್ರಧಾನಿ ಮೋದಿಗೆ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳನ್ನು ನೋಡಬೇಕೆಂಬ ಆಸೆ ಇತ್ತು ಎಂದು ತಿಳಿಸಿದ್ದಾನೆ.

ಸಂತಸ ವ್ಯಕ್ತಪಡಿಸಿದ ಬಾಲಕ
ನನಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನಷ್ಟು ಹತ್ತಿರದಿಂದ ನೋಡಬೇಕು ಹಾಗೂ ಅವರನ್ನು ಮನೆಗೆ ಕರೆಯಬೇಕು ಎನ್ನುವ ಆಸೆ ಇತ್ತು. ಅವರ ಭಾಷಣಕ್ಕೆ ನಾನು ಮನಸೋತಿದ್ದೇನೆ. ನನಗೆ ಪ್ರಧಾನಿ ನರೇಂದ್ರ ಮೋದಿ ಅವರೆಂದರೆ ಬಹಳ ಪ್ರೀತಿ. ಪ್ರಧಾನಿಗಳಿಗೆ ಹಾರ ತೊಡಿಸಬೇಕು ಎಂದುಕೊಂಡಿದ್ದೆವು ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾನೇ ಹಾರ ಹಾಕಬೇಕೆಂದು ಹೋಗಿದ್ದೆ. ಪ್ರಧಾನಿಗಳಿಗೆ ಶೇಕ್ ಹ್ಯಾಂಡ್ ಮಾಡಬೇಕೆಂಬ ಆಸೆ ಇತ್ತು, ಆದರೆ ಪೊಲೀಸರು ನನ್ನನ್ನು ತಡೆದರು ಎಂದು ಹೇಳಿದ್ದಾನೆ. ನಾನು ಅವರನ್ನು ಭೇಟಿ ಆಗಬೇಕು, ಹತ್ತಿರದಿಂದ ನೋಡಬೇಕೆಂದು ಆಸೆ ಇತ್ತು. ಮೋದಿ ಮನುಷ್ಯರಲ್ಲ, ಅವರು ದೇವರು. ಹಾಗಾಗಿ ನಾನು ಅವರನ್ನು ನೊಡುವುದಕ್ಕೆ ಹೋಗಿದ್ದೆ. ನನಗೆ ಅವರ ಎಡಗೈ ಟಚ್ ಆಗಿದೆ. ನನ್ನ ಕೈಯಿಂದ ಹಾರ ತೆಗೆದುಕೊಂಡರು ಎಂದು ಬಹಳ ಸಂತಸ ವ್ಯಕ್ತಪಡಿಸಿದ್ದಾನೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications