ಹುಬ್ಬಳ್ಳಿಯ ಮಾಜಿ ಕೆಸಿಸಿಐ ಚೇರ್ಮನ್ ಮದನ ದೇಸಾಯಿ ವಿಧಿವಶ

Posted By:
Subscribe to Oneindia Kannada

ಬೆಂಗಳೂರು, ಮೇ 14 : ಕಳೆದ ಒಂದು ವಾರ ಹಿಂದೆ ಕೊಯಮತ್ತೂರಿನಲ್ಲಿ ಅಸ್ವಸ್ಥರಾಗಿ ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ದೇಸಾಯಿ ಅಂಡ್ ಕಂಪನಿ ನಿರ್ದೇಶಕ ಹಾಗೂ ಖ್ಯಾತ ಉದ್ಯಮಿ ಹುಬ್ಬಳ್ಳಿ ಮೂಲದ ಮದನ ಬಿ. ದೇಸಾಯಿ (72) ಅವರು ಶನಿವಾರ ಮಧ್ಯರಾತ್ರಿ ನಿಧನರಾಗಿದ್ದಾರೆ.

ಕುಟುಂಬದ ಸಮರಂಭವೊಂದರಲ್ಲಿ ಪಾಲ್ಗೊಳ್ಳಲು ವಾರದ ಹಿಂದೆ ಮದನ ಬಿ. ದೇಸಾಯಿ ಅವರು ಕೊಯಮತ್ತೂರಿಗೆ ತೆರಳಿದ್ದರು. ಆದರೆ, ಅವರ ಆರೋಗ್ಯದಲ್ಲಿ ಏರುಪೇರಾಗಿ ಅಲ್ಲಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ದುರದೃಷ್ಟ ಶನಿವಾರ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Hubballi Former KCCI chairman Madan Desai Passes passed away in Coimbatore

ಮದನ ಬಿ. ದೇಸಾಯಿ ಅವರು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕರ್ಣಾಟಕ ಬ್ಯಾಂಕ್ ಸೇರಿ ಹಲವು ಸ್ಥಳೀಯ ಬ್ಯಾಂಕ್ ಗಳ ನಿರ್ದೇಶದಕರಾಗಿದ್ದರು.

ಹಾಗೂ ಲಯನ್ಸ್ ಕ್ಲಬ್ ಗವರ್ನರ್ ಆಗಿ ಹಲವು ಶೈಕ್ಷಣಿಕ-ಸಾಮಾಜಿಕ ಸಂಸ್ಥೆಗಳಲ್ಲಿ ಸೇವೆಸಲ್ಲಿಸಿದ್ದಾರೆ. ಇನ್ನು ಇವರು ವಿಆರ್ ಎಲ್ ಮೀಡಿಯಾ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One of the famous businessman and former Chamber of Commerce and Industry (KCCI) chairman of Hubballi Madan B. Desai died in Coimbatore on May 13 late night.
Please Wait while comments are loading...