ಸೆನ್ಸೇಷನಲ್ ಶೂಟ್‌ಔಟ್ ಪ್ರಕರಣಕ್ಕೆ ಕೋರ್ಟ್ ಮರುಜೀವ

Written By: Basavaraj
Subscribe to Oneindia Kannada

ಹುಬ್ಬಳ್ಳಿ, ಜುಲೈ 22 : ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್)ನ ಸೂಪರಿಟೆಂಡೆಂಟ್ ಆಗಿದ್ದ ಡಾ.ಶಿವಾನಂದ ದೊಡ್ಡಮನಿ ಅವರ ಹತ್ಯೆ ಯತ್ನ ಪ್ರಕರಣಕ್ಕೆ 2ನೇ ಜೆಎಂಎಫ್‌ಸಿ ನ್ಯಾಯಾಲಯ ಮರುಜೀವ ನೀಡಿದೆ.

ಅವರನ್ನು ಹತ್ಯೆ ಮಾಡಲು ಹಿಂದಿನ ನಿರ್ದೇಶಕರಾಗಿದ್ದ ಡಾ.ಎಂ.ಜಿ. ಹಿರೇಮಠ, ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಅವರು ಪ್ರಯತ್ನ ಪಟ್ಟಿದ್ದರು ಎಂದು ಹೇಳಿರುವ ನ್ಯಾಯಾಲಯ ಮುಗಿದು ಹೋಗಿದ್ದ ಪ್ರಕರಣಕ್ಕೆ ಮರುಜೀವ ಕೊಟ್ಟಿದೆ.

ಸ್ಕೋತೋ ಸ್ಕೋಪ್ ಹಿಡಿಯಬೇಕಿದ್ದ ಕೈಯಲ್ಲಿ ಕನ್ನಡ ಬಾವುಟ

ಆರೋಪಿಗಳ ಮೇಲಿನ ಆರೋಪವನ್ನು ಪುಷ್ಟೀಕರಿಸಲು ಸಾಕಷ್ಟು ಪುರಾವೆಗಳಿವೆ ಎಂದೂ ಹೇಳಿರುವ ನ್ಯಾಯಾಲಯ, ಇವರ ವಿರುದ್ಧ ಐಪಿಸಿ ಸೆಕ್ಷೆನ್ 307, 120(ಬಿ) ಹಾಗೂ 114ರ ಅಡಿ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದ್ದು, ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

Hubballi Court reopens sensational KIMS shootout case

ಈ ಮೂಲಕ ಇಡೀ ಉತ್ತರ ಕರ್ನಾಟವನ್ನೇ ತಲ್ಲಣಗೊಳಿಸಿದ್ದ ಕಿಮ್ಸ್ ಶೂಟೌಟ್ ಪ್ರಕರಣ ಮತ್ತೆ ಸುದ್ದಿಗೆ ಬಂದಿದೆ. ಆದರೆ, ಮೂವರು ಆರೋಪಿಗಳ ಪೈಕಿ ವಿಶ್ವಪ್ರಕಾಶ್ ಉಳ್ಳಾಗಡ್ಡಿಮಠ ಮೂರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ ಬಂಗಾರೇಶ ಹಿರೇಮಠ ಹಾಗೂ ಶ್ಯಾಂ ಜಾಧವ ವಿರುದ್ಧ ಪೂರಕ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಕೈ ಬಿಡಲಾಗಿದೆ.

ಹುಬ್ಬಳ್ಳಿ ಕಿಮ್ಸ್ ನಲ್ಲಿ ಪಾರ್ಕಿಂಗ್ ನಿರ್ವಹಣೆ ಬೇಕಿತ್ತಾ?

ಪ್ರಕರಣದ ಹಿನ್ನೆಲೆ

ಕಿಮ್ಸ್ ಸೂಪರಿಟೆಂಡೆಂಟ್ ಡಾ.ಶಿವಾನಂದ ದೊಡ್ಡಮನಿ ಅವರ ಮೇಲೆ 2007ರ ಡಿಸೆಂಬರ್ 10ರಂದು ರಾತ್ರಿ 10.45ರ ಸುಮಾರಿಗೆ ಕಿಮ್ಸ್ ಆವರಣದದ ದೊಡ್ಡಮನಿ ಅವರ ವಸತಿ ಗೃಹಕ್ಕೆ ಬಂದ ಅಪರಿಚತರಿಬ್ಬರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಡಾ. ಶಿವಾನಂದ ದೊಡ್ಡಮನಿ ದೀರ್ಘಕಾಲ ಚಿಕಿತ್ಸೆಯ ನಂತರ ಚೇತರಿಸಿಕೊಂಡು, ಈಗ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಆಗಿದ್ದಾರೆ.

ಈ ಪ್ರಕರಣ ಕುರಿತಂತೆ ಸಿಒಡಿ ತನಿಖೆಯಾಗಿ, ಅಂದಿನ ಕಿಮ್ಸ್ ನಿರ್ದೇಶಕ ಡಾ. ಎಂ.ಜಿ. ಹಿರೇಮಠ, ಬಂಗಾರೇಶ ಹಿರೇಮಠ, ವಿಶ್ವಪ್ರಕಾಶ ಉಳ್ಳಾಗಡ್ಡಿಮಠ, ವಿಜಯ ಕುಲಕರ್ಣಿ ಅವರನ್ನು ಪೊಲೀಸರು ಬಂಧಿಸಿದ್ದರು.

ಆದರೆ, ಸಿಒಡಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸರು ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿತ್ತು. ಅಲ್ಲದೇ ದೋಷಾರೋಪ ಪಟ್ಟಿ ಸಲ್ಲಿಸುವ ವೇಳೆ ಎಲ್ಲರ ಮೇಲೆ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಡಾ. ಶಿವಾನಂದ ದೊಡ್ಡಮನಿ ಅವರ ಪತ್ನಿ ಚಂದನ ರಾಣಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ದೀರ್ಘ ವಿಚಾರಣೆ, ವಾದ ಹಾಗೂ ಪ್ರತಿವಾದದ ಬಳಿಕ ಮೂಲಕ ಶಿವಾನಂದ ದೊಡ್ಡಮನಿ ಹತ್ಯೆಗೆ ಷಡ್ಯಂತ್ರ ನಡೆಸಿದ್ದಾರೆ ಎಂಬುದಕ್ಕೆ ಪೂರಕ ಪ್ರಾಥಮಿಕ ಸಾಕ್ಷಿಗಳಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ಮೂವರ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi 2nd JMFC court has reopened of KIMS shootout incident again and issued non-bailable warrant against accused who were involved in this incident. Accused KIMS former director Dr M G Hiremath, Vishwaprakash Ullagaddimath and Vijay Kulkarni alleged to have made an murder attempt on Dr Shivananda Doddamani.
Please Wait while comments are loading...