ಹುಬ್ಬಳ್ಳಿಯ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿನ ವೆಬ್‌ಸೈಟ್ ಹ್ಯಾಕ್
ಹುಬ್ಬಳ್ಳಿ, ಜೂನ್ 22 : ಇಲ್ಲಿನ ನವ ಅಯೋಧ್ಯನಗರದ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿನ ವೆಬ್ ಸೈಟ್ ಅನ್ನು ಗುರುವಾರ ಹ್ಯಾಕ್ ಮಾಡಲಾಗಿದೆ.
ಕಾಲೇಜಿನ ವೆಬ್ ಸೈಟ್ ನ್ನು ತೆರೆದು ನೋಡಿದಾಗ ದುಷ್ಕರ್ಮಿಗಳು ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. 'ಗೋ ಮೋದಿ ಗೋ' ಅಲ್ಲದೆ 'ಫ್ರೀ ಕಾಶ್ಮಿರ್ ಫ್ರೀಡಮ್ ಅವರ್ ಗೋಲ್' ಎಂಬ ಸಂದೇಶವನ್ನು ವೆಬ್ ಸೈಟ್ ನಲ್ಲಿ ಹಾಕಿದ್ದಾರೆ.

'ಹ್ಯಾಕ್ಡ್ ಬೈ ಎಸ್ ಹೆಚ್11' ಎಂದು ವೆಬ್ ಸೈಟ್ ನಲ್ಲಿ ಬರೆಯಲಾಗಿದೆ. ಈ ಸಂಬಂಧ ಕಾಲೇಜಿನ ಆಡಳಿತ ಮಂಡಳಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಲ್ಪಸಂಖ್ಯಾತ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ : ಹುಬ್ಬಳ್ಳಿ ಶಹರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, 2017-18ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ.












Click it and Unblock the Notifications