ಜೂನ್‌ನಲ್ಲಿ ಬೈಕ್ ಮಾರಾಟ ನೆಗೆದುಬಿತ್ತು, ಕಾರುಗಳು ಭಾರೀ ಸೇಲ್!

ಹುಬ್ಬಳ್ಳಿ, ಜುಲೈ 1: ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ಬಂದ ನಂತರ ಕಾರುಗಳ ಬೆಲೆ ಏರಿಕೆಯಾಗುತ್ತದೆ ಎಂಬ ಆತಂಕದಿಂದ ಜೂನ್ ಮೂವತ್ತರವರೆಗೂ ಕಾರು ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು.

ಜಿಎಸ್ ಟಿ ಕುರಿತಾದ ಊಹಾಪೋಹಗಳು ಗ್ರಾಹಕರನ್ನು ಕಾರು ಖರೀದಿಸಲು ಪ್ರೇರೇಪಿಸಿದ್ದು, ಹುಬ್ಬಳ್ಳಿಯ ಬಹುತೇಕ ಕಾರ್ ಶೋ ರೂಮ್ ಗಳು ಜೂನ್ ನಲ್ಲಿ ದುಪ್ಪಟ್ಟು ವಹಿವಾಟು ನಡೆಸಿವೆ. ಅದರಲ್ಲೂ ಮುಖ್ಯವಾಗಿ ಐದು ಲಕ್ಷದ ಒಳಗಿನ ಸಣ್ಣ ಕಾರುಗಳು ಮಾರಾಟದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.

GST effect: Car Showrooms received good response in June

ಹತ್ತು ಲಕ್ಷಕ್ಕೂ ಮೇಲ್ಪಟ್ಟ ಐಷಾರಾಮಿ ಕಾರುಗಳ ಖರೀದಿ ಎಂದಿನಂತೆ ನಡೆದಿದೆ. 'ಜೂನ್ ತಿಂಗಳಲ್ಲಿ ಅತಿ ಹೆಚ್ಚು ಕಾರುಗಳು ಮಾರಾಟವಾಗಿದ್ದು, ಮಧ್ಯಮ ವರ್ಗದ ಜನರು ಸಣ್ಣ ಕಾರುಗಳ ಖರೀದಿಗೆ ಆಸಕ್ತಿ ವಹಿಸಿದ್ದರು. ಜಿಎಸ್ ಟಿ ಜಾರಿ ಪರಿಣಾಮ ಹತ್ತರಿಂದ ಹದಿನೈದು ಸಾವಿರ ಹಣ ಉಳಿಸುವ ಉದ್ದೇಶದಿಂದ ಈ ವಹಿವಾಟಿನಲ್ಲಿ ಹೆಚ್ಚಳವಾಗಿದೆ' ಎಂದು ಕಾರು ಶೋ ರೂಮ್ ನ ಮಾರಾಟ ಪ್ರತಿನಿಧಿಯೊಬ್ಬರು ತಿಳಿಸಿದರು.

ಬೈಕ್ ಮಾರಾಟದಲ್ಲಿ ಗಣನೀಯ ಕುಸಿತ
ಇನ್ನೊಂದೆಡೆ ಜುಲೈ ಒಂದರಿಂದ ಜಾರಿಯಾಗಿರುವ ನೂತನ ತೆರಿಗೆ ವ್ಯವಸ್ಥೆಯಿಂದ ದರ ಕಡಿತದ ನಿರೀಕ್ಷೆಯಲ್ಲಿದ್ದ ಗ್ರಾಹಕರು ದ್ವಿಚಕ್ರ ವಾಹನ ಖರೀದಿಗೆ ನಿರಾಸಕ್ತಿ ತೋರಿದ್ದರು. ಒಂದು ಲಕ್ಷದವರೆಗಿನ ಬೈಕ್ ಖರೀದಿಸಿದರೆ ಈಗ ಸಾವಿರದ ಐನೂರುವರೆಗೆ ಉಳಿತಾಯವಾಗಲಿದೆ.

ಈ ಕಾರಣಕ್ಕೆ ಗ್ರಾಹಕರು ಬೈಕ್ ಖರೀದಿಯನ್ನು ಜಿಎಸ್ ಟಿ ಜಾರಿ ನಂತರ ನಡೆಸಲು ತೀರ್ಮಾಸಿದ್ದರಿಂದ ಬೈಕ್ ಮಾರುಕಟ್ಟೆಗೆ ಜೂನ್ ತಿಂಗಳಲ್ಲಿ ತೀವ್ರ ಹೊಡೆತ ಬಿದ್ದಿದೆ ಎಂಬುದು ಬೈಕ್ ಮಾರಾಟಗಾರರ ಅಭಿಪ್ರಾಯ. ಒಟ್ಟಿನಲ್ಲಿ ಕಳೆದ ಹದಿನೈದು ದಿನಗಳಿಂದ ಭಾರೀ ನಿರೀಕ್ಷೆ ಮೂಡಿಸಿದ್ದ ಜಿಎಸ್ ಟಿ ಜಾರಿಯಾಗಿದ್ದು, ಇದರ ಪರಿಣಾಮಗಳು ಎಂಬುದನ್ನು ಜನರು ಎದುರು ನೋಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+