Get Updates
Get notified of breaking news, exclusive insights, and must-see stories!

ಬೆಂಗ್ಳೂರಿಗೆ ಬಂದೆ ಬಿಡ್ತು 12 ಲಕ್ಷ ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳ ಗಣಪ ಮೂರ್ತಿ, ತಯಾರಾಗಿದ್ದು ಎಲ್ಲಿ?, ಇಲ್ಲಿದೆ ವಿವರ

ಹುಬ್ಬಳ್ಳಿ , ಸೆಪ್ಟೆಂಬರ್‌, 17: ವಿಘ್ನ ನಿವಾರಕ ಗಣಪತಿ ಮೂರ್ತಿ ತಯಾರು ಮಾಡುವುದು ಎಂದರೆ ದೊಡ್ಡ ಸವಾಲೇ ಸರಿ. ಇದು ಬಲು ಸ್ಪರ್ಧಾತ್ಮಕ ಕಾಲ ಬೇರೆ. ಹೀಗೆ ಹುಬ್ಬಳ್ಳಿಯಲ್ಲಿ ಮೂರ್ತಿ ತಯಾರಿಕೊಬ್ಬರು 12 ಲಕ್ಷ ರೂಪಾಯಿ ಮೌಲ್ಯದ ಅಮೆರಿಕನ್​​​ ಡೈಮಂಡ್​​ ಹರಳುಗಳಿಂದ ಗಣಪತಿ ಮೂರ್ತಿಯನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಈ ಮೂರ್ತಿಯನ್ನು ಎಲ್ಲಿಗೆ ಹೊಯ್ಯಲಾಗಿದೆ, ತಯಾರಿಸಿದ್ದು ಯಾರು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಈ ಗಣಪತಿ ಮೂರ್ತಿ ಒಂದು ಸಲ ನೋಡಬೀಡಿ ಎಷ್ಟೋ ಚೆಂದ ಎಷ್ಟು ಅಂದ ನೋಡಲು ಎರಡೂ ಕಣ್ಣುಗಳು ಸಾಲದು. ಧಾರವಾಡ ಜಿಲ್ಲೆಯ ವಾಣಿಜ್ಯನಗರಿ ಹುಬ್ಬಳ್ಳಿಯ ಬಮ್ಮಾಪುರ ನಿವಾಸಿ ಮೂರ್ತಿ ಕಲಾವಿದ ಮಹೇಶ ಮುರಗೋಡ ಹಾಗೂ ತಂಡದವರು 12 ಲಕ್ಷ ರೂಪಾಯಿ ಮೌಲ್ಯದ ಅಮೆರಿಕನ್​​​ ಡೈಮಂಡ್​​ ಹರಳುಗಳಿಂದ ಗಣಪತಿ ಮೂರ್ತಿಯನ್ನು ನಿರ್ಮಿಸಿದ್ದಾರೆ. ಸದ್ಯ ಈ ಮೂರ್ತಿಯನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿದೆ .

ganesh-idol-made-of-american-diamonds

ಈ ಕುರಿತು ಕಲಾವಿದ ಮಹೇಶ ಮುರಗೋಡ ಅವರು ಮಾತನಾಡಿ, ಗಣಪತಿ ಮೂರ್ತಿ ತಯಾರು ಮಾಡಲು ಬೆಂಗಳೂರಿನವರು ಆರ್ಡರ್ ಮಾಡಿದ್ದರು. ಅದರಲ್ಲೂ 12 ಲಕ್ಷ ರೂಪಾಯಿ ಮೌಲ್ಯದ ಅಮೆರಿಕಾ ಡೈಮಂಡ್‌ ಹರಳುಗಳಿಂದ ಗಣೇಶ ಮೂರ್ತಿಯನ್ನು ತಯಾರು ಮಾಡಲಾಗಿದೆ ಎಂದರು.

ನಮ್ಮ ತಂಡವು ಕಳೆದ 10 ವರ್ಷಗಳಿಂದ ಅನೇಕ ಗಣಪತಿ ಮೂರ್ತಿ ತಯಾರು ಮಾಡಿದ್ದು, ಇಷ್ಟೊಂದು ಈ ವರ್ಷ ಮಾಡಿದ ಮೂರ್ತಿ ಮಾಡಲಿಲ್ಲ ಎನ್ನುತ್ತಾರೆ ಅಭಿಷೇಕ. ಈ ಅಮೆರಿಕನ್ ಡೈಮಂಡ್ ಮೂರ್ತಿಯನ್ನು ಬೆಂಗಳೂರಿನ ರಾಜಾಜಿನಗರ 2ನೇ ಹಂತದ ಮಿಲ್ಕ ಕಾಲೋನಿ 5ನೇ ಮುಖ್ಯ ರಸ್ತೆಯಲ್ಲಿ ಸ್ವಸ್ತಿಕ ಯುವಕರ ಸಂಘ ಸೆಪ್ಟೆಂಬರ್‌ 18 ರಂದು ಪ್ರತಿಷ್ಠಾಪನೆ ಮಾಡುತ್ತದೆ. ಈ ಗಣೇಶ ಮೂರ್ತಿ 5.7 ಅಡಿ ಎತ್ತರವಿದ್ದು, ಸುಮಾರು 150 ಕೆ.ಜಿ. ತೂಕ ಇದೆ. ಮುಖವೊಂದನ್ನು ಬಿಟ್ಟು ಇನ್ನುಳಿದ ಎಲ್ಲ ಭಾಗವನ್ನು ಅಮೆರಿಕನ್ ಡೈಮಂಡ್ ಹರಳುಗಳಿಂದ ಮಾಡಲಾಗಿದೆ.

ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನ ಸ್ವಸ್ತಿಕ ಯುವಕರ ಸಂಘ ಅಮೇರಿಕನ್ ಡೈಮಂಡ್ ಹರಳುಗಳಿಂದ ಗಣೇಶ ಮೂರ್ತಿಯನ್ನು ಹುಬ್ಬಳ್ಳಿಯಲ್ಲಿ ತಯಾರಿಸಿಕೊಂಡು, ರೈಲಿನ ಮೂಲಕ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಪ್ರತಿಷ್ಠಾಪನೆ ಮಾಡುತ್ತಾರೆ. ಅಲ್ಲದೆ ಏಳು ದಿನಗಳವರೆಗೆ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿದ್ದಾರೆ. ಅದೇ ರೀತಿ ಈ ವರ್ಷವೂ ಸಹ ಸುಮಾರು 60 ಸಾವಿರ ಅಮೆರಿಕನ್ ಡೈಮಂಡ್‌ ಹರಳುಗಳಿಂದ ಐಶ್ವರ್ಯ ಗಣೇಶ ಮಾದರಿಯಲ್ಲಿ ಮೂರ್ತಿಯನ್ನು ನಿರ್ಮಿಸಲಾಗಿದೆ. ಈ ಮೂರ್ತಿಯನ್ನು ನಗರದಿಂದ ರೈಲಿನ ಮೂಲಕ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+