ದಲಿತ ಸಿಎಂ ವಿಚಾರ, ಜಿಟಿ ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜಿ.ಪರಮೇಶ್ವರ ಹೇಳಿದ್ದೇನು?
ಹುಬ್ಬಳ್ಳಿ, ಅಕ್ಟೋಬರ್ 05: ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಸದ್ದು ಹೆಚ್ಚಾಗುವ ಮಧ್ಯೆ ದಲಿತ ಸಿಎಂ ಕುರಿತು ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ರಾಜಕಾರಣ ಮಾಡುವ ಬಗ್ಗೆ ಹೇಳಿ ಕೊಡಬೇಕಾಗಿಲ್ಲ. ನಾವು ರಾಜಕಾರಣ ಮಾಡುತ್ತೇವೆ ಎಂದು ಗುಡುಗಿರುವ ಗೃಹ ಸಚಿವ ಜಿ.ಪರಮೇಶ್ವರ ದಲಿತ ಮುಖ್ಯಮಂತ್ರಿ ಕುರಿತು ಮಾತನಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ಸಿಎಂ ರಾಜೀನಾಮೆ ಬೆನ್ನಲ್ಲೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ, ಈ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ನಾಯಕ ದೆಹಲಿ ಭೇಟಿ ವೈಯಕ್ತಿಕವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲಾಗಿದೆ. ಯಾರು ದಲಿತ ಸಿಎಂ ಆಗುತ್ತಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

ಇನ್ನೂ ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆಯವರು ರಾಜ್ಯದ ಸಿಎಂ ಆಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಈ ಕುರಿತು ಯಾವುದೇ ಮಾಹಿತಿ ನನ್ನವರೆಗೂ ಬಂದಿಲ್ಲ ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬೆಂಗಳೂರು ಭೇಟಿ, ಅವರೇ ಅಜೆಂಡಾ ಏನು, ಯಾವ ಕಾರಣಕ್ಕೆ ಬರುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಟಿಡಿ ಹೇಳಿಕೆಗೆ ಸಚಿವರು ಏನಂದ್ರು?
ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರಾ? ಈ ಬಗ್ಗೆ ಕೇಳಿದ್ದಕ್ಕೆ, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಎಫ್ಐಆರ್ ಆಗಿದ್ದು, ರಾಜೀನಾಮೆ ಕೊಡೋದರ ಬಗ್ಗೆ ಅವರು ಮಾತನಾಡಿದ್ದಾರೆ. ಎಲ್ಲರೂ ಕೊಡಬೇಕು ಎಂದು ಎಚ್‌ಡಿ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಹೇಳಿದ್ದಾರೆ. ಅಷ್ಟಕ್ಕೆ ಅವರು ಕಾಂಗ್ರೆಸ್ ಗೆ ಬರ್ತಾರೆ ಎಂದು ಏನು ಹೇಳಬೇಕು ಎಂದು ತಿಳಿಸಿದರು.

ಜಾತಿ ಗಣತಿ ಬಗ್ಗೆ ಸಂಪುಟದಲ್ಲಿ ಚರ್ಚೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಜಾತಿ ಗಣತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಸಚಿವ ಸಂಪುಟದಲ್ಲಿ ಏನು ಮಾಡಬೇಕು ಎಂದು ತೀರ್ಮಾನಿಸುತ್ತೇವೆ. ವಿಧಾನಮಂಡಲದ ಎರಡು ಸದನಗಳಲ್ಲಿ ಅದನ್ನು ಇಡಬೇಕಾಗುತ್ತದೆ. ಚರ್ಚೆ ಬಳಿಕ ರಾಜ್ಯ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೇ ಎಂಬುದರ ಮೇಲೆ ಮುಂದಿನ ನಿರ್ಧಾರಗಳು ಪ್ರಕಟಗೊಳ್ಳಲಿವೆ.
ಬಿಜೆಪಿಯಿಂದ ಸೇಡಿನ ರಾಜಕಾರಣ: ಜಿ.ಪರಮೇಶ್ವರ
ಕಾಂಗ್ರೆಸ್ ಯಾರ ಮೇಲೂ ಸೇಡಿನ ರಾಜಕಾರಣ ಮಾಡಿಲ್ಲ. ನೀವು ದೂರು ಕೊಟ್ಟರೆ ಅದರ ಮೇಲೆ ಎಫ್‌ಐಆರ್ ಹಾಕಿ ತನಿಖೆ ಮಾಡುತ್ತೇವೆ. ತನಿಖೆಯಲ್ಲಿ ಸತ್ಯಾಂಶ ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಬಿಜೆಪಿಯಿಂದ ಹೀಗೆ ಆಗದೇ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.
ಮುಡಾ ಪ್ರಕರಣವನ್ನು ಲೋಕಾಯುಕ್ತ ಪೊಲೀಸ್ರಿಗೆ ತನಿಖೆ ಕೊಡಲಾಗಿದೆ, ತನಿಖೆ ಮುಗಿಯುವವರೆಗೂ ಕಾಯಬೇಕು.
ರಾಜಕಾರಣ ಅವರು ಮಾಡಿತ್ತಿದ್ದಾರಾ? ಇಲ್ಲ ನಾವು ಮಾಡುತ್ತಿದ್ದೇವಾ ಎಂದು ಅವರು ಪ್ರಶ್ನಿಸಿದರು.
ಇನ್ನೂ ಹುಬ್ಬಳ್ಳಿ ಫ್ಲೈ ಓವರ್ ದುರಂತ ವಿಷಯ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಮುಡಾ ಹಗರಣ ಬಿಜೆಪಿ ಪಾದಯಾತ್ರೆಗೆ ಸಂಬಂಧಿಸಿದಂತೆ, ಪ್ರತಿಪಕ್ಷದಲ್ಲಿದ್ದವರು ಸರ್ಕಾರಕ್ಕೆ ಸಲಹೆ ಸೂಚನೆ ಕೊಡಬೇಕು. ಪಾಸಿಟಿವ್ ಕ್ರಿಟಿಸಿಸಮ್ ಮಾಡಬೇಕು. ಅದು ಅವರ ಕಾಯಕ. ಅದನ್ನು ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮುಡಾ: ಕೋರ್ಟ್ ನಿಂದ ತನಿಖೆಗೆ ಆದೇಶ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದೆ. ಅದನ್ನು ರಾಜಕಾರಣಕ್ಕೆ ಉಪಯೋಗಿಸುತ್ತಿದ್ದಾರೆ. ನಮಗೂ ಅವರಿಗಿಂತಲೂ ಚೆನ್ನಾಗಿ ರಾಜಕಾರಣ ಮಾಡಲು ನಮಗೂ ಬರುತ್ತದೆ ಎಂದು ಎಚ್ಚರಿಸಿದರು. ಕಾಂಗ್ರೆಸ್‌ಗೆ ಇರವೇನು ರಾಜಕಾರಣ ಹೇಳಿಕೊಡಬೇಕಿಲ್ಲ.
ಮುಡಾ ಪ್ರಕರಣದ ವಿಚಾರವಾಗಿ ಬಿಜೆಪಿ ಆರ್ ಅಶೋಕ ಅವರು ರಾಜೀನಾಮೆ ಕೊಡಲಿ, ಆಮೇಲೆ ಆ ಪ್ರಶ್ನೆ ಬರುತ್ತದೆ ಆಗ ನೋಡೋಣ ಎಂದು ತಿರುಗೇಟು ಕೊಟ್ಟಿದ್ದಾರೆ.
ಸದ್ಯ ಪಿಎಸ್ಐ ಪರೀಕ್ಷೆ ವಿಚಾರ ಕೋರ್ಟ್ ನಲ್ಲಿದೆ. ಪರೀಕ್ಷಾರ್ಥಿ ಹುಡುಗರೇ ಕೋರ್ಟ್‌ಗೆ ಹೋಗಿದ್ದಾರೆ. ಹೀಗಾಗಿ ಒಂದಷ್ಟು ಕಗ್ಗಂಟಾಗಿದೆ. ಶೀಘ್ರವೇ ಈ ಎಲ್ಲ ಸಮಸ್ಯೆಗಳು ದೂರವಾಗಲಿವೆ. ರೂಲ್ 32 ರಲ್ಲಿ ಸಬ್ ಇನ್ಸ್ಪೆಕ್ಟರ್ ಗಳಿಗೆ ಪ್ರಮೋಷನ್ ಕೊಟ್ಟಿದ್ದೇವೆ. ಆದಷ್ಟು ಬೇಗ ರಿಕ್ವೆರ್ಮೆಂಟ್ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಬೆಂಗಳೂರನ್ನು ಪಾಕಿಸ್ತಾನ್ ಮಾಡಲಾಗುತ್ತಿದೆ ಆರೋಪ ವಿಚಾರ, ಕೇಂದ್ರ ಸರ್ಕಾರದ ಬಳಿಕ ಅನೇಕ ಡಿಪಾರ್ಟ್‌ಮೆಂಟ್‌ಗಳಿವೆ. ಇದನ್ನು ಕೇಂದ್ರ ಸರ್ಕಾರದವರು ನೆನಪಿಟ್ಟುಕೊಳ್ಳಬೇಕು. ಬೆಂಗಳೂರಿಗೆ ಬಂದು ಪಾಸ್ ಪೋರ್ಟ್ ಮಾಡಿಸಿಕೊಳ್ಳುತ್ತಾರೆ ಎಂದರೆ ಸೆಂಟ್ರಲ್ ಏಜೆನ್ಸಿ ಎಲ್ಲೋ ಒಂದು ಕಡೆ ವಿಫಲವಾಗಿದೆ ಎಂದು ಅರ್ಥವಾಗುತ್ತದೆ.
ರಾಜ್ಯ ಸರ್ಕಾರದ ಗಮನಕ್ಕೆ ಬಂದ ಕೂಡಲೇ ಅವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ನಮ್ಮ ಪೊಲೀಸರು ಸಮರ್ಥರಿದ್ದಾರೆ. ಪಾಸ್‌ಪೋರ್ಟ್ ಮಾಡಿಕೊಂಡು ಓಡಾಡುತ್ತಿರುವ ಉಳಿದವರನ್ನು ಪತ್ತೆ ಮಾಡಲಾಗುವುದು ಎಂದು ಬಿಜೆಪಿಗೆ ಅವರು ತಿರುಗೇಟು ನೀಡಿದ್ದಾರೆ.












Click it and Unblock the Notifications