ಸತತ ಏಳನೇ ಬಾರಿ ರೆಟ್-ಬಕ್ಲರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಡಾ.ಶ್ರೀನಿವಾಸ್ ಜೋಶಿ
ಹುಬ್ಬಳ್ಳಿ, ಆಗಸ್ಟ್ 04: ದಾಖಲೆಯ ಧೀರ ಹುಬ್ಬಳ್ಳಿಯವರೇ ಆದ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಡಾ.ಶ್ರೀನಿವಾಸ್ ಎಂ ಜೋಶಿ ಅವರು ಮತ್ತೊಮ್ಮೆ ಹುಬ್ಬಳ್ಳಿ ನಗರ ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಅತ್ಯುತ್ತಮ ಶಸ್ತ್ರಚಿಕಿತ್ಸಾ ವಿಡಿಯೋಗಾಗಿ ಡಾ.ಶ್ರೀನಿವಾಸ್ ಎಂ ಜೋಶಿ, ಅವರು ಗೌರವಾನ್ವಿತ ರೆಟ್-ಬಕ್ಲರ್ ಪ್ರಶಸ್ತಿಯನ್ನು ಸತತ ಏಳನೇ ಬಾರಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಆಗಸ್ಟ್ 2023 ರಲ್ಲಿ ಯುಎಸ್‌ಎಯ ಸಿಯಾಟಲ್ ನಗರದಲ್ಲಿ ನಡೆದ ವಾರ್ಷಿಕ ಎಎಸ್‌ಆರ್‌ಎಸ್ ಸಮ್ಮೇಳನದಲ್ಲಿ ಡಾ.ಶ್ರೀನಿವಾಸ್ ಎಂ ಜೋಶಿ, ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಮೇರಿಕನ್ ಸೊಸೈಟಿ ಆಫ್ ರೆಟಿನಲ್ ಸ್ಪೆಷಲಿಸ್ಟ್ಸ್ (ASRS) ಜಾಗತಿಕವಾಗಿ ಗುರುತಿಸಲ್ಪಟ್ಟ ಸಂಸ್ಥೆಯಾಗಿದ್ದು, ರೆಟಿನಾದ ಶಸ್ತ್ರಚಿಕಿತ್ಸಕರನ್ನು ಒಳಗೊಂಡಿರುತ್ತದೆ.
ಎಎಸ್‌ಆರ್‌ಎಸ್ (ASRS) ಸಮ್ಮೇಳನವು ಸಂಕೀರ್ಣ ವಿಟ್ರಿಯೊ ರೆಟಿನಲ್ ಶಸ್ತ್ರಚಿಕಿತ್ಸೆಗಳಲ್ಲಿ ಇತ್ತೀಚಿನ ಪ್ರಗತಿಗಳ ಕುರಿತ ಪ್ರದರ್ಶನಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಪಂಚದಾದ್ಯಂತದ ಹೆಸರಾಂತ ವಿಟ್ರೊ-ರೆಟಿನಲ್ ಶಸ್ತ್ರಚಿಕಿತ್ಸಕರ ಸ್ಪರ್ಧೆಯಲ್ಲಿ ಡಾ. ಶ್ರೀನಿವಾಸ್ ಎಂ ಜೋಶಿ, ಅವರ ಶಸ್ತ್ರಚಿಕಿತ್ಸಾ ವಿಡಿಯೋ, ರೆಟಿನಾದ ತೊಂದರೆಗಳಿಗೆ ಚಿಕಿತ್ಸೆ ನೀಡುವಲ್ಲಿ ಅದರ ಶ್ರೇಷ್ಠತೆ ಎದ್ದು ತಿಳಿಸುತ್ತದೆ.
ಅತ್ಯುತ್ತಮ ರೆಟಿನಲ್ ಶಸ್ತ್ರಚಿಕಿತ್ಸಾ ವಿಡಿಯೋ ಆಸ್ಕರ್ ಎಂದೇ ಸಾಮಾನ್ಯವಾಗಿ ಉಲ್ಲೇಖಿಸಲಾಗುವ, ರೆಟ್-ಬಕ್ಲರ್ ಪ್ರಶಸ್ತಿಯು ನೇತ್ರ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ಅಪಾರ ಪ್ರತಿಷ್ಠೆಯನ್ನು ಹೊಂದಿದೆ. ಡಾ. ಶ್ರೀನಿವಾಸ್ ಎಂ ಜೋಶಿಯವರ ಸತತ ಏಳನೇಯ ಗೆಲುವು ಅವರನ್ನು ದಾಖಲೆಯ ಧೀರನನ್ನಾಗಿ ಮಾಡಿ, ಹೊಸ ಇತಿಹಾಸವನ್ನು ರಚಿಸಿದೆ.
ಈ ಮೈಲಿಗಲ್ಲು ಭಾರತದ ನೇತ್ರವಿಜ್ಞಾನ ಸಮುದಾಯವನ್ನು ಸಂತೋಷ ಮತ್ತು ಹೆಮ್ಮೆಗೊಳಿಸಿದ್ದು, ವಿಟ್ರಿಯೊ-ರೆಟಿನಲ್ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ಡಾ.ಶ್ರೀನಿವಾಸ್ ಎಂ ಜೋಶಿಯವರ ಪರಿಣತಿ ಮತ್ತು ಪ್ರಾವಿಣ್ಯತೆಯನ್ನು ಎತ್ತಿ ತೋರಿಸುತ್ತದೆ.
ಈ ಬಗ್ಗೆ ಡಾ. ಶ್ರೀನಿವಾಸ್.ಎಂ ಜೋಶಿ ಮಾತನಾಡಿದ್ದು, " ಪ್ರತಿ ವರ್ಷ, ASRS ಪ್ರಪಂಚದಾದ್ಯಂತ ರೆಟಿನಾ ತಜ್ಞರ ಪ್ರತಿಭೆ, ವೀಕ್ಷಣಾ ಕೌಶಲ್ಯ, ಪ್ರಾವಿಣ್ಯತೆ ಮತ್ತು ಸೃಜನಶೀಲತೆಯನ್ನು ಎಎಸ್‌ಆರ್‌ಎಸ್ ವಿಡಿಯೋ ಮೂಲಕ ಗುರುತಿಸುತ್ತದೆ. ಆಗಸ್ಟ್ 2023ರಲ್ಲಿ ಸಿಯಾಟಲ್ ನಗರದಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ, ಈ ಅದ್ಭುತವಾದ 8-ಪೌಂಡ್, 24-ಕ್ಯಾರೆಟ್ ಚಿನ್ನ ಲೇಪಿತ ಪ್ರತಿಮೆಯನ್ನು (ಆರ್ ಎಸ್ ಓವೆನ್ಸ್ ಎಂಬ ಆಸ್ಕರ್ ತಯಾರಿಕಾ ಕಂಪನಿಯಿಂದ ನೀಡಲ್ಪಡುತ್ತದೆ) ಸತತವಾಗಿ ಏಳನೇ ಬಾರಿಗೆ ಗೆದ್ದಿರುವುದು ನನ್ನ ಅದೃಷ್ಟವಾಗಿದೆ ಎಂದಿದ್ದಾರೆ.
ತಮ್ಮ ಸಹೋದ್ಯೋಗಿ ಮಿತ್ರರಾದ ಡಾ. ಗಿರಿರಾಜ್ ವಿಭೂತೆಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಅವರ ಮಾರ್ಗದರ್ಶಕರಾದ ಡಾ.ಎ.ಎಸ್. ಗುರುಪ್ರಸಾದ್, (2016ರಲ್ಲಿ ರೆಟ್ ಬಕ್ಲರ್ ಪ್ರಶಸ್ತಿ ಪುರಸ್ಕೃತರು) ಇವರಿಗೂ ಕೂಡ ಕೃತಜ್ಞತೆಯನ್ನು ವ್ಯಕ್ತಪಡಿಸಿ, ಈ ಸಾಧನೆಗೆ ಇವರಿಬ್ಬರ ಕೊಡುಗೆ ಅಪಾರ ಎಂದರು.
ಡಾ. ಶ್ರೀನಿವಾಸ್ ಎಂ ಜೋಶಿಯವರ ಸಾಧನೆಗಳನ್ನು ಮತ್ತು ವಿಟ್ರಿಯೋ-ರೆಟಿನಲ್ ಸರ್ಜರಿ ಕ್ಷೇತ್ರದಲ್ಲಿ ಉತ್ಕೃಷ್ಟತೆಗೆ ಅವರ ನಿರಂತರ ಬದ್ಧತೆಗೆ ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯು ಮೆಚ್ಚುಗೆ ವ್ಯಕ್ತಪಡಿಸಿದೆ.












Click it and Unblock the Notifications