• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಮೋಹನ್ ಲಿಂಬಿಕಾಯಿಗೆ ಆಸಕ್ತಿ ಇದ್ರೆ ಕಾರಕೂನಕಿ ಜವಾಬ್ದಾರಿ ಕೊಡಲು ಸಿದ್ಧ''

By ಹುಬ್ಬಳ್ಳಿ ಪ್ರತಿನಿಧಿ
|

ಹುಬ್ಬಳ್ಳಿ, ಜನವರಿ 28: ಹುಬ್ಬಳ್ಳಿಯ ಮೂರು ಸಾವಿರ ಮಠದ ಸರ್ವನಾಶಕ್ಕೆ ಉನ್ನತ ಮಟ್ಟದ ಸಮಿತಿ ಸಿದ್ಧವಾಗಿದೆ. ನನಗೆ ಯಾವತ್ತೂ ತೊಂದರೆ ಆಗಿಲ್ಲ, ಮೂರು ಸಾವಿರ ಮಠಕ್ಕೆ ತೊಂದರೆ ಆಗಿದೆ. ನಾನು ಈಗ ಮಠದ ಆಸ್ತಿ ಉಳಿಸಬೇಕು ಎಂದು ಹೋರಾಟ ಮಾಡುತ್ತಿದ್ದೇನೆ. ನಾನು ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಸಿಲ್ಲ ಎಂದು ಬಾಲೆಹೊಸೂರು ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಹುಬ್ಬಳ್ಳಿಯಲ್ಲಿ ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದಿಂಗಾಲೇಶ್ವರ ಶ್ರೀ, ನಾನು ಮಠದ ಆಸ್ತಿ ಉಳಿಸಲು ಹೋರಾಟ ನಡೆಸಿದಾಗ, ಈ‌ ಮೋಹನ್ ‌ಲಿಂಬಿಕಾಯಿ ಯಾರು ಎಂದು ರಾಜ್ಯದ ಜನರಿಗೆ ಗೊತ್ತೆ ಇರಲಿಲ್ಲ. ನಾನು ಉತ್ತರಾಧಿಕಾರಿ ಆಗಲು ಅಡ್ಡಗಾಲು ಹಾಕಿದ್ದಾರೆ. ಸಿ.ಎಂ.ಉದಾಸಿ, ಮೋಹನ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ ಈ ಮೂವರ ಕುತಂತ್ರದಿಂದ ನಾನು ಉತ್ತರಾಧಿಕಾರಿಯಾಗಲು ಹಿನ್ನಡೆಯಾಗಿದೆ ಎಂದರು.

ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿ ವಿವಾದ: ಬಹಿರಂಗ ಸವಾಲು ಹಾಕಿದ ದಿಂಗಾಲೇಶ್ವರ ಶ್ರೀಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿ ವಿವಾದ: ಬಹಿರಂಗ ಸವಾಲು ಹಾಕಿದ ದಿಂಗಾಲೇಶ್ವರ ಶ್ರೀ

ಮಠದ ಅವ್ಯವಹಾರದ ಬಗ್ಗೆ ದಾಖಲೆಗಳಿವೆಯಂತೆ

ಮಠದ ಅವ್ಯವಹಾರದ ಬಗ್ಗೆ ದಾಖಲೆಗಳಿವೆಯಂತೆ

ಮಠದದಲ್ಲಿ ಎಷ್ಟು ಅವ್ಯವಹಾರ ಆಗಿದೆ ಎಂಬುದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಅವ್ಯವಹಾರ ಆಗಿಲ್ಲ ಎನ್ನುವದಾದರೆ ಮಠದ ಕರ್ತೃ ಗದ್ದುಗೆಗೆ ಬರಲಿ, ನಾನು ಬರುತ್ತೇನೆ. ಮಠದಲ್ಲಿಯೇ ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ. ನನ್ನ ಹೋರಾಟಕ್ಕೆ ಮೂನ್ನೂರು ಸ್ವಾಮಿಜಿಗಳು ಬೆಂಬಲ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಲಿಂಬಿಕಾಯಿ ಅವರು ಕಾರಕೂನ ಆಗ್ತಾರಾ?

ಲಿಂಬಿಕಾಯಿ ಅವರು ಕಾರಕೂನ ಆಗ್ತಾರಾ?

ಬಾಲೆಹೊಸರಿನ ಮಠ ಅಭಿವೃದ್ಧಿ ಆಗಿದೆ, ಮೋಹನ ಲಿಂಬಿಕಾಯಿಯನ್ನು ನನ್ನ ಮಠದ ಕಾರಕೂನ ಆಗಿ ಇಟ್ಟುಕೊಳ್ಳುವ ಮಟ್ಟಕ್ಕೆ ದಿಂಗಾಲೇಶ್ವರ ಮಠ ಬೆಳೆದಿದೆ. ಮೋಹನ್ ಲಿಂಬಿಕಾಯಿ ನನ್ನ ‌ಮಠದ ಕಾರಕೂನ ಆಗಲಿ, ಅವರಿಗೆ ಮಠವನ್ನು ನೋಡಿಕೊಳ್ಳಲು ಬಿಡುತ್ತೇನೆ. ಬಹಳ ದಿನಗಳ ಬಳಿಕ ಮೂರು ಸಾವಿರ ಮಠದ ಉನ್ನತ ಮಟ್ಟದ ಸಮಿತಿ ಸದಸ್ಯರು ಮಾತನಾಡಿದ್ದಾರೆ. ಮೋಹನ್ ಲಿಂಬಿಕಾಯಿ ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರು. ಆದರೆ ಕಾನೂನು ಸಲಹೆಗಾರರಿಗೆ ಕಾನೂನು ಜ್ಞಾನದ ಕೊರತೆ ಇದೆಯೇ? ಎಂದು ಪ್ರಶ್ನಿಸಿದರು.

ಏನೂ ಸಂಬಂಧ ಎಂಬುದಕ್ಕೆ ದಾಖಲೆ ಬಿಡುಗಡೆ

ಏನೂ ಸಂಬಂಧ ಎಂಬುದಕ್ಕೆ ದಾಖಲೆ ಬಿಡುಗಡೆ

ಮೋಹನ್ ಲಿಂಬಿಕಾಯಿ ಅವರು, ದಿಂಗಾಲೇಶ್ವರ ಶ್ರೀಗಳಿಗೂ, ‌ಮೂರು ಸಾವಿರ ಮಠಕ್ಕೂ ‌ಏನು ಸಂಬಂಧ ಎಂದು ಕೇಳಿದ್ದಾರೆ. ಇದೆ ಮೋಹನ್ ಲಿಂಬಿಕಾಯಿ ಒಂದು ಕಾಗದ ಮೇಲೆ ಸಹಿ ಹಾಕಿದ್ದಾರೆ. ಈ ಕಾಗದ ನನಗೂ ಮತ್ತು ಮೂರು ಸಾವಿರ ಮಠಕ್ಕೆ ಏನು ಸಂಬಂಧ ಎಂಬುದನ್ನು ಹೇಳುತ್ತದೆ. ನನಗೂ ಮೂರು ಸಾವಿರ ಮಠಕ್ಕೆ ಏನೂ ಸಂಬಂಧ ಎಂಬುದಕ್ಕೆ ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು.

ಸಿ.ಎಂ ಉದಾಸಿ ಕುಮಾರೇಶ್ವರ ಮಠವನ್ನು ನಾಶ ಮಾಡಿದ್ದಾರೆ

ಸಿ.ಎಂ ಉದಾಸಿ ಕುಮಾರೇಶ್ವರ ಮಠವನ್ನು ನಾಶ ಮಾಡಿದ್ದಾರೆ

ಮೂರು ಸಾವಿರ ಮಠದ ಇತಿಹಾಸವನ್ನು ಯಾರು ತಿಳಿದುಕೊಳ್ಳುತ್ತಾರೋ ಅವರಿಗೆ ನನ್ನ ಬಗ್ಗೆ ತಿಳಿಯುತ್ತದೆ. ಆದರೆ ಮೂರು ಸಾವಿರ ಮಠದ ಆಸ್ತಿಯ ಮೇಲೆ ಕಣ್ಣು ಹಾಕಿದವರಿಗೆ ನಾನು ಯಾರು ಎಂಬುದು ತಿಳಿಯುವುದಿಲ್ಲ. ನನ್ನ ಮಠಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಅವರು ಸಹ ಸಮಿತಿಯಲ್ಲಿದ್ದವರು. ಮೂರು ಸಾವಿರ ಮಠದ ಆಸ್ತಿಯನ್ನು ಕಾನೂನು ‌ಬಾಹಿರವಾಗಿ ಆಸ್ತಿ ಮಾರಾಟ ಮಾಡಿಲ್ಲ ಎಂದು ಲಿಂಬಿಕಾಯಿ ಹೇಳುತ್ತಾರೆ. ಆಸ್ತಿಯನ್ನು ಕಾನೂನಿನ ಪ್ರಕಾರ ಮಾರಾಟ ಮಾಡುವ ಅಧಿಕಾರವನ್ನು ನಿಮಗೆ ಯಾರು ಕೊಟ್ಟರು ಎಂದು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್ ಆದೇಶವಿದೆ

ಸುಪ್ರೀಂ ಕೋರ್ಟ್ ಆದೇಶವಿದೆ

ಈ ಮಠದ ಸ್ಥಿರಾಸ್ತಿ, ಚರಾಸ್ತಿಗಳನ್ನು ಮಾರಾಟ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಇದಕ್ಕೆ ‌ಈಗಿರುವ ಶ್ರೀಗಳು ಸಹಿ ಹಾಕಿದ್ದಾರೆ‌. ಮೂರು ಸಾವಿರ ಮಠದ ಜೊತೆಗೆ ಹಾನಗಲ್ ಕುಮಾರಸ್ವಾಮಿ ಮಠವನ್ನು ನಾಶ ಮಾಡಿದ್ದು ಸಿ.ಎಂ ಉದಾಸಿ. ಅವರು ಹಾನಗಲ್ ಮಠವನ್ನು ನಾಶ ಮಾಡಿದ್ದರ ಕುರಿತು ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೆನೆ. ಮೂರು ಸಾವಿರ ಮಠದಲ್ಲಿಯೇ ಈ ಕುರಿತಾದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಸಧ್ಯದಲ್ಲೇ ಎಲ್ಲಾ ದಾಖಲೆಗಳನ್ನು ‌ಮಠಕ್ಕೆ ತೆಗೆದುಕೊಂಡು ಬಂದೆ ಬರುತ್ತೇನೆ ಎಂದು ಹೇಳಿದರು.

ಭಿಕ್ಷೆ ಬೇಡಿ 2 ಕೋಟಿ ರುಪಾಯಿ ಕೊಡುವೆ

ಭಿಕ್ಷೆ ಬೇಡಿ 2 ಕೋಟಿ ರುಪಾಯಿ ಕೊಡುವೆ

ಶಂಕರಣ್ಣ ಮುನವಳ್ಳಿಯವರು 24 ಎಕರೆಯ ಆಸ್ತಿಯ ಬೆಲೆ 2 ಕೋಟಿ ರೂಪಾಯಿ ಎಂದು ಹೇಳುತ್ತಾರೆ. ಭಿಕ್ಷೆ ಬೇಡಿ 2 ಕೋಟಿ ರುಪಾಯಿ ಕೊಡುವೆ. ಮೂರು ಸಾವಿರ ಮಠದ ಆಸ್ತಿ ಮಠಕ್ಕೆ ಬಿಟ್ಟ ಕೊಡಿ. 2.86 ಕೋಟಿ ರೂಪಾಯಿ ಹಣವನ್ನು ಸ್ಟಾಂಪ್ ಡ್ಯೂಟಿ ‌ಮಾಡಲು ಕಟ್ಟಿದ್ದಾರೆ. ದಾನಪತ್ರ ನೋಂದಾವಣಿ ಮಾಡಲು ಇಷ್ಟು ಹಣವನ್ನು ಕೊಟ್ಟಿದ್ದಾರೆ. 2 ಕೋಟಿ ರುಪಾಯಿ ಬೆಲೆ ಬಾಳುವ ಆಸ್ತಿಗೆ 2.86 ಕೋಟಿ ಹಣವನ್ನು ಸ್ಟಾಂಪ್ ಡ್ಯೂಟಿ ಮಾಡಲು ಕಟ್ಟಿದ್ದು ಏಕೆ? ಎಂದು ಪ್ರಶ್ನಿಸಿದರು.

ಸುಳ್ಳಿನ ಸಂಘ ಕಟ್ಟಿಕೊಂಡಿದ್ದಾ ಮುನವಳ್ಳಿ

ಸುಳ್ಳಿನ ಸಂಘ ಕಟ್ಟಿಕೊಂಡಿದ್ದಾ ಮುನವಳ್ಳಿ

ಶಂಕರಣ್ಣ ಮುನವಳ್ಳಿ ಸುಳ್ಳಿನ ಸಂಘವನ್ನು ಕಟ್ಟಿಕೊಂಡು, ಸುಳ್ಳಿನ ಸಂತೆ ನಡೆಸುತ್ತಿದ್ದಾರೆ. ಮೂರು ಸಾವಿರ ಮಠ ಪೂರ್ಣ ಖಾಲಿಯಾಗಿದೆ. ಬಸವರಾಜ ಹೊರಟ್ಟಿ ಅವರಿಗೆ ಮಠದ ಬಗ್ಗೆ ಕಾಳಜಿ ಇದ್ದರೆ ಮಠದ ಆಸ್ತಿ ಮಠಕ್ಕೆ ಮರಳಿಸಲು‌ ಮುಂದಾಗಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಟಿಯಲ್ಲಿ ದಿಂಗಾಲೇಶ್ವರ ಶ್ರೀಗಳ ಜೊತೆ 8 ಸ್ವಾಮೀಜಿಗಳು ಭಾಗವಹಿಸಿದ್ದರು.

English summary
"I am now fighting to save the monastery property. I have not fought for succession," said Balehosuru Dingaleshwara Sri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X