ಹುಬ್ಬಳ್ಳಿಯಲ್ಲೂ ಭಣಗುಡುತ್ತಿರುವ ಶಾಪಿಂಗ್ ಮಾಲ್ ಗಳು

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್, 16 : ನ.8ರಂದು ಬಾನ್ ಬ್ಯಾನ್ ಪರಿಣಾಮ ಇಡೀ ದೇಶದಾದ್ಯಂತದ ಬೀರಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಸದಾ ಜನ ದಟ್ಟಣೆಯಿಂದ ಕೂಡಿರುತ್ತಿದ್ದ ಪ್ರಮುಖ ಶಾಪಿಂಗ್ ಮಾಲ್ ಗಳು ಐನೂರು-ಸಾವಿರ ಮುಖ ಬೆಲೆಯ ನೋಟ್ ಬ್ಯಾನ್ ಪರಿಣಾಮ ಶಾಪಿಂಗ್ ಮಾಲ್ ಗಳಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿವೆ.

ನೋಟ್ ಬ್ಯಾನ್ ಗಿಂತ ಮೊದಲು ವಿಕೆಂಡ್ ಬಂತೆಂದರೆ ಸಾಕು ನಗರದ ಕೊಪ್ಪೀಕರ್ ರಸ್ತೆ, ಗೋಕುಲ ರಸ್ತೆ, ಕೇಶ್ವಾಪುರ ಭಾಗದಲ್ಲಿ ಇರುವ ಶಾಪಿಂಗ್ ಮಾಲ್ ಗಳಲ್ಲಿ ಜನಸಂದಣಿ ತುಂಬಿ ತುಳುಕುತ್ತಿತ್ತು.[ಎಲ್ಲೆಡೆ ನೋಟ್ ಬಂದ್: ಹುಬ್ಬಳ್ಳಿಯಲ್ಲಿ ಗ್ಯಾಸ್ ಬಂದ್]

ನೋ ಪಾರ್ಕಿಂಗ್ ಇದ್ದರೂ ರಸ್ತೆಯ ಅಕ್ಕಪಕ್ಕದಲ್ಲಿ ದ್ವಿಚಕ್ರ ಮತ್ತು ಕಾರುಗಳು ವಾಹನಗಳು ರಸ್ತೆಯುದ್ದಕ್ಕೂ ನಿಂತಿರುತ್ತಿದ್ದವು. ಶಾಪಿಂಗ್ ಮಾಲ್ ಗಳಲ್ಲಿ ಒಂದೇ ಕಡೆಗಳಲ್ಲಿ ಎಲ್ಲವೂ ದೊರೆಯುವುದರಿಂದ ದೂರದ ಊರಿನಿಂದಲೂ ಜನರು ಖರೀದಿಗೆಂದು ಬರುತ್ತಿದ್ದರು. [ಹೊಸ ನೋಟ್ ಬದಲಾವಣೆಗೆ ಎಡತಾಕಿದ ಹುಬ್ಬಳ್ಳಿ ಮಂದಿ]

ಇನ್ನು ಕೆಲವರು ಶಾಪಿಂಗ್ ಮಾಲ್ ಗಳಲ್ಲಿರುವ ಸಿನಿಮಾ ಥೇಟರ್ ಗೆ ಬಂದರೆ, ಕೆಲವರು ಅಲ್ಲಿರುವ ಆಟದ ಅಂಗಡಿಗಳಿಗೆ ಬರುತ್ತಿದ್ದರು. ನಂವೆಂಬರ್ 8ರಂದು ನೋಟ್ ಬ್ಯಾನ್ ನಿಷೇಧದ ಬಳಿಕ ಶಾಪಿಂಗ್ ಮಾಲ್ ಗಳಲ್ಲಿ ಜನರೇ ಇಲ್ಲದಂತಾಗಿ ಭಣಗುಡುತ್ತಿವೆ. [ಹುಬ್ಬಳ್ಳಿಯಲ್ಲಿ ಖಾಲಿ ಹೊಡೆಯುತ್ತಿರುವ ವೈನ್ ಶಾಪ್ ಗಳು]

ಶಾಪಿಂಗ್ ಮಾಲ್ ಗೆ ಬರುವ ಜನರನ್ನೇ ಅವಲಂಬಿಸಿ ಜೀವನದ ಬಂಡಿ ಎಳೆಯುತ್ತಿದ್ದ ಆಟೋ ಚಾಲಕರು, ಪಾನಿ ಪೂರಿ ವ್ಯಾಪಾರಿಗಳು, ಎಳೇನೀರು, ಕಬ್ಬಿನ ಹಾಲು ಮಾರುವ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಮುಖ ಸಪ್ಪಗೆ ಮಾಡಿಕೊಂಡು ಕುಳಿತುಕೊಂಡಿರುವುದು ಇಲ್ಲಿ ಸಾಮಾನ್ಯ ದೃಶ್ಯವಾಗಿದೆ.

ಚಿಕ್ಕ ಪುಟ್ಟ ವ್ಯಾಪಾರಸ್ಥ ಗೋಳು

ಚಿಕ್ಕ ಪುಟ್ಟ ವ್ಯಾಪಾರಸ್ಥ ಗೋಳು

ಚಿಕ್ಕ ಪುಟ್ಟ ಮಾರುಕಟ್ಟೆ ಪ್ರದೇಶಗಳಾದ ದುರ್ಗದಬೈಲ್, ದಾಜೀಬಾನ ಪೇಟೆ, ಕೊಪ್ಪೀಕರ ರಸ್ತೆ, ಸ್ಟೇಶನ್ ರೋಡ್, ಜವಳಿ ಸಾಲ, ಮರಾಠಾ ಗಲ್ಲಿಗಳಲ್ಲಿರುವ ಅಂಗಡಿಗಳವರು ಜನರು ಶಾಪಿಂಗ್ ಮಾಲ್ ಹೋಗುತ್ತಿರಬಹುದು ಖರೀದಿಗೆಂದು ಹೇಳುತ್ತಾರೆ.

ಕಾರ್ಡ್ ಸ್ವೈಪ್ ಮಶೀನ್

ಕಾರ್ಡ್ ಸ್ವೈಪ್ ಮಶೀನ್

ಮಾಲ್ ಗಳಲ್ಲಿ ಕಾರ್ಡ್ ಸ್ವೈಪ್ ಮಶೀನ್ ಇಟ್ಟಿರುತ್ತಾರೆ. ನಮ್ಮಂಥಹ ಚಿಕ್ಕಪುಟ್ಟ ವ್ಯಾಪಾರಿಗಳು ಎಲ್ಲಿ ಮಶೀನ್ ಇಡಬೇಕು ಎಂಬುವುದು ಚಿಕ್ಕ ವ್ಯಾಪಾರಸ್ಥರ ಅಳಲು.

ಮಾಲ್ ಗಳಲ್ಲಿ ಕೆಲಸ ಮಾಡುವವರು ಏನಂತಾರೆ

ಮಾಲ್ ಗಳಲ್ಲಿ ಕೆಲಸ ಮಾಡುವವರು ಏನಂತಾರೆ

ಇನ್ನು ಶಾಪಿಂಗ್ ಮಾಲ್ ಗಳಲ್ಲಿ ಕೆಲ ಅಂಗಡಿಗಳವರಿಗೆ ತಿಂಗಳಿಗಿಷ್ಟು ವ್ಯಾಪಾರ ಮಾಡಲೇಬೇಕು ಎಂದು ತಮ್ಮ ಸಿಬ್ಬಂದಿಗಳಿಗೆ ಹೇಳಿರುತ್ತಾರೆ. ಈಗ ಒಂದು ತಿಂಗಳಿಂದ ವ್ಯಾಪಾರವೇ ಇಲ್ಲ. ಟಾರ್ಗೆಟ್ ಮುಟ್ಟೋಕೆ ಆಗಲಿಲ್ಲ. ಹೀಗಾಗಿ ನೌಕರಿ ಹೋಗುವ ಭಯವೂ ನಮಗಿದೆ ಎನ್ನುತ್ತಾರೆ ಮಾಲ್ ನಲ್ಲಿರುವ ಬ್ಯಾಗ್ ಅಂಗಡಿಯ ಶ್ರೀಕಾಂತ.

ಭಯದೊಂದಿಗೆ ಕಾರ್ಡ್ ನೀಡುವ ಜನ

ಭಯದೊಂದಿಗೆ ಕಾರ್ಡ್ ನೀಡುವ ಜನ

ಸಾಮಾನ್ಯವಾಗಿ ಮಧ್ಯಮ ವರ್ಗದವರು ಎಟಿಎಂ ನಿಂದ ಹಣ ತೆಗೆದುಕೊಂಡು ಖರೀದಿ ಮಾಡುತ್ತಿದ್ದರು ಈ ಮೊದಲು. ಇಂಥಹ ಜನ ಕಾರ್ಡ್ ಇದ್ದರೂ ಸ್ವೈಪ್ ಮಾಡಲು ಭಯ ಪಡುತ್ತಿದ್ದರು. ಈಗ ಅನಿವಾರ್ಯವಾಗಿ ಕಾರ್ಡ್ ಸ್ವೈಪ್ ಮಾಡುವ ಸಂದರ್ಭ ಬಂದಿದ್ದರಿಂದ ಎಲ್ಲಿ ನಮ್ಮ ಹೆಚ್ಚಿಗೆ ಹಣವನ್ನು ತೆಗೆದುಕೊಳ್ಳುತ್ತಾರೋ ಎಂಬ ಭಯದೊಂದಿಗೆ ಕಾರ್ಡ್ ನೀಡುತ್ತಿದ್ದಾರೆ.

ಪೆಟ್ರೋಲ್ ಬಂಕ್ ಸಿಬ್ಬಂದಿ ಗ್ರಾಹಕರಿಗೆ ತಾಕೀತು

ಪೆಟ್ರೋಲ್ ಬಂಕ್ ಸಿಬ್ಬಂದಿ ಗ್ರಾಹಕರಿಗೆ ತಾಕೀತು

ಪೆಟ್ರೋಲ್ ಬಂಕ್ ಗಳಲ್ಲಿ ಈಗ ಕಾರ್ಡ್ ಸ್ವೈಪ್ ಮಾಡಿಕೊಳ್ಳುತ್ತಿದ್ದರೂ ಕಡಿಮೆಯೆಂದರೂ ನೂರು ರೂಪಾಯಿ ಪೆಟ್ರೋಲ್ ಹಾಕಿಸಿಕೊಳ್ಳಬೇಕು ಎಂದು ಪಂಪ್ ಸಿಬ್ಬಂದಿ ಗ್ರಾಹಕರಿಗೆ ತಾಕೀತು ಮಾಡುತ್ತಿದ್ದಾರೆ. ಇದರಿಂದ ಕೆಲವೆಡೆ ಕೈ ಕೈ ಮಿಲಾಯಿಸುವ ಹಂತಕ್ಕೂ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The demonetisation of R500 and R1,000 notes has had an adverse impact on Small shops amd shoping malls in Hubballi.
Please Wait while comments are loading...