ಕೊರೊನಾ ಜಾಗೃತಿಗೆ ಕಲಘಟಗಿಯಲ್ಲಿ ಇಂಥದ್ದೊಂದು ಪ್ರಯತ್ನ
ಹುಬ್ಬಳ್ಳಿ, ಏಪ್ರಿಲ್ 14: ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ಕಿಲೆ ಓಣಿಯಲ್ಲಿ ಮಂಗಳವಾರ ಕೊರೊನಾ ಕುರಿತು ಹೀಗೊಂದು ವಿಭಿನ್ನ ಜಾಗೃತಿ ಪ್ರಯತ್ನ ನಡೆಯಿತು.
ತಲೆಯ ಮೇಲೆ ಬಣ್ಣದಿಂದ ಕೊರೊನಾ ವೈರಸ್ ಚಿತ್ರ ಬಿಡಿಸಿಕೊಳ್ಳುವ ಮೂಲಕ ಈರಪ್ಪ ನಾಯ್ಕರ್ ವಿಭಿನ್ನ ರೀತಿಯ ಜಾಗೃತಿಗೆ ಮುಂದಾದರು. ಜನರಲ್ಲಿ ಕೊರೊನಾ ಕುರಿತು ಎಷ್ಟೇ ತಿಳಿವಳಿಕೆ ನೀಡಿದರೂ ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಕಲಘಟಗಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ನಿರಾಳವಾಗಿ ರಸ್ತೆಗಿಳಿದು ಓಡಾಡುತ್ತಿದ್ದಾರೆ. ಕೆರೆ, ಬಾವಿಗಳಿಗೆ ಮೀನು ಹಿಡಿಯಲು ಹಿಂಡುಹಿಂಡಾಗಿ ಕುಳಿತುಕೊಳ್ಳುತ್ತಿದ್ದಾರೆ. ಆದ ಕಾರಣ ತಲೆಯ ಮೇಲೆ ಕುಂಚದಿಂದ ಕೊರೊನಾ ವೈರಸ್ ಚಿತ್ರಗಳನ್ನು ಬಿಡಿಸಿ ಜನರು ನೋಡುವಂತೆ ಮಾಡಿ ಜಾಗೃತಿ ಮೂಡಿಸಲಾಯಿತು.

ತಲೆಯ ಮೇಲೆ ಚಿತ್ರ ಬಿಡಿಸಿಕೊಂಡ ಈರಪ್ಪ ನಾಯ್ಕರ್, ಸಲೀಂ ಮಂಟೂರ, ಸೋಹಿಲ್ ಹಾಗೂ ನಾಗರಾಜ ಬೈಕ್ ಸವಾರರನ್ನು ನಿಲ್ಲಿಸಿ ಮಾಸ್ಕ್ ಗಳನ್ನು ಧರಿಸಿಕೊಳ್ಳವಂತೆ ಸೂಚಿಸಿ ಮಾಸ್ಕ ನೀಡಿದರು.












Click it and Unblock the Notifications