ತಹಶೀಲ್ದಾರ್ ಕಚೇರಿಯಲ್ಲಿ ವಂಚನೆ; ಪ್ರಕರಣ ಬಯಲಿಗೆ ತಂದ ಸಚಿವರು

ಹುಬ್ಬಳ್ಳಿ, ಜೂನ್ 29: ಓರ್ವ ಜನಪ್ರತಿನಿಧಿ ಎಷ್ಟೇ ಬ್ಯುಸಿ ತನ್ನ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಂಡು ಮುನ್ನಡೆಯುವವರು ತೀರಾ ವಿರಳ. ಆದರೆ, ತನ್ನ ಕ್ಷೇತ್ರದ ಜನರ ಹಣವನ್ನು ನುಂಗಿದ ಪ್ರಕರಣವನ್ನು ಸಚಿವರೇ ಕಂಡು ಹಿಡಿದು ಹೊರ ಹಾಕಿರುವ ಪ್ರಕರಣವೊಂದು ಅಣ್ಣೆಗೇರಿಯಲ್ಲಿ ಬೆಳಕಿಗೆ ಬಂದಿದೆ.

ಅಣ್ಣಿಗೇರಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಮಂಜುನಾಥ ಮುಧೋಳ ಎಂಬಾತ ತನ್ನ ತಾಯಿಯ ಹೆಸರಿನಲ್ಲಿ ಭದ್ರಾಪುರ ಮತ್ತು ನಾಗರಳ್ಳಿ ನಿವಾಸಿಯಂಬಂತೆ ಬಿಂಬಿಸಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದಾನೆ.

2018ನೇ ಸಾಲಿನಿಂದ ಅಣ್ಣಿಗೇರಿ ತಾಲೂಕ ನೆರೆ ಸಂತ್ರಸ್ತರಿಗೆ ಪರಿಹಾರ ಕ್ರಮಗಳಿಗಾಗಿ ಸರಕಾರದಿಂದ ಬಿಡುಗಡೆ ಆದ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಹಣವನ್ನು ಸರ್ಕಾರಿ ಖಜಾನೆಯಿಂದ ಅಣಿಗೇರಿ ಪಟ್ಟಣದ ಕೆನರಾ ಬ್ಯಾಂಕ್ ಉಳಿತಾಯ ಖಾತೆಗೆ ವರ್ಗಾಯಿಸಿಕೊಂಡಿದ್ದ.

Cheting at Tehsildar Office Money Returned To Victims By Minister

ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಮಂಜುನಾಥ ಮುಧೋಳ ಎಂಬಾತ ತನ್ನ ತಾಯಿಯ ಹೆಸರಿನಲ್ಲಿ ಭದ್ರಾಪುರ ಮತ್ತು ನಾಗರಳ್ಳಿ ನಿವಾಸಿಯಂಬಂತೆ ಬಿಂಬಿಸಿ ಸುಮಾರು 40 ಲಕ್ಷ ಹಣವನ್ನು ಲಪಟಾಯಿಸಿದ್ದಾನೆ.

ಸಂತ್ರಸ್ತರಿಗೆ ಮರಳಿ ಸೇರಿದ ಹಣ; ಎರಡೆರಡು ಜಿಲ್ಲೆಯ ಉಸ್ತುವಾರಿಯಿದ್ದರೂ ತಮ್ಮ ಮತಕ್ಷೇತ್ರದಲ್ಲಿನ ಭ್ರಷ್ಟಾಚಾರ ಪ್ರಕರಣವನ್ನು ಸಚಿವರು ಪತ್ತೆ ಹಚ್ಚಿದ್ದಾರೆ. ಈಗ ಯಾರಿಗೂ ಗೊತ್ತಾಗದ ಹಾಗೇ ನಡೆದಿದ್ದ ವಂಚನೆಯೊಂದನ್ನು ಸಚಿವರು ಪತ್ತೆ ಹಚ್ಚಿದ್ದಾರೆ. ಸಚಿವರ ಕಾಳಜಿಯಿಂದಾಗಿ ಸುಮಾರು 40 ಲಕ್ಷ ಹಣ ಮರಳಿ ಖಜಾನೆ ಸೇರಿದೆ. ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Cheting at Tehsildar Office Money Returned To Victims By Minister

ಮಂಜುನಾಥ ಮುಧೋಳ ನಾಪತ್ತೆ; ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯಾವಾಗ ಎಫ್ಐಆರ್ ದಾಖಲಾಯಿತೋ, ತಕ್ಷಣವೇ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಮುಧೋಳ ಸಂಬಂಧಿಕರು ಎಲ್ಲ ಹಣವನ್ನೂ ಸರಕಾರದ ಖಜಾನೆಗೆ ಮರಳಿಸಿದ್ದಾರೆ.

Cheting at Tehsildar Office Money Returned To Victims By Minister

ಆದರೆ, ಮಂಜುನಾಥ ನಾಪತ್ತೆಯಾಗಿದ್ದಾನೆ. ಓರ್ವ ಸಚಿವ ರಾಜ್ಯದ ವಿವಿಧ ಪ್ರದೇಶದಲ್ಲಿ ಸಂಚರಿಸುತ್ತ ಸರಕಾರದ ಕೆಲಸಗಳನ್ನು ಮಾಡುತ್ತಿದ್ದಾಗಲೂ, ತನ್ನ ಕ್ಷೇತ್ರವನ್ನು ಹೇಗೆ ನೋಡಿಕೊಳ್ಳಬೇಕೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಸರಕಾರದ ಹಣ, ಯಾರಿಗೆ ತಲುಪಬೇಕೋ ಅವರಿಗೆ ತಲುಪಲಿ ಎಂಬ ಅವರ ಆಶೋತ್ತರ ಈ ಮೂಲಕ ಈಡೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+