ವಿದ್ಯುತ್ ಖರೀದಿ : ಕೇಂದ್ರಕ್ಕೆ ಸವಾಲು ಹಾಕಿದ ಡಿಕೆಶಿ

ಹುಬ್ಬಳ್ಳಿ, ನವೆಂಬರ್ 28 : 'ವಿದ್ಯುತ್ ಖರೀದಿ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 'ಕೇಂದ್ರ ಸರ್ಕಾರ 2 ರೂಪಾಯಿ 50 ಪೈಸೆಗೆ ವಿದ್ಯುತ್ ನೀಡಲು ಸಿದ್ಧವಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ದರಕ್ಕೆ ವಿದ್ಯುತ್ ನೀಡಿದ್ದೇ ಆದಲ್ಲಿ ನನ್ನ ವೈಯಕ್ತಿಕ ಕೆಲಸ ಬಿಟ್ಟು ಅವರ ಹಿಂದೆ ಅಲೆಯುವೆ' ಎಂದು ಟಾಂಗ್ ನೀಡಿದರು.

'ಒಂದು ವೇಳೆ ಕೇಂದ್ರ ಸರ್ಕಾರ 2 ರೂ. 50 ಪೈಸೆಗೆ ವಿದ್ಯುತ್ ನೀಡಿದರೆ, ಎಲ್ಲ ಖರೀದಿ ಪ್ರಕ್ರಿಯೆ ರದ್ದು ಮಾಡುವೆ' ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.

BJP spreading lies about power tariff says DK Shiva Kumar

'ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲೋಡ್ ಶಡ್ಡಿಂಗ್ ಮಾಡುವುದಿಲ್ಲ. ರಾಜ್ಯದ ರೈತರಿಗೆ ಬೇಸಿಗೆಯಲ್ಲಿ ಸಂಪೂರ್ಣ ವಿದ್ಯುತ್ ನೀಡಲಾಗುತ್ತದೆ' ಎಂದು ಸ್ಪಷ್ಟಪಡಿಸಿದರು.

ಯೋಗೇಶ್ ಗೌಡ ಕೊಲೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ಇದು ಬಿಜೆಪಿಯವರು ಮಾಡುತ್ತಿರುವ ಸುಳ್ಳು ಆರೋಪ. ನಮ್ಮ ಯಾವೊಬ್ಬ ಸಚಿವರು ಅಕ್ರಮವನ್ನು ಎಸಗಿಲ್ಲಾ' ಎಂದು ಹೇಳಿದರು.

'ಪ್ರತಿಪಕ್ಷಗಳು ನಮ್ಮ ಬೆಳವಣಿಗೆ ಕಂಡು ಹತಾಶರಾಗಿದ್ದಾರೆ. ಹೀಗಾಗಿ ಕೆ.ಜೆ.ಜಾರ್ಜ್ ಹಾಗೂ ವಿನಯ ಕುಲಕರ್ಣಿ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಐಟಿ ದಾಳಿ ನಡೆದಾಗಲೂ ಅದೊಂದು ದೇಶದ ದೊಡ್ಡ ಹಗರಣ ಎನ್ನುವಂತೆ ಬಿಂಬಿಸಿದ್ದರು' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+