ಚುನಾವಣೆಗೆ ನಿಲ್ಲಲು ಕಾಂಗ್ರೆಸ್ ಮಂತ್ರಿಗಳು ಹಿಂದೇಟು, ಮಕ್ಕಳಿಗೆ ಟಿಕೆಟು: ಮಾಜಿ ಸಿಎಂ ಲೇವಡಿ

ಹುಬ್ಬಳ್ಳಿ, ಮಾರ್ಚ್ 22: ಕರ್ನಾಟಕದಲ್ಲಿ ಬೃಹತ್ ಪಕ್ಷವಾಗಿ 133 ಸ್ಥಾನ ಗೆದ್ದು ಹೊರ ಹೊಮ್ಮಿರುವ ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಸಿಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೇವಡಿ ಮಾಡಿದರು.

ಶುಕ್ರವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಹಳೆಯ ಪಾರ್ಟಿ , ರಾಜ್ಯದಲ್ಲಿ 133 ಸ್ಥಾನ ಗೆದ್ದಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ಸ್ಥಾನ ಪಡೆದರುವ ಕಾಂಗ್ರೆಸ್ ಅಧಿಕಾರದಲ್ಲಿದೆ. ಹೀಗಿದ್ದರೂ ಸಹ ಅವರಲ್ಲಿ ಲೋಕಸಭೆಗೆ ಅಭ್ಯರ್ಥಿಗಳು ಸಿಕ್ಕಿಲ್ಲ.

Basavaraj Bommai Slams about Congress Given Ticket to Ministers Children

ಹಾಲಿ ಮಂತ್ರಿಗಳು ಲೋಸಕಭಾ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಮಂತ್ರಿಗಳ ಮನೆಯವರನ್ನ ಚುನಾವಣೆಗೆ ನಿಲ್ಲಿಸುವ ದುಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ಕಾಂಗ್ರೆಸ್‌ನಿಂದ ಈಗ ಟಿಕೆಟ್ ಪಡೆದಿರುವ ಅಭ್ಯರ್ಥಿಗಳಿಂದ ಏನೂ ಪ್ರಯೋಜನವಿಲ್ಲ. ಆಯಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಶೀಘ್ರ ಫೈನಲ್

ಇದೇ ವೇಳೆ ಜಗದೀಶ್ ಶೆಟ್ಟರ್ ಅವರಿಗೆ ಹಾವೇರಿ ಟಿಕೆಟ್ ಸಿಕ್ಕಿಲ್ಲ, ಬೆಳಗಾವಿ ಟಿಕೆಟ್ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತಿರಿಸಿದ ಬಸವರಾಜ್ ಬೊಮ್ಮಾಯಿ ಅವರು, ಜಗದೀಶ್ ಶೆಟ್ಟರ್ ಟಿಕೆಟ್ ಟಿಕೆಟ್ ಅಂತಿಮಗೊಳ್ಳಲಿದೆ. ನಾಳೆ ಅಥವಾ ನಾಡಿದ್ದು ಟಿಕೆಟ್ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.

ಬಿಜೆಪಿ ವರಿಷ್ಠರು ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದರಲ್ಲಿ ಸಂದೇಹ ಬೇಡ. ಪಕ್ಷದ ಜೊತೆಗಿನ ಸಂಬಂಧಗಳು ಬಹಳ ಹಳೆಯವು. ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದು ಈಶ್ವರಪ್ಪನವರ ಆಶಯ ಆಗಿದೆ. ಹೀಗಾಗಿ ಅವರು ಮನವೊಲಿಕೆ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Basavaraj Bommai Slams about Congress Given Ticket to Ministers Children

ಅಸಮಾಧಾನಿತರು ಬಿಜೆಪಿ ಪರ ಇದ್ದಾರೆ

ಈಶ್ವರಪ್ಪನವರಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮೈಸೂರು ಸಂಸದ ಪ್ರತಾಪ್ ಸಿಂಹ, ಸದಾನಂದಗೌಡರು ಪಕ್ಷದ ಪರ ಇರುತ್ತಾರೆ ಎಂಬ ನಂಬಿಕೆ ಇದೆ. ಇವರೆಲ್ಲು ಪಕ್ಷವನ್ನು ಕಟ್ಟಿದವರು, ಅವರಿಗೆ ನೋವಾಗಿರುವುದು ಸಹಜ ಆದರೆ ಪಕ್ಷದ ಮೇಲಿರುವ ಪ್ರೀತಿಯಿಂದಾಗಿ ಪಕ್ಷದ ಪರ ಕೆಲಸ ಮಾಡುತ್ತಾರೆ ಎಂದರು.

ಕಾಂಗ್ರೆಸ್ ಮಾಡಿದ್ದ ಮೇಕೆದಾಟು ಪಾದಯಾತ್ರೆ ಕೂಡ ರಾಜಕೀಯ ನಾಟಕದ ಒಂದು ಭಾಗ. ಪಾದಯಾತ್ರೆ ಬದಲು ಅಲಯನ್ಸ್ ಪಾರ್ಟನರ್ ಆದ ಡಿಎಂಕೆ ಜೊತೆ ಮಾತನಾಡಬೇಕು. ಎರಡು ರಾಜ್ಯಕ್ಕೆ ಅನುಕೂಲವಾಗುವ ಮೇಕದಾಟು ಯೋಜನೆ ಅನುಷ್ಠಾಗೊಳ್ಳುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ತಮಿಳುನಾಡಿಗೆ ಮನವರಿಕೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸಿದ್ದರಾಮಯ್ಯ ನಾಟಕ ಬಹಿರಂಗ

ಆದರೆ ಈ ಬಗ್ಗೆ ಕಾಂಗ್ರೆಸ್ ಪಕ್ಷ ಸಣ್ಣ ಪ್ರಯತ್ನವನ್ನೂ ಮಾಡಿರಲಿಲ್ಲ. ಆಗ ಕೋರ್ಟ್‌ನಲ್ಲಿ ಪ್ರಕರಣ ಇದ್ದರೂ ಕೂಡ ಕೋರ್ಟ್‌ನಲ್ಲಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಸಿದ್ದರಾಮಯ್ಯನವರ ನಾಟಕ ಈಗ ಬಹಿರಂಗವಾಗಿದೆ ಎಂದರು.

ಇನ್ನು ಡಿಎಂಕೆ ತನ್ನ ಪರಿಣಾಳಿಕೆಯಲ್ಲಿ ಕಾವೇರಿಯ ಯಾವುದೇ ಯೋಜನೆಗೆ ಅವಕಾಶ ಕೊಡುವುದಿಡಲ್ಲ ಎಂದು ಹೇಳಿಕೊಂಡಿದೆ. ಕರ್ನಾಟಕದ ಹಿತಾಸಕ್ತಿ ಕಾಪಾಡಬೇಕಾದರೆ ಇಂಡಿ ಅಲಯನ್ಸ್ ನಿಂದ ಕಾಂಗ್ರೆಸ್ ಹೊರಗೆ ಬರಬೇಕು. ದ್ವಂಧ್ವ ನಿಲುವು ಬಿಟ್ಟು ಸ್ಪಷ್ಟವಾದ ಅಭಿಪ್ರಾಯ ಕಾಂಗ್ರೆಸ್ ನಿಂದ ಬರಬೇಕು ಎಂದು ಬೊಮ್ಮಾಯಿಯವರು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+