ಧಾರವಾಡದ ನೆಹರೂ ನಗರದಲ್ಲಿ ಅಕ್ಕನ ಸಾವಿನಿಂದ ನೊಂದು ತಮ್ಮ ಆತ್ಮಹತ್ಯೆ
ಧಾರವಾಡದ ನೆಹರೂ ನಗರದಲ್ಲಿ ಆ ಅಕ್ಕ-ತಮ್ಮ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅನಾರೋಗ್ಯದ ಕಾರಣಕ್ಕೆ ಆಕ್ಕ ಮೃತಪಟ್ಟರೆ, ಆ ಘಟನೆಯಿಂದ ನೊಂದು ತಮ್ಮ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಧಾರವಾಡ, ಮೇ 11: ಇಲ್ಲಿನ ನೆಹರೂ ನಗರದಲ್ಲಿ ಬುಧವಾರ ಹೃದಯ ಕರಗುವಂಥ ಘಟನೆ ನಡೆದಿದೆ. ಕಳೆದ ಕೆಲ ವರ್ಷಗಳಿಂದ ಕ್ಷಯ ರೋಗದಿಂದ ಬಳಲುತ್ತಿದ್ದ ಕಸ್ತೂರಿ ಬಡಿಗೇರ ಅವರು ಮೃತಪಟ್ಟರು. ಈ ಘಟನೆಯಿಂದ ನೊಂದಂಥ ಅವರ ತಮ್ಮ ರಮೇಶ ಬಡಿಗೇರ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಸ್ತೂರಿ ಅವರಿಗೆ ಮದುವೆ ಆಗಿರಲಿಲ್ಲ. ಆಕೆಯ ಯೋಗಕ್ಷೇಮವನ್ನು ರಮೇಶ ನೋಡಿಕೊಳ್ಳುತ್ತಿದ್ದರು. ಇಬ್ಬರೂ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಮನೆಯ ಬಾಗಿಲು ತೆರೆದಿದ್ದನ್ನು ನೋಡಿ ಮಾಲೀಕರುಮನೆಯ ಒಳಗೆ ಹೋಗಿ ನೋಡಿದ್ದಾರೆ. ಅಗ ಇಬ್ಬರೂ ಮೃತಪಟ್ಟಿರುವುದು ತಿಳಿದುಬಂದಿದೆ.[ಮದುವೆ ವಾರ್ಷಿಕೋತ್ಸವ ದಿನವೇ ಮಸಣ ಸೇರಿದ ಸಬ್ ಇನ್ ಸ್ಪೆಕ್ಟರ್]

ಆ ಕೂಡಲೇ ಮನೆಯ ಮಾಲೀಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿಯನ್ನು ತಲುಪಿಸಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಬಾಲಕ ನಾಪತ್ತೆ: ಹುಬ್ಬಳ್ಳಿಯ ಅದರಗುಂಚಿ ಗ್ರಾಮದ ಕ್ವಾರಿಯಲ್ಲಿ ಈಜಲು ತೆರಳಿದ್ದ ಬಾಲಕ ಬುಧವಾರ ನಾಪತ್ತೆಯಾಗಿದ್ದಾನೆ. ಉಮೇಶ ನಿಂಗಪ್ಪ ದೊಡ್ಡಮನಿ ನಾಪತ್ತೆಯಾದ ಬಾಲಕ. ಶಲೆಗೆ ರಜಾ ಇದ್ದುದರಿಂದ ಸ್ನೇಹಿತರ ಜತೆ ಸೇರಿ ಕ್ವಾರಿಗೆ ಈಜಲು ತೆರಳಿದ್ದಾಗ ನಾಪತ್ತೆಯಾಗಿದ್ದಾನೆ.[ಆತ ಊಟ-ನೀರಿಲ್ಲದೆ ತಂದೆ ಶವದ ಬಳಿಯೇ ಐದು ದಿನ ಇದ್ದ]
ಸಂಜೆಯವರೆಗೆ ಹುಡುಕಾಟ ನಡೆಸಿದರೂ ಬಾಲಕ ಪತ್ತೆಯಾಗಲಿಲ್ಲ. ಕತ್ತಲೆ ಆಗಿದ್ದರಿಂದ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು.












Click it and Unblock the Notifications