ಸಚಿವ ಜಮೀರ್ ಅಹಮದ್ ಖಾನ್ ಕಾಣೆಯಾಗಿದ್ದಾರೆ!
Recommended Video
ಹಾವೇರಿ, ಜೂನ್ 20 : ಸಚಿವ ಜಮೀರ್ ಅಹಮದ್ ಖಾನ್ ಕಾಣೆಯಾಗಿದ್ದಾರೆ.....!. ಅಚ್ಚರಿ ಪಡುವ ಅಗತ್ಯವಿಲ್ಲ ಸಚಿವರು ಕಾಣೆಯಾದ ಬಗ್ಗೆ ಹಾಕಿರುವ ಫೇಸ್‌ಬುಕ್ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಮೀರ್ ಅಹಮದ್ ಖಾನ್ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರು. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು ಸಹ ಹೌದು. ಆದರೆ, ಅವರು ಕಾಣೆಯಾಗಿದ್ದಾರೆ ಎಂದು ಜಿಲ್ಲೆಯ ರೈತರು ಫೋಸ್ಟ್ ಹಾಕಿದ್ದಾರೆ.
ಲೋಕಸಭಾ ಚುನಾವಣೆಯ ಮತದಾನ ಮುಗಿದ ಬಳಿಕ ಜಮೀರ್ ಅಹಮದ್ ಖಾನ್ ಅವರು ಹಾವೇರಿ ಜಿಲ್ಲೆಯತ್ತ ಮುಖ ಮಾಡಿಲ್ಲ. ಚುನಾವಣೆ ಮುಗಿದು, ಫಲಿತಾಂಶ ಬಂದು ಒಂದು ತಿಂಗಳು ಕಳೆಯುತ್ತಾ ಬಂದರೂ ಸಚಿವರಿಗೆ ಜಿಲ್ಲೆ ನೆನಪಾಗಿಲ್ಲ ಎಂಬುದು ಜನರ ಆರೋಪ.

ಆದ್ದರಿಂದ, ಫೇಸ್‌ಬುಕ್‌ನಲ್ಲಿ ಕಾಣೆಯಾಗಿದ್ದಾರೆ ಎಂದು ಹಾಕಿ ವಿವರಗಳನ್ನು ಪೋಸ್ಟ್ ಮಾಡಲಾಗಿದೆ. ಇವರು ಸಿಕ್ಕರೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ಒಪ್ಪಿಸತಕ್ಕದ್ದು ಎಂದು ಫೇಸ್‌ಬುಕ್‌ನಲ್ಲಿ ಬರೆಯಲಾಗಿದೆ.
ಫೇಸ್ ಬುಕ್ ಪೋಸ್ಟ್‌ನಲ್ಲಿ ಏನಿದೆ?
ಈಗ ಕಾಣೆ ಆದವರ ಬಗ್ಗೆ ಪ್ರಕಟಣೆ...
ಹೆಸರು - ಬಿ ಜಡ್ ಜಮೀರ್ ಅಹಮದ್ ಖಾನ್
ಬಣ್ಣ - ಗೋಧಿ ಬಣ್ಣ ಸಾಧಾರಣ ಮೈಕಟ್ಟು
ಎತ್ತರ - ಸುಮಾರು 5 ಅಡಿ
ಕೊನೆಯ ಬಾರಿ ಕಂಡಿದ್ದು - ಬ್ಯಾಡಗಿ ತಾಲ್ಲೂಕಿನಲ್ಲಿ
ಇವರು ಸಿಕ್ಕಲ್ಲಿ ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಗೆ ಒಪ್ಪಿಸತಕ್ಕದ್ದು.
ಸಾಧ್ಯವಾದಷ್ಟು ಶೇರ್ ಮಾಡಿ
ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಜಮೀರ್ ಅಹಮದ್ ಖಾನ್ ಅವರು ಜಿಲ್ಲೆಯ ರೈತರಿಗೆ ಅಣೂರು ಕೆರೆ ತುಂಬಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವ ಯೋಜನೆಯನ್ನು ಕೈಗೊಂಡಿಲ್ಲ. ಜಿಲ್ಲೆಗೂ ಆಗಮಿಸಿಲ್ಲ ಎಂದು ರೈತರು ಆರೋಪಿಸಿದ್ದಾರೆ.












Click it and Unblock the Notifications