• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವೇಗೌಡ್ರ ಮನಸ್ಸಿನಲ್ಲಿದ್ದಿದ್ದು ಈಗ ಹೊರಗೆ ಬಂತು ನೋಡಿ: ಬೊಮ್ಮಾಯಿ

|

ಹಾವೇರಿ, ಆಗಸ್ಟ್ 22: ದೇವೇಗೌಡರ ಮನಸ್ಸಿನಲ್ಲಿದ್ದ ಸತ್ಯ ಈಗ ಹೊರಗೆ ಹಾಕಿದ್ದಾರೆ. ಅದು ನೂರಕ್ಕೆ ನೂರು ಸತ್ಯ ಎಂದು ನೂತನ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಮನಸ್ಸಿನಲ್ಲಿ ಇಷ್ಟು ದಿನಗಳಿಂದ ಹೊತ್ತುಕೊಂಡಿದ್ದ ಸತ್ಯ ಈಗ ಎಲ್ಲರ ಮುಂದೆ ಬಂದಿದೆ.ಯಾವ ವಿಚಾರವನ್ನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದರು ಅದು ಹೊರಗೆ ಬಂದಿದೆ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಗುಡುಗಿದ ದೇವೇಗೌಡ

ಇದೇ ವೇಳೆ ಸಂತ್ರಸ್ತರಿಗೆ ಪರಿಹಾರ ಹಣದ ಕುರಿತು ಮಾತನಾಡಿ, ಸಂತ್ರಸ್ತರಿಗೆ 10 ಸಾವಿರ ಪರಿಹಾರ ಹಣ ಕೊಡುವುದಕ್ಕೆ ಏಕೆ ವಿಳಂಬವಾಯಿತು.

ಮೊದಲು ನಿಮ್ಮ ಮನೋಭಾವನೆ ಬದಲಾಯಿಸಿಕೊಳ್ಳಿ. ಹೆಚ್ಚು ಮಳೆಯಾದಲ್ಲಿ ಕಡಿಮೆ ಪರಿಹಾರ ಕೊಡುತ್ತೀರಾ ಎಂದು ಶಿಗ್ಗಾಂವಿ ತಹಶೀಲ್ದಾರ್ ವಿರುದ್ಧ ಕಿಡಿಕಾರಿದರು. ಅಲ್ಲದೇ ಪ್ರತಿ ತಹಶೀಲ್ದಾರಗಳಿಗೂ ಹೀಗೆ ಮಾಡಿದರೆ ನಿಮ್ಮನ್ನು ಯಾಕೆ ಅಮಾನತುಗೊಳಿಸಬಾರದು ಎಂದು ಪ್ರಶ್ನಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದರು.

ದೇವೇಗೌಡರು ಏನು ಹೇಳಿದ್ದರು?: ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ನಮ್ಮ ವಿರುದ್ಧ ಬಹಿರಂಗವಾಗಿ ಕೆಲಸ ಮಾಡಿದ್ದರಿಂದ ತುಮಕೂರಿನಲ್ಲಿ ನಾನು ಮತ್ತು ಮಂಡ್ಯದಲ್ಲಿ ನಿಖಿಲ್ ಸೋಲಲು ಕಾರಣವಾಯಿತು. ನಮ್ಮ ವಿರುದ್ಧ ಕೆಲಸ ಮಾಡಿದ ಕಾಂಗ್ರೆಸ್ಸಿನವರಿಗೆ ಅವರು ನೋಟಿಸ್ ನೀಡಲಿಲ್ಲ.

ಮೈತ್ರಿ ಸರಕಾರ ಬೀಳಲು, ತಾವು- ತಮ್ಮ ಮೊಮ್ಮಗನ ಸೋಲಿಗೆ ಕಾರಣ ಹೊರಗಿಟ್ಟ ದೇವೇಗೌಡರು

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ಕಾಂಗ್ರೆಸ್‌ನ ಉದ್ದೇಶವಾಗಿತ್ತು ಅದಕ್ಕಾಗಿ ಕುಮಾರಸ್ವಾಮಿಯನ್ನು ಬಳಸಿಕೊಂಡಿದ್ದರು. ನಾವೇನು ಕುಮಾರಸ್ವಾಮಿಯನ್ನು ಸಿಎಂ ಮಾಡಿ ಎಂದು ಕೇಳಿಕೊಂಡಿರಲಿಲ್ಲ, ಅವರೇ ಒತ್ತಾಯ ಮಾಡಿದ್ದರು. ಹಾಗಾಗಿ ಒಪ್ಪಿಕೊಂಡಿದ್ದೆವು. ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ದೇವೇಗೌಡರು ಆರೋಪಿಸಿದ್ದರು.

English summary
The truth in Deve Gowda's mind has now been thrown out. New Minister Basavaraja Bommai has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X