Vande Bharat Express: ವಂದೇ ಭಾರತ್ ಎಕ್ಸ್ ಪ್ರೆಸ್: ಕರ್ನಾಟಕದ ಈ ಜಿಲ್ಲೆಗೆ ಮತ್ತೊಂದು ಗುಡ್‌ನ್ಯೂಸ್‌!

Vande Bharat Express: ಭಾರತೀಯ ರೈಲ್ವೆಯು ದೇಶದಾದ್ಯಂತ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಪರಿಚಯಿಸಿದೆ. ಕರ್ನಾಟಕಕ್ಕೂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಿಂದ ಭರ್ಜರಿ ಲಾಭವಾಗಿದೆ. ಇದೇ ಸಂದರ್ಭದಲ್ಲಿ ಮತ್ತೊಂದು ಗುಡ್‌ನ್ಯೂಸ್‌ ಕೊಡಲಾಗಿದೆ. ಇದರಿಂದ ಉತ್ತರ ಕರ್ನಾಟಕದ ಮತ್ತೊಂದು ಜಿಲ್ಲೆಗೆ ಭರ್ಜರಿ ಲಾಭವಾಗುತ್ತಿದೆ. ಅದೇನು ಎನ್ನುವ ವಿವರ ನೋಡೋಣ.

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ನಿಲುಗಡೆಯ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್‌ ನೀಡಲಾಗಿದೆ. ಈಚೆಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಹಾವೇರಿಗೂ ವಿಸ್ತರಿಸಲಾಗಿದೆ. ಹೀಗಾಗಿ ಈ ಭಾಗದಿಂದ ಬೆಂಗಳೂರು ಮಹಾನಗರ ಸೇರಿದಂತೆ ವಿವಿಧ ಊರುಗಳಿಗೆ ಪ್ರಯಾಣಿಸುವವರಿಗೆ ಅನುಕೂಲವಾಗಿದೆ. ಇದೀಗ ನಿಲುಗಡೆಯ ಅವಧಿಯನ್ನೂ ಸಹ ವಿಸ್ತರಿಸಲಾಗಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Vande Bharat Express Another Good News for Haveri District of Karnataka

ಈಚೆಗೆ ಹಾವೇರಿ ಜಿಲ್ಲೆಗೂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಪರಿಚಯಿಸಲಾಗಿದೆ. ಇದರಿಂದ ಈ ಭಾಗದಿಂದ ಧಾರವಾಡ ಹಾಗೂ ಬೆಂಗಳೂರಿಗೆ ಹೋಗುವವರಿಗೆ ಲಾಭವಾಗಿದೆ. ಇದೀಗ ಮತ್ತೊಂದು ಸಂತೋಷದ ವಿಷಯವನ್ನು ರೈಲ್ವೆ ಇಲಾಖೆ ನೀಡಿದೆ. ರೈಲ್ವೆ ಮಂಡಳಿಯು ರೈಲು ಸಂಖ್ಯೆ 20661/20662 ಕೆಎಸ್ಆರ್ ಬೆಂಗಳೂರು-ಧಾರವಾಡ-ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಹಾವೇರಿಯ ಶ್ರೀ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಎರಡು ನಿಮಿಷಗಳ ನಿಲುಗಡೆಗೆ ಅನುಮೋದನೆ ನೀಡಿದೆ.

Take a Poll

ಈ ಹೊಸ ನಿಲುಗಡೆಯು ಏಪ್ರಿಲ್ 11, 2025 ರಿಂದ ರೈಲು ಸಂಖ್ಯೆ 20662 ಧಾರವಾಡ-ಕೆಎಸ್ಆರ್ ಬೆಂಗಳೂರಿಗೆ ಮತ್ತು ಏಪ್ರಿಲ್ 12, 2025 ರಿಂದ ರೈಲು ಸಂಖ್ಯೆ 20661 ಕೆಎಸ್ಆರ್ ಬೆಂಗಳೂರು-ಧಾರವಾಡಕ್ಕೆ ಜಾರಿಗೆ ಬರಲಿದೆ. ಹಾವೇರಿಯಲ್ಲಿ ರೈಲುಗಳ ಆಗಮನ / ನಿರ್ಗಮನ ಸಮಯಗಳು ಈ ಕೆಳಗಿನಂತಿವೆ

* ಧಾರವಾಡದಿಂದ ಬೆಂಗಳೂರಿಗೆ ತೆರಳುವ 20662 ಸಂಖ್ಯೆಯ ರೈಲು ಎಸ್ಎಂಎಂ ಹಾವೇರಿ ನಿಲ್ದಾಣಕ್ಕೆ ಮಧ್ಯಾಹ್ನ 2:40ಕ್ಕೆ ಆಗಮಿಸಿ, 2:42ಕ್ಕೆ ಹೊರಡಲಿದೆ.

* ಬೆಂಗಳೂರಿನಿಂದ ಧಾರವಾಡಕ್ಕೆ ತೆರಳುವ 20661 ಸಂಖ್ಯೆಯ ರೈಲು ಎಸ್ಎಂಎಂ ಹಾವೇರಿ ನಿಲ್ದಾಣಕ್ಕೆ ಬೆಳಗ್ಗೆ 10:10ಕ್ಕೆ ಆಗಮಿಸಿ, 10:12ಕ್ಕೆ ಹೊರಡಲಿದೆ.

* ನಿಟ್ಟೂರಿನಲ್ಲಿ ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್ ಪ್ರೆಸ್‌ಗೆ ಒಂದು ನಿಮಿಷ ನಿಲುಗಡೆ ವ್ಯವಸ್ಥೆ ಇರಲಿದೆ.

ರೈಲ್ವೆ ಮಂಡಳಿಯು ರೈಲು ಸಂಖ್ಯೆ 16239/16240 ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್ ಪ್ರೆಸ್ ರೈಲುಗಳಿಗೆ ನಿಟ್ಟೂರು ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಒಂದು ನಿಮಿಷದ ನಿಲುಗಡೆಗೆ ಅನುಮೋದನೆ ನೀಡಿದೆ. ಈ ನಿಲುಗಡೆಯು ಏಪ್ರಿಲ್ 10, 2025 ರಿಂದ ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರಿಗೆ ಮತ್ತು ಏಪ್ರಿಲ್ 11, 2025 ರಿಂದ ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರಕ್ಕೆ ಜಾರಿಗೆ ಬರಲಿದೆ. ನಿಟ್ಟೂರಿನಲ್ಲಿ ರೈಲುಗಳ ಆಗಮನ / ನಿರ್ಗಮನ ಸಮಯ ಈ ಕೆಳಗಿನಂತಿರುತ್ತದೆ:

* ಯಶವಂತಪುರದಿಂದ ಚಿಕ್ಕಮಗಳೂರಿಗೆ ತೆರಳುವ 16240 ಸಂಖ್ಯೆಯ ರೈಲು ನಿಟ್ಟೂರು ನಿಲ್ದಾಣಕ್ಕೆ ಸಂಜೆ 4:57ಕ್ಕೆ ಆಗಮಿಸಿ, 4:58ಕ್ಕೆ ಹೊರಡಲಿದೆ.

* ಚಿಕ್ಕಮಗಳೂರಿನಿಂದ ಯಶವಂತಪುರಕ್ಕೆ ತೆರಳುವ 16239 ಸಂಖ್ಯೆಯ ರೈಲ ನಿಟ್ಟೂರು ನಿಲ್ದಾಣಕ್ಕೆ ಬೆಳಗ್ಗೆ 11:22ಕ್ಕೆ ಆಗಮಿಸಿ, 11:23ಕ್ಕೆ ಹೊರಡಲಿದೆ ಎಂದು ರೈಲ್ವೆ ಪ್ರಕಟಣೆಯು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+