ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿ: SSLC ಪರೀಕ್ಷಾ ಕೊಠಡಿಯಲ್ಲೇ ಹೃದಯಾಘಾತದಿಂದ ಶಿಕ್ಷಕ ಸಾವು

By Manjunatha
|
Google Oneindia Kannada News

ಹಾವೇರಿ, ಮಾರ್ಚ್ 23: ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ವೇಳೆ ಜಾಗೃತ ದಳದ ಸದಸ್ಯರಾಗಿ ಪರೀಕ್ಷಾ ಕೇಂದ್ರದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಶಿಕ್ಷಕರೊಬ್ಬರು ಪರೀಕ್ಷಾ ಕೊಠಡಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹಾವೇರಿ ಜಿಲ್ಲೆಯ ಗುತ್ತಲದ ಆರ್‌.ಆರ್.ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪರೀಕ್ಷಾ ಕಾರ್ಯದಲ್ಲಿ ನಿರತರಾಗಿದ್ದ ಎಸ್.ಆರ್.ಕೊರವರ (57) ಎಂಬುವರು ತೀವ್ರ ಹೃದಯಾಘಾತದಿಂದ ಪರೀಕ್ಷಾ ಕೊಠಡಿಯಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.

ಮಾ.23ರಿಂದ ಏ.6ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಮಾ.23ರಿಂದ ಏ.6ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ

ಕೊರವರ ಅವರು ಕುಸಿದು ಬೀಳೂತ್ತಿದ್ದಂತೆ ವಿದ್ಯಾರ್ಥಿಗಳು ಅವಕ್ಕಾಗಿ ಕೂಗಿಕೊಂಡರು ಅಲ್ಲೇ ಇದ್ದ ಇತರ ಸಿಬ್ಬಂದಿ ಮತ್ತು ಭದ್ರತೆಗೆ ಬಂದಿದ್ದ ಪೊಲೀಸ್ ಸಿಬ್ಬಂದಿ ಕೂಡಲೇ ಕೊರವರ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಆದರೆ ವೈದ್ಯರು ಜೀವ ಹೋಗಿರುವುದನ್ನು ದೃಢಪಡಿಸಿದ್ದಾರೆ.

Teacher died from heart attack while invigilating SSLC exam

ಅವಘಡ ಸಂಭವಿಸಿದರೂ ಕೂಡ ಗುತ್ತಲದ ಆರ್.ಆರ್.ಇಂಗ್ಲೀಷ್ ಮೀಡಿಯಂ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಸ್ಥಗಿತಗೊಳಿಸದೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪರೀಕ್ಷೆಯನ್ನು ಮುಂದುವರೆಸಿದ್ದಾರೆ. ಹಾವೇರಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಎಸ್.ಎಸ್.ಎಲ್.ಸಿ. ಪರೀಕ್ಷೆ ಸಂಬಂಧಿ ದೂರುಗಳಿಗೆ ಸಹಾಯವಾಣಿಎಸ್.ಎಸ್.ಎಲ್.ಸಿ. ಪರೀಕ್ಷೆ ಸಂಬಂಧಿ ದೂರುಗಳಿಗೆ ಸಹಾಯವಾಣಿ

English summary
Teacher HR Koravara died from severe heart attack while invigilating the SSLC exam in Haveri's Guthala exam center. He is 57 years old. He was Head master in government High school Haveri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X