ಲೈಂಗಿಕ ದೌರ್ಜನ್ಯ; ಆರೋಪಿಗೆ ಜೀವಾವಧಿ ಶಿಕ್ಷೆ
ಹಾವೇರಿ, ಮಾರ್ಚ್ 5: ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾವೇರಿ ತಾಲೂಕಿನ ನೆಲೋಗಲ್ ಗ್ರಾಮದ 20 ವರ್ಷದ ಆರೋಪಿ ಮಹಾರುದ್ರಗೌಡ ವೀರಭದ್ರಗೌಡ ಸಿದ್ಧನಗೌಡ್ರ ಎಂಬವನಿಗೆ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಕಿರಣ ಕಿಣಿ ಅವರು ತೀರ್ಪು ನೀಡಿದ್ದಾರೆ. ಆರೋಪಿಯು ಎಸಗಿದ ಕೃತ್ಯದ ಕುರಿತು ಯಾರಿಗಾದರೂ ಹೇಳಿದರೆ ಪ್ರಾಣ ತೆಗೆಯುವುದಾಗಿ ಜೀವಬೆರದರಿಕೆ ಹಾಕಿದ್ದಾಗಿ ನೊಂದ ಯುವತಿ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಮೇಲಿನಂತೆ ತೀರ್ಪು ನೀಡಿದ್ದು, ದಂಡದ ಹಣದಲ್ಲಿ ನೊಂದ ಯುವತಿಗೆ 25 ಸಾವಿರ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಡ ಗೆಜ್ಜಿಹಳ್ಳಿ ಅವರು ವಾದ ಮಂಡಿಸಿದ್ದರು.












Click it and Unblock the Notifications