• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಬಾರಿ ಯಾರಾಗುತ್ತಾರೋ ರಾಣೆಬೆನ್ನೂರಿನ ರಾಜ?

|

ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದರೆ, ಹಾವೇರಿ ಜಿಲ್ಲೆಯಲ್ಲೇ ಎರಡು ಕ್ಷೇತ್ರಗಳಲ್ಲಿ ಈ ಬಾರಿ ಮಧ್ಯಂತರ ಚುನಾವಣೆ ನಡೆಯುತ್ತಿದೆ. ಒಂದು ಹಿರೇಕೆರೂರು ಆದರೆ ಮತ್ತೊಂದು ಕ್ಷೇತ್ರವೇ ರಾಣೆಬೆನ್ನೂರು. ಬಿಜೆಪಿ, ಕಾಂಗ್ರೆಸ್ ಸಹವಾಸವೇ ಬೇಡ ಎಂದುಕೊಂಡ ಕ್ಷೇತ್ರದ ಮತದಾರರು ಕೆಪಿಜೆಪಿ ಅಭ್ಯರ್ಥಿಗೆ ಮತ ನೀಡಿದ್ದರು. 2019ರಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.

2018ರಲ್ಲಿ ರಾಣೆಬೆನ್ನೂರು ಮತದಾರರ ಮನಸು ಗೆದ್ದ ಶಾಸಕ ಆರ್.ಶಂಕರ್, ಈ ಬಾರಿ ಕಣದಲ್ಲಿಲ್ಲ. ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಕಾಂಗ್ರೆಸ್ ನತ್ತ ವಾಲಿದ್ದ ರಾಣೆಬೆನ್ನೂರಿನ ಶಾಸಕ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಜಿಗಿದರು. ಇದರಿಂದ ಅನರ್ಹಗೊಂಡ ಶಾಸಕ ಆರ್.ಶಂಕರ್, ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೂ ಕಳೆದುಕೊಂಡರು.

LIVE : ಕರ್ನಾಟಕದ ಉಪ ಚುನಾವಣಾ ಕದನ: ಯಶವಂತಪುರ ಕ್ಷೇತ್ರದಲ್ಲಿ ನಕಲಿ ಮತದಾನLIVE : ಕರ್ನಾಟಕದ ಉಪ ಚುನಾವಣಾ ಕದನ: ಯಶವಂತಪುರ ಕ್ಷೇತ್ರದಲ್ಲಿ ನಕಲಿ ಮತದಾನ

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ರಾಣೆಬೆನ್ನೂರಿನಲ್ಲಿ ಕೆ.ಬಿ.ಕೋಳಿವಾಡ ಮೊದಲು ಶಾಸಕರಾಗಿದ್ದರು. ಆದರೆ, 2018ರಲ್ಲಿ ತಮ್ಮ ಸ್ಥಾನವನ್ನು ಕಳೆದಕೊಂಡ ಕಾಂಗ್ರೆಸ್ ಹಿರಿಯ ನಾಯಕ ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅರುಣಕುಮಾರ್ ರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ. ಇನ್ನು ಜೆಡಿಎಸ್ ನಿಂದ ಮಲ್ಲಿಕಾರ್ಜುನಪ್ಪ ರುದ್ರಪ್ಪ ಹಲಗೇರಿ ಸ್ಪರ್ಧಿಸಿದ್ದಾರೆ.

ರಾಣೆಬೆನ್ನೂರು ಕ್ಷೇತ್ರಲ್ಲಿ ಒಟ್ಟು 14 ಅಭ್ಯರ್ಥಿಗಳಲ್ಲಿ ಉಮೇದುವಾರಿಕೆ ಸಲ್ಲಿಸಿದ್ದು ಪಕ್ಷೇತರರಾಗಿದ್ದ ಹನುಮಂತರಾಜು ಮಾದೇಗೌಡ ಚನ್ನಗೌಡ್ರ, ಜಗದೀಶ ಮಲ್ಲೇಶಪ್ಪ ಯಲಿಗಾರ, ಮೌಲಾಸಾಬ ಜಮಾಲಸಾಬ ಹಿತ್ತಲಮನಿ, ಹನುಮಂತಪ್ಪ ದೇವೇಂದ್ರಪ್ಪ ಕಬ್ಬಾರ ನಾಮಪತ್ರ ಹಿಂಪಡೆದಿದ್ದಾರೆ. ಅಶೋಕ ಕುಮಾರ ನಾಯಕ್ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿತ್ತು. ಅಂತಿಮವಾಗಿ 9 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಗೋಕಾಕ್‌ನಲ್ಲಿ ಸಹೋದರರು ಎದುರಾಳಿಗಳು; ಯಾರಿಗೆ ಗೆಲುವು?ಗೋಕಾಕ್‌ನಲ್ಲಿ ಸಹೋದರರು ಎದುರಾಳಿಗಳು; ಯಾರಿಗೆ ಗೆಲುವು?

ರಾಣೆಬೆನ್ನೂರು ಕ್ಷೇತ್ರಗಳಲ್ಲಿ ತೆರೆದ ಒಟ್ಟು ಮತಗಟ್ಟೆಗಳ ಸಂಖ್ಯೆ: 09

- ಅರುಣಕುಮಾರ ಮಹೇಶ್ವರಪ್ಪ ಗುತ್ತೂರ (ಬಿಜೆಪಿ),

- ಕೃಷ್ಣಪ್ಪ ಭೀಮಪ್ಪ ಕೋಳಿವಾಡ (ಭಾ.ರಾ.ಕಾಂಗ್ರೆಸ್)

- ಮಲ್ಲಿಕಾರ್ಜುನಪ್ಪ ರುದ್ರಪ್ಪ ಹಲಗೇರಿ (ಜೆ.ಡಿ.ಎಸ್),

- ಗೌತಮ ಶಿವಪ್ಪ ಕಾಂಬಳೆ(ಯುವ ಕರ್ನಾಟಕ ಪಕ್ಷ),

- ನಾಗಪ್ಪ ನೀಲಪ್ಪ ಸಂಶಿ(ಕರ್ನಾಟಕ ಜನತಾ ಪಕ್ಷ),

- ಈಶ್ವರ ಎಚ್.ಪಾಟೀಲ (ಉತ್ತಮ ಪ್ರಜಾಕೀಯ ಪಾರ್ಟಿ),

- ಡಾ.ಜಿ.ಎಂ.ಕಲ್ಲೇಶ್ವರಪ್ಪ (ಪಕ್ಷೇತರ),

- ಪ್ರವೀಣಕುಮಾರ ಎಂ.ಎಸ್.ಮಂಜುನಾಥ (ಪಕ್ಷೇತರ),

- ಶಿವಯೋಗಿಸ್ವಾಮಿ ಮಹಾನುಭಾವಿಮಠ(ಪಕ್ಷೇತರ)

ಹಿರೇಕೆರೂರಿನಲ್ಲಿ ಹಾಕೋದ್ಯಾರು ಗೆಲುವಿನ ಕೇಕೆ?ಹಿರೇಕೆರೂರಿನಲ್ಲಿ ಹಾಕೋದ್ಯಾರು ಗೆಲುವಿನ ಕೇಕೆ?

ರಾಣೆಬೆನ್ನೂರು ಕ್ಷೇತ್ರಗಳಲ್ಲಿ ತೆರೆದ ಮತಗಟ್ಟೆಗಳ ವಿವರ:

ಒಟ್ಟು ಮತಗಟ್ಟೆಗಳ ಸಂಖ್ಯೆ: 266

ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ: 54

ಪಿಂಕ್ ಮತಗಟ್ಟೆಗಳ ಸಂಖ್ಯೆ: 1

ವಿಕಲಚೇತನ ಮತಗಟ್ಟೆ: 1

ಮಾದರಿ ಮತಗಟ್ಟೆ: 1

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮತದಾರರ ವಿವರ:

ಒಟ್ಟು ಮತದಾರರ ಸಂಖ್ಯೆ: 2, 33, 137

ಮಹಿಳಾ ಮತದಾರರು: 1, 14, 497

ಪುರುಷ ಮತದಾರರು: 1, 18, 627

ಇತರೆ ಮತದಾರರು: 13

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರ:

ಲಿಂಗಾಯತರು: 58, 505

ಮುಸ್ಲಿಂ: 36, 580

ಕುರುಬ: 34, 939

ಪರಿಶಿಷ್ಠ ಜಾತಿ: 32, 067

ಪರಿಶಿಷ್ಠ ಪಂಗಡ: 21, 000

ಇತರೆ: 50, 046

ಜಾತಿವಾರು ಲೆಕ್ಕಾಚಾರ:

ಕಳೆದ 2018ರ ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ಕೆ.ಬಿ.ಕೋಳಿವಾಡರೇ ತೀವ್ರ ಮುಖಭಂಗ ಅನುಭವಿಸಿದ್ದರು. ಕೆಪಿಜೆಪಿ ಅಭ್ಯರ್ಥಿ ಆರ್.ಶಂಕರ್ ವಿರುದ್ಧ ಸೋಲೊಪ್ಪಿಕೊಂಡಿದ್ದರು. ಕೆಪಿಜೆಪಿಯಿಂದ ಕಣಕ್ಕೆ ಇಳಿದಿದ್ದ ಆರ್.ಶಂಕರ್ 63 ಸಾವಿರದ 910 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ 59 ಸಾವಿರದ 575 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

English summary
Karnataka By-Poll: Tight Fight In Ranebennuru Constituency Between BJP Candidate Arunakumar And Congress Senoir Leader K B Koliwad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X