• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುನಾವಣೆ ವೇಳೆ ಬಂದ ಐಟಿ; ಕಾಂಗ್ರೆಸ್ ಅಭ್ಯರ್ಥಿ ಮನೆಯಲ್ಲಿ ಶೋಧ!

|

ಹಾವೇರಿ, ಡಿಸೆಂಬರ್ 04 : 15 ಕ್ಷೇತ್ರಗಳ ಉಪ ಚುನಾವಣೆಗೆ ಒಂದು ದಿನ ಬಾಕಿ ಇದೆ. ಆದಾಯ ತೆರಿಗೆ ಅಧಿಕಾರಿಗಳು ಕರ್ನಾಟಕದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ ದಾಳಿ ನಡೆಸಲಾಗಿದೆ.

ಮಂಗಳವಾರ ರಾತ್ರಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಐಟಿ ದಾಳಿ ನಡೆದಿದೆ. ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಕೋಳಿವಾಡ ನಿವಾಸದಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಡಿಕೆಶಿಗೆ ಐಟಿ ನೋಟಿಸ್, ಹುಬ್ಬಳ್ಳಿಯಿಂದ ತುರ್ತಾಗಿ ವಾಪಸ್! ಡಿಕೆಶಿಗೆ ಐಟಿ ನೋಟಿಸ್, ಹುಬ್ಬಳ್ಳಿಯಿಂದ ತುರ್ತಾಗಿ ವಾಪಸ್!

ಐಟಿ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ವಾಗೀಶ್ ನಗರದ 6ನೇ ಕ್ರಾಸ್‌ನಲ್ಲಿರುವ ಕೆ. ಬಿ. ಕೋಳಿವಾಡ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಉಪ ಚುನಾವಣೆಗೆ ಹಂಚಲು ಹಣ, ಮದ್ಯ ಸಂಗ್ರಹ ಮಾಡಿದ್ದಾರೆ ಎಂಬ ಆರೋಪದ ಮೇಲೆ ದಾಳಿ ನಡೆದಿದೆ.

ಕಪ್ಪುಹಣ ಬಳಕೆ ಆರೋಪ, ಕಾಂಗ್ರೆಸ್ಸಿಗೆ ಐಟಿ ಶೋಕಾಸ್ ನೋಟಿಸ್ಕಪ್ಪುಹಣ ಬಳಕೆ ಆರೋಪ, ಕಾಂಗ್ರೆಸ್ಸಿಗೆ ಐಟಿ ಶೋಕಾಸ್ ನೋಟಿಸ್

ಹುಬ್ಬಳ್ಳಿಯಿಂದ ಬಂದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಐಟಿ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೆ. ಬಿ. ಕೋಳಿವಾಡ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.

ಉಪ ಚುನಾವಣೆ; ಮತದಾನಕ್ಕೆ ಈ ದಾಖಲೆ ಬಳಸಬಹುದು ಉಪ ಚುನಾವಣೆ; ಮತದಾನಕ್ಕೆ ಈ ದಾಖಲೆ ಬಳಸಬಹುದು

ಐಟಿ ದಾಳಿಯಲ್ಲಿ ಸಿಕ್ಕಿದ್ದೇನು?

ಐಟಿ ದಾಳಿಯಲ್ಲಿ ಸಿಕ್ಕಿದ್ದೇನು?

ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಕೋಳಿವಾಡ ನಿವಾಸದಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ, ಐಟಿ ಮತ್ತು ಅಬಕಾರಿ ಇಲಾಖೆ ಜಂಟಿ ದಾಳಿಯ ವೇಳೆ ಏನು ಸಿಕ್ಕಿತು? ಎಂಬ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಗೃಹ ಸಚಿವರ ವಿರುದ್ಧ ಆಕ್ರೋಶ

ಗೃಹ ಸಚಿವರ ವಿರುದ್ಧ ಆಕ್ರೋಶ

ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕರ್ನಾಟಕ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ರಾಣೆಬೆನ್ನೂರು ಉಪ ಚುನಾವಣೆಯಲ್ಲಿ ಸೋಲುವ ಭಯದಿಂದ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಗುರುವಾರ ಉಪ ಚುನಾವಣೆ

ಗುರುವಾರ ಉಪ ಚುನಾವಣೆ

ಡಿಸೆಂಬರ್ 5ರಂದು ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಅರುಣ್ ಕುಮಾರ್ ಪೂಜಾರಿ, ಕಾಂಗ್ರೆಸ್‌ನಿಂದ ಕೆ. ಬಿ. ಕೋಳಿವಾಡ, ಜೆಡಿಎಸ್‌ನಿಂದ ಮಲ್ಲಿಕಾರ್ಜುನಪ್ಪ ಹಲಗೇರಿ ಸೇರಿ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರಾಣೆಬೆನ್ನೂರು ಕ್ಷೇತ್ರ

ರಾಣೆಬೆನ್ನೂರು ಕ್ಷೇತ್ರ

ಕ್ಷೇತ್ರದಲ್ಲಿ ಒಟ್ಟು 2,33,137 ಮತದಾರರು ಇದ್ದಾರೆ. ಇವರಲ್ಲಿ ಪುರುಷರು 1,18,627, ಮಹಿಳೆಯರು 1,14,497, ಇತರರು 14. ಡಿಸೆಂಬರ್ 5ರ ಗುರುವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆ ತನಕ ಮತದಾನ ಮಾಡಲು ಅವಕಾಶವಿದೆ.

English summary
The Income Tax Department on December 3, 2019 conducted raids on Rranebennur assembly seat Congress candidate K.B.Koliwada house. By election will be held on December 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X