ಬಿಜೆಪಿ ಆಫರ್ ಗಿಂತ ಡಬಲ್ ಕೊಡುತ್ತೇನೆ: ಎಚ್ಡಿಕೆ ವಿರುದ್ದ 'ಕೌರವ' ಹೊಸ ಬಾಂಬ್

Recommended Video

      ಬಿಜೆಪಿ ಕೊಡೋದಕ್ಕಿಂತ ಡಬಲ್ ಆಫರ್ ಕೊಡ್ತಿನಿ ಎಂದ ಕುಮಾರಣ್ಣ..? | Oneindia Kannada

      ಹಾವೇರಿ, ಸೆ 26: " ಒಬ್ಬ ಮುಖ್ಯಮಂತ್ರಿಯನ್ನು ಬದಲಾಯಿಸುವ ಶಕ್ತಿ ನಮ್ಮ ಜಿಲ್ಲೆಗಿದೆ. ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದರಿಂದ ಕುಮಾರಸ್ವಾಮಿ ಸಿಎಂ ಪದವಿಯನ್ನು ಕಳೆದುಕೊಂಡರು" ಎಂದು ಹಿರೇಕೇರೂರಿನ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.

      " ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಎರಡೆರಡು ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಯಾರಿಗಾದರೂ ಧನ್ಯವಾದ ಅವರು ಹೇಳಿದ್ದಾರಾ" ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದರು.

      " ನನ್ನ ಮಗಳಿಗೂ ಕುಮಾರಸ್ವಾಮಿ ಫೋನ್ ಮಾಡಿದ್ದರು. ಬಿಜೆಪಿಯವರು ಎಷ್ಟು ಕೊಡುತ್ತಾರೆ. ಅದರ ಡಬಲ್ ಕೊಡುತ್ತೇನೆ ಎನ್ನುವ ಆಫರ್ ಅನ್ನು ನೀಡಿದ್ದರು" ಎಂದು ಬಿ.ಸಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

      Former CM HD Kumaraswamy Offered Double, Whatever BJP Offered: B C Patil

      " ಕುಮಾರಸ್ವಾಮಿಯವರ ಯಾವುದೇ ಆಫರ್ ಗೆ ನಾವು ತಲೆಕೆಡಿಸಿಕೊಳ್ಳಲಿಲ್ಲ. ಎಲ್ಲಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೋ, ಅಂತಹ ಜಾಗದಲ್ಲಿ ನಾವಿರುವುದಿಲ್ಲ" ಎಂದು ಬಿ.ಸಿ.ಪಾಟೀಲ್ ಹೇಳಿದರು.

      " ಮಾತೆತ್ತಿದ್ದರೆ ಬ್ರದರ್ ಎನ್ನುತ್ತಾರೆ. ಮೂರು ಬಾರಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡುವುದಾಗಿ ಕೈಯೆತ್ತಿದ್ದರು. ಅವರಂತಹ ವಿಶ್ವಾಸದ್ರೋಹಿ ಇನ್ನೊಬ್ಬರಿಲ್ಲ" ಎಂದು ಪಾಟೀಲರು ಬೇಸರ ವ್ಯಕ್ತಪಡಿಸಿದರು.

      " ನಾನೇನು ಸಚಿವಸ್ಥಾನದ ಹಿಂದೆ ಬಿದ್ದಿರಲಿಲ್ಲ. ಕ್ಷೇತ್ರಕ್ಕೆ ಅನುದಾನವನ್ನೂ ನೀಡದಿದ್ದಾಗ, ಹೊರನಡೆಯುವ ನಿರ್ಧಾರಕ್ಕೆ ಬಂದೆ" ಎಂದು ಬಿ.ಸಿ.ಪಾಟೀಲ್, ಕಾರ್ಯಕರ್ತರ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+