Darshan Case: ಯಾರನ್ನು ಬಚಾವ್ ಮಾಡಲು ಆಗಲ್ಲ: ಕೌರವ ಹೇಳಿದ್ದೇನು?

ಹಾವೇರಿ, ಜೂನ್ 17: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಬಂಧನವಾಗಿದೆ. ಇದಕ್ಕೆ ಕಲಾವಿದರು ಸೇರಿದಂತೆ ರಾಜಕಾರಣಿಗಳು ಒಬ್ಬೊಬ್ಬರಾಗೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ದರ್ಶನ್ ಅನ್ನು ಕೃಷಿ ಇಲಾಖೆ ರಾಯಭಾರಿ ಮಾಡಿದ್ದ ವೇಳೆ ಬಿಜೆಪಿಯಿಂದ ಕೃಷಿ ಸಚಿವರಾಗಿದ್ದ ಬಿ.ಸಿ ಪಾಟೀಲ್ ಅವರು ಸಹ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಅದಕ್ಕೂ ಮೊದಲೇ ಅವರು ಒಬ್ಬರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಇಂದು ಅವರು ದರ್ಶನ್ ಪ್ರಕರಣ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ನಟ ದರ್ಶನ್ ಆ್ಯಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಸೋಮವಾರ ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದರು.

BC Patil Reaction Over Actor Darshan Arrested in Murder Case Who Ambassador of Agriculture

ನಾನು ಕೃಷಿ ಸಚಿವನಿದ್ದಾಗ ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್ ನೇಮಕವಾಗಿದ್ದರು. ಆಗ ಅವರು ಈ ರೀತಿ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ. ಜನಪ್ರಿಯ ನಟನಾಗಿದ್ದರಿಂದ ರಾಜ್ಯದ ರೈತರಿಗೆ ಶಕ್ತಿ ತುಂಬಲು ಅವರನ್ನು ರಾಯಭಾರಿ ಮಾಡಿದ್ದೇವು.

ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕು

ಇಂದು ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ನಡೆದಿರುವುದು ದುರದೃಷ್ಟಕರ. ಇದೊಂದು ಕ್ಷಮಿಸಲಾಗದ ಕೃತ್ಯವಾಗಿದೆ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದರು.

ಅಪರಾಧಿ ಎಂದಾದರೆ ಬ್ಯಾನ್ ಮಾಡಬಹುದು?

ಈ ನೆಲದ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಕೊಲೆಯ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು. ಇನ್ನೂ ದರ್ಶನ್ ಬ್ಯಾನ್ ಮಾಡುವ ವಿಚಾರ ಕುರಿತು ಮಾತನಾಡಿದ ಅವರು, ಈ ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾದರೆ ಚಿತ್ರರಂಗದಿಂದ ನಟ ದರ್ಶನ್ ನಿಷೇಧ (ಬ್ಯಾನ್) ಎಂದು ಹೇಳಲಾಗುತ್ತಿದೆ.

ಈಗ ದರ್ಶನ್ ಆರೋಪಿಯಾಗಿದ್ದು, ಅಪರಾಧಿ ಎಂದು ನ್ಯಾಯಾಲಯದಲ್ಲಿ ಸಾಬೀತಾದರೆ ಬ್ಯಾನ್ ಬಗ್ಗೆ ನಿರ್ಧಾರ ಮಾಡಬಹುದು. ಸದ್ಯ ಈ ಕೊಲೆ ಪ್ರಕರಣದ ನಿಷ್ಪಕ್ಷಪಾತ ಶಿಕ್ಷೆ ಆಗಬೇಕು ಎಂದು ಅವರು ಹೇಳಿದರು.

BC Patil Reaction Over Actor Darshan Arrested in Murder Case Who Ambassador of Agriculture

ಕೇಸಿನಲ್ಲಿ ಯಾರನ್ನು ಬಚಾವ್ ಮಾಡಲು ಆಗಲ್ಲ

ಪ್ರಕರಣದಿಂದ ದರ್ಶನ್ ನನ್ನು ಸೇಪ್ ಮಾಡಲು ಕೆಲ ರಾಜಕಾರಣಿಗಳಿಂದ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂಬ ವಿಚಾರಕ್ಕೆ ಅವರು ಉತ್ತರಿಸಿದರು. ಇದರಲ್ಲಿ ಯಾರನ್ನು ಬಚಾವ್ ಮಾಡಲು ಆಗಲ್ಲ. ನಾನೂ‌ ಕೂಡಾ ಪೊಲೀಸ್ ಆಗಿದ್ದವನು.

ತನಿಖೆಯ ಬಗ್ಗೆ ಪೊಲೀಸ್ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ.

ಯಾರು ಪ್ರಭಾವ ಬೀರುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ದರ್ಶನ್ ನನಗೆ ಕಲಾವಿದನಾಗಿ ಗೊತ್ತು. ಅವರ ಸಂಪೂರ್ಣ ವಿವರ ನನಗೆ ಗೊತ್ತಿಲ್ಲ. ನಟ ದರ್ಶನ್ ಬಳಿ ಯಾರು ಯಾರು ಇದ್ದರೂ ಎಂಬುದು ಗೊತ್ತಿಲ್ಲ ಎಂದು ಬಿಸಿ ಪಾಟೀಲ್ ಅವರು ತಿಳಿಸಿದ್ದಾರೆ.

ರಾಯಭಾರಿಯಾಗಿ ಮುಂದುವರಿಸಲ್ಲ

ಕಳೆದ ಬಾರಿ ಬಿಜೆಪಿ ಅವಧಿಯಲ್ಲಿ ನಟ ದರ್ಶನ್ ರಾಜ್ಯ ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ಸರ್ಕಾರವೇ ನೇಮಕ ಮಾಡಿತ್ತು. ಈ ವೇಳೆ ಬಿಸಿ ಪಾಟೀಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇನ್ನೂ ಇದೇ ವಿಚಾರವಾಗಿ ಇತ್ತೀಚೆಗೆ ಮಾತನಾಡಿದ್ದ ಹಾಲಿ ಸಚಿವ ಎಂಬಿ ಪಾಟೀಲ್ ಅವರು, ನಟ ದರ್ಶನ್‌ ಅನ್ನು ಕೃಷಿ ಇಲಾಖೆಯ ರಾಯಭಾರಿ ಆಗಿ ಮುಂದುವರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+