ಸತ್ಯಾತ್ಮ ತೀರ್ಥರ ಪೂರ್ವಾಶ್ರಮದ ಸೋದರಿ ಅಪಘಾತದಲ್ಲಿ ಸಾವು

Posted By: ಹಾವೇರಿ ಪ್ರತಿನಿಧಿ
Subscribe to Oneindia Kannada

ಹಾವೇರಿ, ಜನವರಿ 9: ಇಲ್ಲಿನ ರಾಣೆಬೆನ್ನೂರು ಸಮೀಪ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಸೇರಿ, ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ. ಅಪಘಾತದಲ್ಲಿ ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿ ಪೂರ್ವಾಶ್ರಮದ ಸಹೋದರಿ ಸ್ಥಳದಲ್ಲೇ ಸಾವನ್ನಪ್ಪಿದರು.

ಚಿತ್ರದುರ್ಗ: ಕ್ರೂಸರ್, ಲಾರಿ ಡಿಕ್ಕಿ: ಸ್ಥಳದಲ್ಲೇ ಐವರ ದುರ್ಮರಣ

ರಾಣೆಬೆನ್ನೂರು ಸಮೀಪ ಮಂಗಳವಾರ ಬೆಳಗ್ಗೆ ಕಾರು ಮಗುಚಿ ಈ ದುರಂತ ಸಂಭವಿಸಿತ್ತು. ಆ ನಂತರ ಘಟನೆಯಲ್ಲಿ ಗಾಯಗೊಂಡಿದ್ದ ಇತರ ಮೂವರನ್ನು ದಾವಣಗೆರೆ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರ ರಾಣೆಬೆನ್ನೂರಿನ ಕರೂರು ಹೌಸ್ ಬಳಿ ಈ ಘಟನೆ ಸಂಭವಿಸಿತ್ತು.

3 died in an accident near Ranebennur

ಆರಾಧನೆಯಲ್ಲಿ ಭಾಗವಹಿಸುವ ಸಲುವಾಗಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಉತ್ತರಾದಿ ಮಠದ ಸತ್ಯಾತ್ಮ ತೀರ್ಥರ ಪೂರ್ವಾಶ್ರಮದ ಸಹೋದರಿ ಸೀತಾದೇವಿ ಸ್ಥಳದಲ್ಲೇ ಮೃತ ಪಟ್ಟು, ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
3 died in an accident near Ranebennur, Haveri district on Tuesday. Seethadevi one among them.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ