ಕಲಬುರಗಿ To ಹಾಸನ: ಇದು ಕೊರೊನಾ ವೈರಸ್ ಲಿಂಕ್?

ಹಾಸನ, ಮಾರ್ಚ್.13: ಮಾರಕ ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ 76 ವರ್ಷದ ವೃದ್ಧ ಮಹ್ಮದ್ ಹುಸೇನ್ ಸಿದ್ಧಿಕಿ ಪ್ರಾಣ ಬಿಟ್ಟಿರುವುದು ಗೊತ್ತಿರುವ ವಿಚಾರ. ಇದರ ಬೆನ್ನಲ್ಲೇ ಕಲಬುರಗಿ ಮತ್ತು ಹಾಸನಕ್ಕೂ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ.

ಕಲಬುರಗಿಯ ಮೃತ ವೃದ್ಧನ ಜೊತೆಯಲ್ಲಿಯೇ ಹಾಸನ ಮೂಲದ ಇಬ್ಬರು ಮೆಕ್ಕಾ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಹಾಸನದಲ್ಲಿ ಈ ಮೊದಲೇ ಒಬ್ಬ ವ್ಯಕ್ತಿ ಕೊರೊನಾ ವೈರಸ್ ಸೋಂಕು ತಗಲಿರುವ ಅನುಮಾನದ ಮೇಲೆ ಐಸೋಲೇಟೆಡ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದರ ಬೆನ್ನಲ್ಲೇ ಮತ್ತಿಬ್ಬರಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.

Coronavirus: Two Affected Suspects Under Treatment In Hassan

ಐಸೋಲೇಟೆಡ್ ವಾರ್ಡ್ ಗಳಲ್ಲಿ ಶಂಕಿತರಿಗೆ ಚಿಕಿತ್ಸೆ:

ಕಲಬುರಗಿಯ ವೃದ್ಧ ಮಹ್ಮದ್ ಹುಸೇನ್ ಸಿದ್ದಿಕಿ ಜೊತೆಗೆ ಮೆಕ್ಕಾಗೆ ತೆರಳಿದ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಶಂಕೆ ವ್ಯಕ್ತಾವಾಗಿದೆ. ಹೀಗಾಗಿ ಇಬ್ಬರು ಶಂಕಿತರನ್ನು ಹಾಸನದಲ್ಲಿ ಐಸೋಲೇಟೆಡ್ ವಾರ್ಡ್ ಗಳಲ್ಲಿ ಇರಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 5 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+