ನೆಲಮಂಗಲ, ಚಿಕ್ಕಬಾಣವರದಲ್ಲಿ ಸೋಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲು ನಿಲುಗಡೆ: ಇಲ್ಲಿದೆ ದಿನಾಂಕ, ಸಮಯಗಳ ವಿವರ
Indian Railways: ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಅನುಕೂಲಕ್ಕೆ ತಕ್ಕಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲಿರುತ್ತದೆ. ಹಾಗೆಯೇ ಇದೀಗ ಇನ್ಮುಂದೆ ನೆಲಮಂಗಲ ಹಾಗೂ ಚಿಕ್ಕಬಾಣವರದಲ್ಲಿ ಸೋಲಾಪುರ-ಹಾಸನ ಡೈಲಿ ಎಕ್ಸ್‌ಪ್ರೆಸ್ ನಿಲುಗಡೆ ಇರಲಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ, ದಿನಾಂಕ ಹಾಗೂ ಸಮಯಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನೆಲಮಂಗಲದಲ್ಲಿ ನಿಲುಗಡೆ: ಸೋಲಾಪುರ-ಹಾಸನ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 11311/11312) ಇನ್ನೂ ಆರು ತಿಂಗಳು ನೆಲಮಂಗಲದಲ್ಲಿ ನಿಲುಗಡೆ ಹೊಂದಿರಲಿದೆ. ರೈಲು ಸಂಖ್ಯೆ 11311 ಡಿಸೆಂಬರ್ 16ರಿಂದ ಜೂನ್ 15ರ ವರೆಗೆ ಬೆಳಗ್ಗೆ 7.39ಕ್ಕೆ ನೆಲಮಂಗಲಕ್ಕೆ ಆಗಮಿಸಿ ಬೆಳಗ್ಗೆ 7.40ಕ್ಕೆ ನಿರ್ಗಮಿಸಲಿದೆ. ರೈಲು ಸಂಖ್ಯೆ 11312 ಡಿಸೆಂಬರ್ 17ರಿಂದ ಜೂನ್ 16ರ ವರೆಗೆ ಸಂಜೆ 5.59ಕ್ಕೆ ನೆಲಮಂಗಲಕ್ಕೆ ಆಗಮಿಸಿ 6.01ಕ್ಕೆ ಹೊರಡಲಿದೆ.

ಚಿಕ್ಕಬಾಣಾವರದಲ್ಲಿ ಎಲ್ಲಿವರೆಗೂ ನಿಲುಗಡೆ?: ರೈಲ್ವೆ ಇಲಾಖೆಯು ಚಿಕ್ಕಬಾಣಾವರದಲ್ಲಿ ರೈಲು ಸಂಖ್ಯೆ 16579/16580 (ಯಶವಂತಪುರ-ಶಿವಮೊಗ್ಗ ಪಟ್ಟಣ-ಯಶವಂತಪುರ ಇಂಟರ್‌ಸಿಟಿ ಡೈಲಿ ಎಕ್ಸ್‌ಪ್ರೆಸ್)ನ ಪ್ರಾಯೋಗಿಕ ನಿಲುಗಡೆಯನ್ನು ಮಾರ್ಚ್ 31ರ ವರೆಗೆ ವಿಸ್ತರಣೆ ಮಾಡಿದೆ. ಈ ಮೂಲಕ ಈ ಭಾಗಗಳ ಜನರಿಗೆ ಗುಡ್ ನ್ಯೂಸ್ ನೀಡಿದೆ.
ವಿಶೇಷ ಟೂರ್ ಪ್ಯಾಕೇಜ್: 2026ರ ಹೊಸ ವರ್ಷಕ್ಕೆ ವಿಶೇಷ ಟೂರ್ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಘೋಷಣೆ ಮಾಡಿದೆ. ಇದೇ ಡಿಸೆಂಬರ್ 30 ರಿಂದ ಫೆಬ್ರವರಿ 9, 2026ರ ಅವಧಿಯಲ್ಲಿ ಕಾಶಿ, ಗಯಾ , ಅಯೋಧ್ಯೆಯ ಪ್ರವಾಸ ಯೋಜನೆಯನ್ನು ರೂಪಿಸಲಾಗಿದೆ.
ಈ ಟೂರ್ ಪ್ಯಾಕೇಜ್‌ನಲ್ಲಿ ಬೆಳಗಿನ ಉಪಾಹಾರ ಮತ್ತು ಭೋಜನದ ವ್ಯವಸ್ಥೆ ಇರಲಿದೆ. ಅಲ್ಲದೆ, ಎಸಿ ಕೊಠಡಿಗಗಳು ಇರಲಿದ್ದು, 4 ರಾತ್ರಿಗಳ ಹೋಟೆಲ್ ವಸತಿಯ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ. ಡಿಸೆಂಬರ್ 30 ಮತ್ತು ಫೆಬ್ರುವರಿ 5ರಂದು 6E-463 ಸಂಖ್ಯೆಯ ವಿಮಾನ ಬೆಳಗ್ಗೆ 8.25ಕ್ಕೆ ಬೆಂಗಳೂರಿನಿಂದ ಹೊರಟು, 10:55ಕ್ಕೆ ಪಟ್ನಾಗೆ ತಲುಪಲಿದೆ.
ಜನವರಿ 30ರಂದು ಮತ್ತು ಫೆಬ್ರುವರಿ 9ರಂದು 6E-926 ಸಂಖ್ಯೆಯ ವಿಮಾನವು ಮಧ್ಯಾಹ್ನ 2.30ಕ್ಕೆ ಅಯೋಧ್ಯೆಯಿಂದ ಹೊರಟು, ಸಂಜೆ 5:05ಕ್ಕೆ ಬೆಂಗಳೂರಿಗೆ ತಲುಪಲಿದೆ. ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯ ಕಾರ್ಯಸಾಧ್ಯತೆಗೆ ತಕ್ಕಂತೆ ವಿಮಾನ ಸಮಯ ಅಥವಾ ವೇಳಾಪಟ್ಟಿ ಬದಲಾವಣೆಗೆ ಅನುಗುಣವಾಗಿರುತ್ತದೆ.
4 ರಾತ್ರಿ ಮತ್ತು 5 ದಿನಗಳ ಪ್ರವಾಸ ಇದಾಗಿದೆ. ಪಾಟ್ನಾ, ಗಯಾ, ವಾರಾಣಸಿ, ಪ್ರಯಾಗ್ರಾಜ್, ಅಯೋಧ್ಯೆಗೆ ಪ್ರವಾಸ ಆಯೋಜನೆ ಮಾಡಲಾಗಿದೆ. ಮೊದಲನೇ ದಿನ ಡಿಸೆಂಬರ್ 30ಕ್ಕೆ ವಿಮಾನವು ಬೆಳಗ್ಗೆ 8:25ಕ್ಕೆ ಹೊರಡಲಿದ್ದು, ನಿಗದಿತ ಸಮಯಕ್ಕೂ 2 ಗಂಟೆ ಮುಂಚಿತವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರಬೇಕಾಗುತ್ತದೆ ಎಂದು ಸೂಚಿಸಿದೆ.
ಟಿಕೆಟ್ ದರಗಳ ವಿವರ: ಒಬ್ಬ ಪ್ರಯಾಣಿಕನಿಗೆ 42,600 ರೂಪಾಯಿ, ಇಬ್ಬರಿಗೆ 33,950 ರೂಪಾಯಿ, ಮೂವರಿಗೆ 31,900 ರೂಪಾಯಿ, 5-11 ವರ್ಷದ ಮಗುವಿಗೆ ಹಾಸಿಗೆ ಸಹಿತ 31,750 ರೂಪಾಯಿ ಹಾಸಿಗೆ ರಹಿತ 29,600 ರೂಪಾಯಿ ಹಾಸಿಗೆ ರಹಿತ 2 ರಿಂದ 4 ವರ್ಷದ ಮಗುವಿಗೆ 18,450 ರೂಪಾಯಿ ದರ ನಿಗದಿಗೊಳಿಸಲಾಗಿದೆ.
-
Opinion - Kalyana Karnataka Train: ಕೇಂದ್ರ ಸಚಿವ ವಿ ಸೋಮಣ್ಣ ಅವರೇ ಕನ್ನಡಿಗರ ಸಂಕಷ್ಟ ಸ್ವಲ್ಪ ನೋಡಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ












Click it and Unblock the Notifications