ಜೆಡಿಎಸ್‌ ಪಕ್ಷವು ಬಿಜೆಪಿಗೆ ಬೆಂಬಲ ನೀಡುತ್ತಿದೆ: ರಾಹುಲ್ ಗಾಂಧಿ

ಹಾಸನ, ಮಾರ್ಚ್ 21: ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಪ್ರವಾಸದಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ಪಕ್ಷದ ವಿರುದ್ಧ ಮಾತನಾಡಿದರು.

ಹಾಸನದಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಸಮಾವೇಶದಲ್ಲಿ ಮಾತನಾಡಿದ ಅವರು 'ಜೆಡಿಎಸ್ ಪಕ್ಷವು ಬಿಜೆಪಿಯ 'ಬಿ' ನಂತೆ ಕೆಲಸ ಮಾಡುತ್ತಿದೆ ಎಂದರು. ಜೆಡಿಎಸ್ ಪಕ್ಷವು ಬಿಜೆಪಿಯನ್ನು ಗೆಲ್ಲಿಸಲು ಪಣ ತೊಟ್ಟಿಗೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ರಾಹುಲ್ ಗಾಂಧಿ ತಮ್ಮ ಈ ಮುಂಚಿನ ಎರಡು ಯಾತ್ರೆಗಳಲ್ಲಿ ಎಲ್ಲಿಯೂ ಜೆಡಿಎಸ್ ಪಕ್ಷದ ಬಗ್ಗೆ ಸೊಲ್ಲನ್ನೇ ಎತ್ತಿರಲಿಲ್ಲ, ಅವರ ಮಾತು ಏನಿದ್ದರೂ ಮೋದಿ ಮತ್ತು ಬಿಜೆಪಿಗೆ ಸೀಮಿತಗೊಳಿಸಿದ್ದರು, ಆದರೆ ಇದೇ ಮೊದಲ ಬಾರಿಗೆ ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

Rahul Gandhi lambasted on JDS in Hassan

ಜೆಡಿಎಸ್ ಪಕ್ಷವು ಹಿಂದಿನ ಬಾಗಿಲಿನಿಂದ ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂದ ಅವರು ರಾಜ್ಯದ ಜನ ಈ ಬಾರಿ ಕಾಂಗ್ರೆಸ್‌ ಅನ್ನು ಸ್ಪಷ್ಟವಾಗಿ ಗೆಲ್ಲಿಸಲಿದ್ದಾರೆ ಎಂದು ಅವರು ಹೇಳಿದರು.

In Pics: ಕರಾವಳಿಯಲ್ಲಿ ರಾಹುಲ್ ಗಾಂಧಿ ಮಿಂಚಿನ ಸಂಚಾರ

ಬಿಜೆಪಿ ಯು ರಾಜ್ಯದಲ್ಲಿನ ಶ್ರೀಮಂತರಿಗೆ ಸಹಾಯ ಮಾಡಲೆಂದು ಚುನಾವಣೆಗೆ ಸ್ಪರ್ಧಿಸುತ್ತಿದೆ, ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಬಡವರ ಪರವಾಗಿ ಕೆಲಸ ಮಾಡಿದೆ, ಇನ್ನು ಮುಂದೆಯೂ ಅದೇ ಕಾರ್ಯವನ್ನು ಮುಂದುವರೆಸಲಿದೆ ಎಂದರು.

ಕಾಂಗ್ರೆಸ್‌ ಬಸವಣ್ಣ ಮತ್ತು ನಾರಾಯಣ ಗುರುಗಳು ಹಕಿಕೊಟ್ಟ ಮಾರ್ಗದಲ್ಲೇ ನಡೆಯುವ ಗುರಿ ನಮ್ಮದು ಎಂದ ಅವರು ಆದರೆ ಮೋದಿ ಅವರು ನುಡಿಯುವುದು ಒಂದು ಮಾಡುವ ಕಾರ್ಯ ಮಾತ್ರ ಬೇರೆ ಎಂದರು.

ಯಡಿಯೂರಪ್ಪ ಹಾಗೂ ಇತರ ಭ್ರಷ್ಟಾಚಾರ ಆರೋಪ ಹೊತ್ತ ಮಂತ್ರಿಗಳನ್ನು ಪಕ್ಕ ಕೂರಿಸಿಕೊಂಡು ಕಾಂಗ್ರೆಸ್‌ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವುದನ್ನು ಮೋದಿ ಅವರು ಬಿಡಬೇಕು ಎಂದ ರಾಹುಲ್, ನೀರವ್ ಮೋದಿ ಅವರು ಕೋಟ್ಯಂತರ ಹಣ ಹೊತ್ತು ಓಡುವಾಗ ಮೋದಿ ಅವರು ನಿದ್ದೆ ಮಾಡುತ್ತಿದ್ದರು ಎಂದು ವ್ಯಂಗ್ಯ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+