ಬೇಲೂರು ದೇಗುಲದಲ್ಲಿ ಇನ್ಮುಂದೆ ಪ್ರಿವೆಡ್ಡಿಂಗ್ ಫೋಟೋಶೂಟ್ ಇಲ್ಲ
ಬೇಲೂರು, ಜುಲೈ 19: ಮದುವೆಗೆ ಮುನ್ನ ಹುಡುಗ ಹುಡುಗಿ ಫೋಟೊಶೂಟ್ ಮಾಡಲು ಸುಂದರವಾದ, ಪ್ರಕೃತಿಯ ತಾಣಗಳನ್ನು ನಿಯೋಜಿಸುವುದು ರೂಢಿ. ಪ್ರಿ ವೆಡ್ಡಿಂಗ್ ಫೋಟೊಶೂಟ್ ಸ್ಪಾಟ್ ಗಳೆಂದೇ ಕೆಲವು ಸ್ಥಳಗಳು ನಿಗದಿಯಾಗಿಬಿಟ್ಟಿವೆ. ಅದರಲ್ಲೂ ನವ ಜೋಡಿಯ ಚಿತ್ರ ತೆಗೆಯಲು ಪುರಾತನ ದೇವಸ್ಥಾನ ಇದ್ದರೆ ಮತ್ತೂ ಚೆಂದ ಎಂದು ದೇವಸ್ಥಾನಗಳಲ್ಲಿ ಫೋಟೊ ತೆಗೆಯುವ ಪರಿಪಾಠ ಈಗ ಹೆಚ್ಚಿದೆ.
ಅಂಥ ಸ್ಥಳಗಳಲ್ಲಿ ಬೇಲೂರು ಕೂಡ ಒಂದು. ಇತಿಹಾಸ ಪ್ರಸಿದ್ಧ ಬೇಲೂರಿನ ಚನ್ನಕೇಶವಸ್ವಾಮಿ ದೇವಾಲಯ ಹಾಗೂ ಹೊಯ್ಸಳೇಶ್ವರ ದೇವಾಲಯ ಪ್ರಿವೆಡ್ಡಿಂಗ್ (ವಿವಾಹ ಪೂರ್ವ) ಫೋಟೋ ಶೂಟಿಂಗ್ ಗೆ ಹೇಳಿ ಮಾಡಿಸಿದ ತಾಣವಾಗಿತ್ತು. ಫೋಟೋ ತೆಗೆಸಲೆಂದೇ ಸಾಕಷ್ಟು ಜೋಡಿಗಳೂ ಬರುತ್ತಿದ್ದವು. ಆದರೆ ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ.
ಮದುವೆ, ನಿಶ್ಚಿತಾರ್ಥ ಇತ್ಯಾದಿ ಶುಭ ಸಮಾರಂಭಗಳಿಗೆ ಭಿನ್ನ ಚಿತ್ರಗಳನ್ನು ತೆಗೆಯಲು ಈ ದೇಗುಲಗಳಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಈಗ ಸುರಕ್ಷತೆ ದೃಷ್ಟಿಯಿಂದ ಹಾಗೂ ಮೇಲಧಿಕಾರಿಗಳ ಸೂಚನೆಯಂತೆ ಛಾಯಾಗ್ರಹಣ ಮಾಡುವುದನ್ನು ನಿಷೇಧಿಸಲಾಗಿದೆ.

ದೇಗುಲದಲ್ಲಿ ವಿವಾಹ ಪೂರ್ವ ಛಾಯಾಚಿತ್ರ ತೆಗೆಯುವ ಪರಿಪಾಠದ ಕುರಿತು ಅಪರಿಚಿತರೊಬ್ಬರು ಪುರಾತತ್ವ ಇಲಾಖೆ ಹಿರಿಯ ಅಧಿಕಾರಿಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.











Click it and Unblock the Notifications