Prajwal Revanna: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್: 23 ದಿನದಿಂದ ಮನೆ ಬಿಟ್ಟ ರೇವಣ್ಣ ಕುಟುಂಬ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಭಾರಿ ಸದ್ದು ಮಾಡಿದೆ. ಪೆನ್‌ಡ್ರೈವ್‌ನಲ್ಲಿನ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ವಿಶೇಷ ತನಿಖಾ ದಳ (ಎಸ್‌ಐಟಿ) ಪ್ರಯತ್ನಿಸುತ್ತಿದೆ.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಹೆಚ್‌ಡಿ ರೇವಣ್ಣ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದೆ. ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಅವರನ್ನು ಕೂಡ ವಿಶೇಷ ತನಿಖಾ ದಳ ಬಂಧಿಸಿ ವಿಚಾರಣೆ ನಡೆಸಿತ್ತು, ಬಳಿಕ ಎಚ್‌ಡಿ ರೇವಣ್ಣ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

Prajwal Revanna s Family Not Living in Holenarasipura Home for the Last 23 Days After Pendrive Case

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಪರಿಣಾಮ ಹೊಳೆನರಸೀಪುರದ ಸ್ವಂತ ಮನೆ ಈಗ ಬಿಕೋ ಎನ್ನುತ್ತಿದೆ. ಕಳೆದ 23 ದಿನಗಳಿಂದ ಕುಟುಂಬ ಹೊಳೆನರಸೀಪುರದ ಮನೆಯಿಂದ ರೇವಣ್ಣ ಕುಟುಂಬ ದೂರ ಉಳಿದಿದೆ.

ಎಚ್‌ಡಿ ರೇವಣ್ಣ ಅವರು ಈ ಮನೆಯಿಂದ ಹೊರಗಡೆ ಇರುತ್ತಿದ್ದದು ಬಹಳ ಕಡಿಮೆ, ಕೆಲಸದ ಮೇಲೆ ಎಲ್ಲಿಗೇ ಹೋದರೂ ಎಷ್ಟೇ ಹೊತ್ತಾದರೂ ಹೊಳೆನರಸೀಪುರದ ಮನೆಗೆ ಬರುತ್ತಿದ್ದರು. ಆದರೆ ಈಗ ಅದೇ ಮನೆಯಿಂದ ದೂರ ಉಳಿದಿದ್ದಾರೆ.

ಜೈಲುವಾಸ ನಂತರ ಹೊಳೆನರಸೀಪುರಕ್ಕೆ ಬಂದ ರೇವಣ್ಣ, ಹರದನಹಳ್ಳಿ ದೇವೇಗೌಡರ ಮನೆಯಲ್ಲಿ ಉಳಿದುಕೊಂಡಿದ್ದರು. ತವರು ಮನೆ ಸಾಲಿಗ್ರಾಮಕ್ಕೆ ಹೋಗಿರೋ ಭವಾನಿ ರೇವಣ್ಣ ಕೂಡ ಮನೆಗೆ ವಾಪಸ್ ಬಂದಿಲ್ಲ. ತಮ್ಮ ನೆಚ್ಚಿನ ಮನೆಯಿಂದ ರೇವಣ್ಣ- ಭವಾನಿ ರೇವಣ್ಣ ದೂರ ಉಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+