ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ: ಮದುವೆಯಾದ ಎರಡೇ ವಾರಕ್ಕೆ ವಧು ಸಾವು; ವರದಕ್ಷಿಣೆ ಕಿರುಕುಳ ಆರೋಪ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಡಿಸೆಂಬರ್ 22: ಮದುವೆಯಾದ ಎರಡೇ ವಾರಕ್ಕೆ ಮದುಮಗಳು ಸಾವಿಗೀಡಾಗಿದ್ದು, ವರದಕ್ಷಿಣೆಗಾಗಿ ಮಗಳನ್ನು ಕೊಲೆ ಮಾಡಿರುವುದಾಗಿ ಯುವತಿಯ ಪೋಷಕರು ಆರೋಪ ಮಾಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.

ಹಾಸನದ ಸಲೀಂ ನಗರದಲ್ಲಿ ದುರ್ಘಟನೆ ನಡೆದಿದ್ದು, ಫಿಜಾ ಖಾನಂ (22) ಮೃತ ಮಹಿಳೆಯಾಗಿದ್ದಾಳೆ. ಡಿಸೆಂಬರ್ 2ರಂದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹೊಳಲಗೋಡು ಗ್ರಾಮದ ಯುವತಿ ಫಿಜಾ ಖಾನಂ ಹಾಗೂ ಹಾಸನದ ಶಾಗಿಲ್ ಅಹಮದ್ ಅವರಿಬ್ಬರಿಗೂ ಮದುವೆಯಾಗಿತ್ತು. ಮದುವೆಯಾಗಿ 19ನೇ ದಿನವೇ ನವ ವಿವಾಹಿತೆ ಫಿಜಾ ಖಾನಂ ಅನುಮಾನಾಸ್ಪದ ಸಾವನ್ನಪ್ಪಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಫಿಜಾ ಖಾನಂ ಪೋಷಕರು ಆರೋಪಿಸಿದ್ದಾರೆ. ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಸಾವು ಆರೋಪದಲ್ಲಿ ಕೇಸ್ ದಾಖಲಾಗಿದೆ.

Hassan: Newly-Wed Woman Found Dead; Dowry Harassment Suspected

ಅಳಿಯ ಶಾಗಿಲ್ ಅಹಮದ್ ಸೇರಿದಂತೆ ಆತನ ಸಹೋದರರು ಮತ್ತು ಶಾಗಿಲ್ ತಾಯಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಮ್ಮ ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ. ಅಳಿಯ ಹಾಗೂ ಅವರ ಮನೆಯವರ ವಿರುದ್ಧ ಯುವತಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

Hassan: Newly-Wed Woman Found Dead; Dowry Harassment Suspected

ಒಟ್ಟಾರೆ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ಮಧುಮಗಳು ಕೇವಲ 19 ದಿನದಲ್ಲಿ ಸಾವನಪ್ಪಿರುವುದು ಹಲವು ಅನುಮಾನವನ್ನು ಹುಟ್ಟಿ ಹಾಕಿದೆ. ಹೆತ್ತ ಮಗಳನ್ನು ಕಳೆದುಕೊಂಡ ಪೋಷಕರು ಕಣ್ಣೀರಿಡುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಸ್ತೆ ನಡುವೆಯೇ ಮದ್ಯ ತುಂಬಿದ್ದ ಬಾಕ್ಸ್‌ಗೆ ಬೆಂಕಿ ಹಚ್ಚಿದ ಯುವಕರು
ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡರಜಗಲಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಯುವಕರೇ ಮುಂದಾಗಿದ್ದು, ಗ್ರಾಮಕ್ಕೆ ತಲುಪಿದ್ದ ಮದ್ಯ ವಶಕ್ಕೆ ಪಡೆದು ನಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

15 ದಿನಗಳ ಹಿಂದೆ ಗ್ರಾಮದ ಚನ್ನಯ್ಯ ಪತ್ನಿ ಮದ್ಯ ಸೇವನೆಯಿಂದ ಮೃತಪಟ್ಟಿದ್ದರು. ಇದರಿಂದ ಎಚ್ಚೆತ್ತ ಗ್ರಾಮದ ಯುವಕರು ಗ್ರಾಮದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲು ನಿರ್ಧರಿಸಿದ್ದರು. ಅದರಂತೆ ಬ್ಯಾಡರಜಗಲಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಬೈರಯ್ಯ ಹಾಗೂ ಮುತ್ತಣ್ಣರನ್ನು ಕರೆಸಿ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದರು.

Hassan: Newly-Wed Woman Found Dead; Dowry Harassment Suspected

ಮದ್ಯ ಮಾರಾಟ ನಿಲ್ಲಿಸುವುದಾಗಿ ಭರವಸೆ ನೀಡಿದ್ದರು. ಆದರೂ ಮಂಗಳವಾರ ರಾತ್ರಿ ಸಕಲೇಶಪುರ ಟೋಲ್‌ಗೇಟ್‌ನ ಬಾರ್‌ವೊಂದರಿಂದ ಬಂದ ವ್ಯಕ್ತಿ ಬೈಕ್‌ನಲ್ಲಿ ಮದ್ಯದ ಬಾಕ್ಸ್‌ನ್ನು ಮುತ್ತಣ್ಣನ ಮನೆಗೆ ತಲುಪಿಸಿ ಹಿಂದಿರುಗುತ್ತಿದ್ದ. ವಿಷಯ ತಿಳಿದು ಯುವಕರು ಆತನನ್ನು ಅಡ್ಡಗಟ್ಟಿ 24 ಮದ್ಯದ ಪಾಕೆಟ್‌ಗಳನ್ನು ವಶಪಡಿಸಿಕೊಂಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರೇ ವಾಸವಿದ್ದು, ಗ್ರಾಮದಲ್ಲಿಯೇ ಸುಲಭವಾಗಿ ಮದ್ಯ ಸಿಗುತ್ತಿರುವುದರಿಂದ ಅನೇಕರು ಕುಡಿತದ ಚಟಕ್ಕೆ ಬಲಿಯಾಗಿ ಬದುಕು ಹಾಗೂ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡಿಸುತ್ತಿಲ್ಲ. ಹಾಗಾಗಿ ಗ್ರಾಮದಲ್ಲಿ ಸಂಪೂರ್ಣವಾಗಿ ಮದ್ಯ ಮಾರಾಟ ನಿಲ್ಲಿಸಬೇಕು ಎಂದು ಗ್ರಾಮದ ಯುವಕರು ಒತ್ತಾಯಿಸಿದ್ದಾರೆ.

English summary
Hassan: Newly Married Woman Dies just after their second week of marriage, Dowry Harassment Allegation by woman Parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X