Prajwal Revanna: ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ ಸಂತ್ರಸ್ತೆ ವಿರುದ್ಧ ತಿರುಗಿ ಬಿದ್ದ ಅತ್ತೆ!
ಹಾಸನ ಏಪ್ರಿಲ್ 29: ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆಯ ವಿರುದ್ಧ ಆಕೆಯ ಗಂಡನ ತಾಯಿ ತಿರುಗಿ ಬಿದ್ದಿದ್ದಾರೆ. ಇದರೊಂದಿಗೆ ಪ್ರಜ್ವಲ್ ರೇವಣ್ಣ ಕೇಸ್ ಮಹತ್ವದ ತಿರುವು ಪಡೆದುಕೊಂಡಿದೆ.
ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ದೂರು ನೀಡಿದ್ದ ಸಂತ್ರಸ್ತ ಮಹಿಳೆ ವಿರುದ್ಧವೇ ಸದ್ಯ ಆಕೆಯ ಗಂಡನ ತಾಯಿ ಶಿಲ್ಪ ತಿರುಗಿ ಬಿದಿದ್ದಾರೆ. ಮಾತ್ರವಲ್ಲದೆ ಸಂತ್ರಸ್ತೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೌದು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂತ್ರಸ್ತೆ ಅತ್ತೆ ಶಿಲ್ಪ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂತ್ರಸ್ತೆಯ ಗಂಡನ ತಾಯಿ ಶಿಲ್ಪ, 'ಐದು ವರ್ಷದ ಹಿಂದೆ ಸುಮ್ನೆ ಇದ್ದು ದೂರು ನೀಡಿದ್ದಾರೆ. ಭಾವನಿ ಅಮ್ಮ ನಮ್ಮ ಕುಟುಂಬಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ಐದು ವರ್ಷದ ಬಳಿಕ ಈಗ ಅವರನ್ನು ಹೆದರಿಸಿ ಹೋಗಿ ದೂರು ನೀಡಿದ್ದಾರೆ. ಚುನಾವಣೆ ವೇಳೆ ಗೌಡರ ಮನೆಗೆ ಕಪ್ಪು ಚುಕ್ಕೆ ತರಲು ಈ ಕೆಲಸ ಮಾಡಿದ್ದಾರೆ. ಇದೆಲ್ಲ ಸುಳ್ಳು ದೂರು. ರೇವಣ್ಣ ಕುಟುಂಬ ನಮಗೆ ತುಂಬಾ ಒಳ್ಳೆದು ಮಾಡಿದೆ' ಎಂದು ಶಿಲ್ಪ ಹೇಳಿಕೊಂಡಿದ್ದಾರೆ.
'ದೂರು ನೀಡಿದ ಮಹಿಳೆ ಸರಿಯಾಗಿಲ್ಲ. ಆಕೆ ತುಂಬಾ ಸಾಲ ಮಾಡಿಕೊಂಡಿದ್ದಾಳೆ. ಜಮೀನು ಮಾರಾಟ ಮಾಡಿಕೊಂಡಿದ್ದಾಳೆ. ಗೌಡರ ಮನೆಗೆ ಕಪ್ಪು ಚುಕ್ಕೆ ತರಲು ಇಂಥಹ ಕೆಲಸ ಮಾಡಿದ್ದಾಳೆ. ಆಕೆ ಹೇಳಿರುವುದು ಸುಳ್ಳು. ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡುತ್ತೇನೆ ಗೌಡರ ಕುಟುಂಬ ತಪ್ಪು ಮಾಡಿಲ್ಲ. ನಮ್ಮ ಕಷ್ಟ-ಸುಖವನ್ನು ಭವಾನಿ ಅಮ್ಮಾ ನೋಡಿದ್ದಾರೆ. ದೂರುದಾರರ ನಡತೆ ಸರಿಯಿಲ್ಲ' ಎಂದು ಸಂತ್ರಸ್ತೆಯ ಅತ್ತೆ ಆರೋಪ ಮಾಡಿದ್ದಾರೆ.
'ಅಲ್ಲದೆ ಆಕೆ ಐದು ವರ್ಷದ ಹಿಂದೆಯೇ ಮನೆ ಬಿಟ್ಟಿದ್ದಾಳೆ. ಐದು ವರ್ಷದವರೆಗೂ ಏನು ಮಾಡುತ್ತಿದ್ದಳು. ಆಗಲೇ ದೂರು ನೀಡಬಹುದಿತ್ತಲ್ಲ. ಟೆಕ್ನಾಲಜಿ ಬಳಸಿ ಏನು ಬೇಕಾದ್ರು ಮಾಡಿರಬಹುದು. ಇಷ್ಟು ವರ್ಷ ರಾಜಕೀಯ ಮಾಡಿದ್ದಾರೆ ಒಂದು ಕಪ್ಪು ಚುಕ್ಕೆ ಇಲ್ಲ. ಭವಾನಿ ಅಕ್ಕ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ. ಅವರ ಮೇಲಿರುವ ಆರೋಪ ಸುಳ್ಳು. ಅವರು ಏನೂ ತಪ್ಪು ಮಾಡಿಲ್ಲ. ಅವರ ಮೇಲಿರುವ ಆರೋಪ ಸುಳ್ಳು' ಎಂದು ಶಿಲ್ಪಾ ರೇವಣ್ಣ ಹಾಗೂ ಪ್ರಜ್ವಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.












Click it and Unblock the Notifications