Suraj Revanna: ಮುಂಗಾರು ಅಧಿವೇಶನಕ್ಕೂ ಮುನ್ನ ಸೂರಜ್ ರೇವಣ್ಣ ಅಮಾನತು ಸಾಧ್ಯತೆ

ಹಾಸನ ಜೂನ್ 25: ಹಾಸನದಲ್ಲಿ ಪಕ್ಷದ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಶಾಸಕರ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನವೇ ಜೆಡಿಎಸ್ ಅಮಾನತು ಮಾಡಿ ರಾಜಕೀಯ ದಾಳಿಯನ್ನು ತಪ್ಪಿಸುವ ಸಾಧ್ಯತೆ ಇದೆ.

ಹೌದು... ಮುಂಗಾರು ಅಧಿವೇಶನದ ವೇಳೆ ಎದುರಾಳಿ ಪಕ್ಷಗಳ ದಾಳಿಯಿಂದ ತಪ್ಪಿಸಲು ಸೂರಜ್ ರೇವಣ್ಣ ಅವರನ್ನು ಅಮಾನತುಗೊಳಿಸಲು ಪಕ್ಷದಲ್ಲಿ ಒತ್ತಡ ಹೆಚ್ಚಾಗಿದೆ. ಹೀಗಾಗಿ ಹಿರಿಯ ನಾಯಕರು ಈ ಬಗ್ಗೆ ಚರ್ಚಿಸಲು ಸ್ವಲ್ಪ ಸಮಯ ಕೇಳಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಹೈಕಮಾಂಡ್ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

MLC Suraj Revanna suspend before Monsoon session

ಅಧಿವೇಶನದಲ್ಲಿ ಭಾಗವಹಿಸುವ ಇತರ ಸದಸ್ಯರಿಗೆ ಎದುರಾಳಿ ಪಕ್ಷದವರಿಂದ ಮುಖಭಂಗವಾಗುವುದನ್ನು ತಪ್ಪಿಸಲು ಸೂರಜ್ ರೇವಣ್ಣ ಅವರನ್ನು ಅಮಾನತುಗೊಳಿಸಲು ಒತ್ತಡಗಳು ಕೇಳಿ ಬಂದಿವೆ. ಹೀಗಾಗಿ ಅಧಿವೇಶನಕ್ಕೂ ಮುನ್ನ ಸೂರಜ್ ರೇವಣ್ಣ ಹೊರಬರಲು ವಿಫಲರಾದರೆ ಅವರನ್ನು ಅಮಾನತುಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹೊರಬಾರದಿದ್ದರೆ ಅಮಾನತು ಪಕ್ಕಾ!

ಜುಲೈ ಎರಡನೇ ವಾರದಲ್ಲಿ ವಿಧಾನಮಂಡಲ ಅಧಿವೇಶನ ನಿಗದಿಯಾಗುವ ಸಾಧ್ಯತೆ ಇದೆ. ಅಷ್ಟರ ಒಳಗೆ ಸೂರಜ್‌ ಹೊರಬಂದರೆ ಪರವಾಗಿಲ್ಲ. ಇಲ್ಲದಿದ್ದಲ್ಲಿ ಪಕ್ಷದ ಹೈಕಮಾಂಡ್ ಅವರನ್ನು ಅಮಾನತಿನಲ್ಲಿಡಲು ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಾವ್ಯಾರೂ ಅಧಿವೇಶನದಲ್ಲಿ ಭಾಗವಹಿಸಲು ಮುಖ ಇಲ್ಲದಂತಾಗುತ್ತದೆ. ಸೂರಜ್ ರೇವಣ್ಣ ಪ್ರಕರಣ ಪ್ರತಿಸ್ಪರ್ಧಿ ಪಕ್ಷದ ಸದಸ್ಯರಿಗೆ ಪಕ್ಷವನ್ನು ಟೀಕಿಸುವ ಪ್ರಮುಖ ಅಸ್ತ್ರವಾಗಲಿದೆ ಎಂದು ಜೆಡಿ(ಎಸ್) ಶಾಸಕರೊಬ್ಬರು ಹೇಳಿದ್ದಾರೆ.

MLC Suraj Revanna suspend before Monsoon session

ಪ್ರಜ್ವಲ್ ಪ್ರಕರಣ

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸೂರಜ್ ರೇವಣ್ಣ ಅವರ ಕಿರಿಯ ಸಹೋದರ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದಾಗ, ಕೆಲವು ಜೆಡಿ (ಎಸ್) ಶಾಸಕರು ಪಕ್ಷದ ಹೈಕಮಾಂಡ್ ಬಳಿ ಹೋಗಿ ಪ್ರಜ್ವಲ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.

ಅದರಂತೆ ಪ್ರಜ್ವಲ್ ಅವರನ್ನು ಜೆಡಿಎಸ್ ನಿಂದ ಅಮಾನತುಗೊಳಿಸಲಾಗಿದೆ. ಅಂತಯೇ ಸೂರಜ್ ಪ್ರಕರಣದಲ್ಲೂ ಶಾಸಕರಿಂದ ಒತ್ತಾಯ ಹೆಚ್ಚಾಗಿದೆ. ಒಂದು ವೇಳೆ ಸೂರಜ್ ಅವರನ್ನು ಅಮಾನತುಗೊಳಿಸದೇ ಇದ್ದರೆ ಅಧಿವೇಶನದಲ್ಲಿ ವಿಪಕ್ಷಗಳು ದಾಳಿ ಪಕ್ಷ ಗುರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅಧಿವೇಶನಕ್ಕೂ ಮುನ್ನ ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣ ಅವರನ್ನು ಅಮಾನತು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

MLC Suraj Revanna suspend before Monsoon session

ಜುಲೈ 1ರವರೆಗೆ ನ್ಯಾಯಾಂಗ ಬಂಧನ

ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಬಂಧಿತರಾಗಿರುವ ಸೂರಜ್ ರೇವಣ್ಣ ಅವರಿಗೆ ಜುಲೈ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ಒಪ್ಪಿಸಲಾಗಿದ್ದು, ಎಲ್ಲಾ ಕೋನದಲ್ಲಿ ಕೂಡ ತನಿಖೆ ಮಾಡಲು ಮುಂದಾಗಿದೆ. ಈ ವೇಳೆ ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ, ದೂರು ಕೊಟ್ಟಿದ್ದ ಸಂತ್ರಸ್ತ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಸೂರಜ್ ರೇವಣ್ಣ ಆರೋಪಿಸಿದ್ದಾರೆ.

ಹೊಳೆನರಸೀಪುರ ನಗರ ಠಾಣೆಯಲ್ಲಿ ಎಂಎಲ್‌ಸಿ ಅವರ ಆಪ್ತ ಶಿವಕುಮಾರ್ ಜೂನ್‌ 21ರಂದು ದೂರು ನೀಡಿದ್ದರು. ಶಿವಕುಮಾರ್‌ ದೂರಿನ ಆಧಾರದ ಮೇಲೆಯೇ ಪೊಲೀಸರು ಸಂತ್ರಸ್ತನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಆದರೀಗ ದೂರು ನೀಡಿರುವ ಸಂತ್ರಸ್ತ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಶಿವಕುಮಾರ್‌ ಫೋನ್‌ ಸಹ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ದೂರುದಾರನ ನಡೆ ಬಗ್ಗೆಯೆ ಅನುಮಾನ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+