ಅರಸೀಕೆರೆ: ಐಫೋನ್ ಕೊರಿಯರ್ ಹಿಂಪಡೆಯಲು ನಿರಾಕರಿಸಿದ ಡಿಲೆವರಿ ಬಾಯ್ ಕೊಲೆ: ಆರೋಪಿ ಬಂಧನ
ಫೋನ್ ಡೆಲಿವರಿ ಮಾಡುವಾಗ ನಡುವೆ ಹಣ ಪಾವತಿ ಮತ್ತು ಮೊಬೈಲ್ ಬಾಕ್ಸ್ ಒಪನ್ ಆಗಿರುವ ವಿಚಾರದಲ್ಲಿ ಜಗಳ ನಡೆದಿದೆ
ಬೆಂಗಳೂರು, ಫೆಬ್ರವರಿ. 19: ಆನ್‌ಲೈನ್ ಮೂಲಕ ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿ, ಡಿಲೆವರಿ ವೇಲೆ ಬಾಕ್ಸ್ ಒಪನ್ ಆಗಿರುವುದನ್ನು ನೋಡಿ ಹಿಂತೆಗೆದುಕೊಂಡು ಹೋಗುವಂತೆ ಹೇಳಿದ್ದು, ಗಲಾಟೆ ನಡೆದು ಒಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.
ಹಾಸನ ಜಿಲ್ಲೆಯಲ್ಲಿ ಐಫೋನ್ ವಿತರಿಸಲು ಬಂದಿದ್ದ ಫ್ಲಿಪ್‌ಕಾರ್ಟ್ ಡೆಲಿವರಿ ಪಾಲುದಾರನನ್ನು 20 ವರ್ಷದ ಯುವಕನೊಬ್ಬ ಕೊಲೆ ಮಾಡಿದ್ದಾರೆ. ತನ್ನ ಆರ್ಡರ್ ಒಪನ್ ಆಗಿರುವುದನ್ನು ನೋಡಿ ಹಣ ಪಾವತಿಸಲು ಹಿಂದೆಟು ಹಾಕಿದ್ದು, ನಂತರ ಘರ್ಷನೆ ನಡೆದು ಆರೋಪಿ ಡೆಲಿವರಿ ಮಾಡುವ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ವರದಿಯ ಪ್ರಕಾರ, ಹಾಸನ ಜಿಲ್ಲೆಯ ಅರಸೀಕೆರೆಯ ಲಕ್ಷ್ಮೀಪುರಂ ನಿವಾಸಿ ಹೇಮಂತ್ ದತ್ತ ಫೆಬ್ರವರಿ ಆರಂಭದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಐಫೋನ್ ಆರ್ಡರ್ ಮಾಡಿದ್ದಾರೆ. ಇ-ಕಾಮರ್ಸ್ ಸೈಟ್‌ನಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಹೇಮಂತ್ ನಾಯಕ್ ಫೆಬ್ರವರಿ 7 ರಂದು ಆರೋಪಿಯ ಮನೆಗೆ ಫೋನ್ ತಲುಪಿಸಲು ಬಂದಿದ್ದರು.

ಫೋನ್ ಡೆಲಿವರಿ ಮಾಡುವಾಗ ಇಬ್ಬರ ನಡುವೆ ಹಣ ಪಾವತಿ ಮತ್ತು ಮೊಬೈಲ್ ಬಾಕ್ಸ್ ಒಪನ್ ಆಗಿರುವ ವಿಚಾರದಲ್ಲಿ ಜಗಳ ನಡೆದಿದ್ದು, ಹೇಮಂತ್ ದತ್ತ ಅವರು ಹೇಮಂತ್ ನಾಯಕ್ ಅವರನ್ನು ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಹೇಮಂತ್ ನಾಯಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ದತ್ತ ಮೃತದೇಹವನ್ನು ಗೋಣಿ ಚೀಲದಲ್ಲಿ ಬಚ್ಚಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿ ಎರಡು ದಿನಗಳ ನಂತರ, ಆರೋಪಿ ಹೇಮಂತ್ ದತ್ತ ಅವರು ಗೋಣಿ ಚೀಲವನ್ನು ಹತ್ತಿರದ ರೈಲ್ವೆ ಹಳಿ ಮೇಲೆ ಎಸೆದು, ಮೃತ ದೇಹವನ್ನು ಪೆಟ್ರೋಲ್ ಹಾಕಿ ಗುರುತು ಸಿಗದಂತೆ ಸುಟ್ಟುಹಾಕಿದ್ದಾರೆ.

ಮೃತರು ಫೆಬ್ರವರಿ 7 ರಿಂದ ನಾಪತ್ತೆಯಾಗಿರುವುದರಿಂದ ಅವರ ಸಹೋದರ ಮಂಜು ನಾಯ್ಕ್ ಅರಸೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ಆರೋಪಿ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications