Leopard: ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಹೆಚ್ಚಾದ ಆತಂಕ
ಹಾಸನ, ಸೆಪ್ಟಂಬರ್ 07: ಕಾಡಂಚಿನ ಜಿಲ್ಲೆಗಳು, ತಾಲೂಕು ಪ್ರದೇಶಗಳಲ್ಲಿ ಆಗಾಗ ಚಿರತೆ, ಆನೆ, ಕರಡಿ ಸೇರಿದಂತೆ ವನ್ಯ ಮೃಗಗಳ ಉಪಟಳ ತಪ್ಪಿದ್ದಲ್ಲ. ಇದೀಗ ಹಾಸನ ಜಿಲ್ಲೆಯಲ್ಲಿ ವಾಹನ ಸವಾರರಿಗೆ ಕಾಣಿಸಿಕೊಂಡಿರುವ ಚಿರತೆಯು ಭಾರೀ ಆತಂಕ ಸೃಷ್ಟಿಸಿದೆ. ಭಯದಲ್ಲಿಯೇ ಸಾರ್ವಜನಿಕರು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಚಿರತೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಹಾಸನ ಚನ್ನರಾಯಪಟ್ಟಣ ತಾಲ್ಲೂಕಿನ, ನರಿಹಳ್ಳಿ ಬಳಿ ಘಟನೆ ಕಾರಿನಲ್ಲಿ ತೆರಳುತ್ತಿದ್ದಾಗ ವಾಹನ ಸವಾರರಿಗೆ ಚಿರತೆ ಕಾಣಿಸಿಕೊಂಡಿದೆ. ಕಾರಿನ ಲೈಟ್ ಬೆಳಕಿಗೆ ರಸ್ತೆ ಮಧ್ಯೆ ಓಡಿ ಹೋಗುವುದಾಗ ಸವಾರರು ನೋಡಿದ್ದಾರೆ. ಅದನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಕೊಂಡು ಊರಿನವರಿಗೆ ತಿಳಿಸಿದ್ದಾರೆ. ಮನೆಯಿಂದ ಹೋರ ಹೋಗುವಾಗ, ರಾತ್ರಿ ಸಂಚಾರ ಮಾಡುವವರಿಗೆ ಜಾಗರೂಕರಾಗಿರುವಂತೆ ಸವಾರರು ತಿಳಿಸಿದ್ದಾರೆ.

ಗ್ರಾಮ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಚಿರೆ ಹಾವಳಿ
ಇದು ದೂರು ಎಲ್ಲೂ ಕಾಡಿನ ಮಧ್ಯದ ರಸ್ತೆಯಲ್ಲಿ ನಡೆದಿಲ್ಲ. ಬದಲಾಗಿ ಗ್ರಾಮದ ಸಮೀಪದ ರಸ್ತೆಯಲ್ಲಿ ನಡೆದಿದೆ. ಕಾರಿನಲ್ಲಿ ದಿಡಿಗ ಗ್ರಾಮಕ್ಕೆ ತೆರಳುತ್ತಿದ್ದವರಿಗೆ ಚಿರತೆ ಎದುರಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದು ಈಗ ಮಾತ್ರವಲ್ಲ ಹಿಂದಿನಿಂದ ಈ ದಿಡಿಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬೀದಿನಾಯಿಗಳು, ಜಾನುವಾರಗಳ ಮೇಲೆ ಚಿರತೆ ದಾಳಿ ಮಾಡಿ ತಿಂದು ಹಾಕುತ್ತಿದೆ. ಚಿರತೆ ದಾಳಿಯಿಂದ ಭಯಭೀತರಾಗಿರುವ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಆಹಿಸಿದ್ದಾರೆ. ಅನಾಹುತ ಸಂಭವಿಸುವ ಮೊದಲೇ ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರಲ್ಲಿ ವ್ಯಕ್ತಿ ಮೇಲೆ ಕರಡಿ ದಾಳಿ
ಶುಕ್ರವಾರವಷ್ಟೇ ಚಿಕ್ಕಮಗಳೂರಿನಲ್ಲಿ ವ್ಯಕ್ತಿಯೊಬ್ಬರು ಮೇಲೆ ಕರಡಿಯು ಎರಗಿ ಭಯಾನಕವಾಗಿ ದಾಳಿ ಮಾಡಿದೆ. ನೋಡ ನೋಡುತ್ತಲೇ ಮೈಮೇಲೆ ಎಗರಿದ ಕರಡಿ ದಾಳಿ ನಡೆಸಿದ್ದು, ವ್ಯಕ್ತಿ ಮೈ, ಕೈ, ತಲೆಯನ್ನೆಲ್ಲ ಪರಚಿಹಾಕಿದೆ. ಈ ಘಟನೆ ಇಲ್ಲಿನ ಕಳಸ ತಾಲೂಕಿನ ಕುದುರೆಮುಖ ಬಿಳಗಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆ ಬಳಿಕ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಬಿಳಗಲ್ ಗ್ರಾಮದ ಸತೀಶ್ ಎಂಬುವವರಿಗೆ ಕರಡಿ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೂ ಇತ್ತೀಚೆಗೆ ಹುಬ್ಬಳ್ಳಿ ಹೊರ ವಲಯ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು ಎಂದು ತಿಳಿದು ಬಂದಿತ್ತು. ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಶೀಲಿಸಿದ್ದರು.
ಕಾಡಂಚಿನ ಪ್ರದೇಶಗಳಲ್ಲಿ ಜಮೀನಿನಲ್ಲಿ ಆನೆಗಳು ಬಂದಿ ಹಾವಳಿ ಇಟ್ಟರೆ, ಬೆಳೆ ನಾಶ ಮಾಡಿದರೆ, ಚಿರತೆ ಪ್ರತ್ಯಕ್ಷವಾಗಿ ಜಾನುವಾರು ತಿಂದು ಹಾಕುತ್ತವೆ. ಸಾಲದೆಂಬಂತೆ ಮನುಷ್ಯ ಮೈ ಮೇಲೆ ಎರಗಿ ಇನ್ನಿಲ್ಲದಂತೆ ಮಾಡುತ್ತಿವೆ. ಈ ಪ್ರಾಣಿ ಮನುಷ್ಯನ ಸಂಘರ್ಷ ಕೊನೆ ಇಲ್ಲದಾಗಿದೆ.












Click it and Unblock the Notifications