KSRTC Ashwamedha: ಬೆಂಗಳೂರಿನಿಂದ ಇಲ್ಲಿಗೆ 10 ಅಶ್ವಮೇಧ ಬಸ್‌ಗಳ ಸಂಚಾರ, ದರ, ಸಮಯದ ಮಾಹಿತಿ
ಬೆಂಗಳೂರು, ಫೆಬ್ರವರಿ 06: ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಪ್ರಯಾಣಿಕ ಸ್ನೇಹಿ ಹೊಸ 100 'KSRTC ಅಶ್ವಮೇಧ' (Ashwamedha Bus) ಬಸ್‌ಗಳನ್ನು ಲೋಕಾರ್ಪಣೆ ಮಾಡಿದೆ. ಅವುಗಳನ್ನು ಇಂದು ಸೋಮವಾರ ಫೆಬ್ರುವರಿ 6ರ ಮಂಗಳವಾರದಿಂದಲೇ ಕಾರ್ಯಾರಂಭಗೊಳಿಸಿವೆ. ಯಾವ ಜಿಲ್ಲೆಗಳಿಗೆ, ಎಷ್ಟು ಬಸ್‌ಗಳು ಪ್ರಯಾಣ ಬೆಳೆಸಿವೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಸಾರಿಗೆ ಇಲಾಖೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಗೆ ಹೊಸ ವಿನ್ಯಾಸದ ಹಾಗೂ ಸುವ್ಯವಸ್ಥಿತ ಈ 'ಅಶ್ವಮೇಧ' ಬಸ್‌ಗಳನ್ನು ಸೇರ್ಪಡೆಗೊಳಿಸಿದೆ. ಈ ಬಸ್‌ಗಳಲ್ಲಿ 10 ಬಸ್‌ಗಳನ್ನು ಹಾಸನ ಜಿಲ್ಲೆಗೆ ನೀಡಲಾಗಿದೆ. ಅವುಗಳ ಇಂದಿನಿಂದಲೇ ಕಾರ್ಯಾರಂಭಗೊಂಡಿದ್ದು, ಜಿಲ್ಲೆಯ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ಟಿಕೆಟ್ ದರದಲ್ಲಿ ಯಾವ ಬದಲಾವಣೆಗಳು ಆಗಿಲ್ಲ ಎನ್ನಲಾಗಿದೆ.

ಗಂಟೆಗೊಂದು ಬಸ್ ಸಂಚಾರ
ಪ್ರಯಾಣಿಕರಿಗೆ ಸುಖಕರ ಅನುಭವ ನೀಡಲಿರುವ ಈ ಬಸ್‌ಗಳಿಂದ ಅತ್ಯತ್ತಮ ಸೇವೆ ನೀಡುವ ಉದ್ದೇಶ ಸಾರಿಗೆ ಇಲಾಖೆ ಹೊಂದಿದೆ. ಪ್ರತಿ ಗಂಟೆಗೆ ಒಂದು ಅಶ್ವಮೇಧ ಬಸ್ ಸೇವೆ ಓಡಲಿದೆ. ಬೆಂಗಳೂರಿನಿಂದ ಹಾಸನ ಹಾಗೂ ಹಾಸನದಿಂದ ಇತರ ಜಿಲ್ಲೆಗಳಿಗೆ ಈ ಬಸ್‌ಗಳು ಓಡಾಡಲಿವೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆಗೂ 'ಅಶ್ವಮೇಧ' ಬಸ್ ಅನ್ವಯ
ಸಾಮಾನ್ಯ ಬಸ್‌ಗಳಿಗಿಂತಲೂ ಈ ಬಸ್‌ಗಳು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ತಡೆರಹಿತ ಸೇವೆ ನೀಡಲಿವೆ. ಹೀಗಿದ್ದರೂ ಸಹ ಈ ಬಸ್‌ಗಳಿಗೆ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ನೀಡುವ ಶಕ್ತಿ ಯೋಜನೆ (Shakti Scheme) ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ.

ಕಳೆದ ವರ್ಷ ಜೂನ್ 11 ರಂದು ಜಾರಿಯಾದ ಶಕ್ತಿ ಯೋಜನೆಯಿಂದ ಕೋಟ್ಯಾಂತರ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಓಡಾಡಲು ಶುರು ಮಾಡಿದರು. ಅಲ್ಲಿಂದ KSRTC ಬಸ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಹೊಸ ಬಸ್‌ಗಳನ್ನು ಇಲಾಖೆ ಪರಿಚಯಿಸಿದೆ.
ಈ ಅಶ್ವಮೇಧ ನೂತನ ಬಸ್‌ಗಳು ಮದುವೆ, ಶಾಲೆ, ಕಾಲೇಜುಗಳ ಪ್ರವಾಸ ಇನ್ನಿತರ ಉದ್ದೇಶಗಳಿಗೆ ಬಾಡಿಗೆ ಕೊಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಒಪ್ಪಂದದ ಪ್ರಕಾರ ಇಂತಿದ್ದ ಬಾಡಿಗೆ ಫಿಕ್ಸ್ ಮಾಡಿ ಅಶ್ವಮೇಧ ಬಸ್ ಪಡೆಯಲು ಇಲಾಖೆ ಆದೇಶ ನೀಡಿದ ಬಳಿಕ ಈ ಬಗ್ಗೆ ನಿಗಮ ಮಾಹಿತಿ ಪ್ರಕಟಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಶ್ವಮೇಧ ಬಸ್‌ಗಳ ವೈಶಿಷ್ಟ್ಯತೆ
ತಾಂತ್ರಿಕತೆಗೆ ಹೆಚ್ಚು ಆದ್ಯತೆ ನೀಡಿರುವ ಈ ಬಸ್‌ಗಳ ವಿಶೇಷತೆಗಳು ಏನು ಎಂಬ ಮಾಹಿತಿ ಇಲ್ಲಿದೆ.
ಈ ನೂತನ ಅಶ್ವಮೇಧ ಬಸ್‌ಗಳು ಒಟ್ಟು 52 ಆಸನ ವ್ಯವಸ್ಥೆ ಹೊಂದಿವೆ. ದೊಡ್ಡದಾದ ಕಿಟಕಿ ಗಾಜು ಹೊಂದಿದ್ದು, ಬಸ್ ಮುಂದೆ ಎಲ್‌ಇಡಿ ಫಲಕ ಅಳವಡಿಸಲಾಗಿದೆ. ಒಟ್ಟು 3.42 ಮೀಟರ್ ಎತ್ತರವಿದ್ದು, ಬಸ್‌ನಲ್ಲಿ ಲೊಕೇಷನ್ ಟ್ರ್ಯಾಕರ್ ಪ್ಯಾನಿಕ್ ಬಟ್ ಅಳವಡಿಸಲಾಗಿದೆ.
ವಿನೂತನ ವಿನ್ಯಾಸದ ಲಗೇಜ್ ಕ್ಯಾರಿಯರ್ ಇದ್ದು, ಪ್ರತಿ ಗಂಟೆಗೆ 70 ಕಿಲೋ ಮೀಟರ್ ಓಡುವ ಈ ಬಸ್ ಪಾರ್ಕಿಂಗ್ ಕ್ಯಾಮೆರಾ ಇದೆ. ಚಾಲನೆಗಾಗಿ ದೊಡ್ಡ ಮೀರರ್ ಹಾಗೂ ಮುಂದೆ ಮತ್ತು ಹಿಂದೆ ದೊಡ್ಡ ಗ್ಲಾಜು ಅಳವಡಿಸಲಾಗಿದೆ. ನೋಡಲು ಸಾಮಾನ್ಯ ಸಾರಿಗೆ ಬಸ್ ರೀತಿ ಕಂಡರು ಸಹಿತ ಒಳಾಂಗಣ ಪ್ರಯಾಣಿಕರನ್ನು ಆಕರ್ಷಿಸುತ್ತದೆ.
ಈ ಅಶ್ವಮೇಧ ಬಸ್‌ಗಳು ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿವೆ ಎಂಬ ವಿಶ್ವಾಸದಲ್ಲಿ ಸಾರಿಗೆ ಇಲಾಖೆ ಇದೆ.
ಒಟ್ಟು 100 ಬಸ್‌ಗಳನ್ನು ಬಿಡುಗಡೆ ಮಾಡಿದ್ದ ನಿಗಮವು ಸೂಕ್ತ ನಗರಗಳ ಮಧ್ಯೆ ಅಗತ್ಯ ಅಶ್ವಮೇಧ ಬಸ್‌ಗಳನ್ನು ಕಾರ್ಯಾಚರಣೆ ನಡೆಸಲು ಆರಂಭಿಸಿದೆ.












Click it and Unblock the Notifications