ಜೆಡಿಎಸ್ ಭದ್ರಕೋಟೆಯಲ್ಲಿ ಒಂದು ಕೋಣೆ ಬಿಜೆಪಿ ಪಾಲು

ಬೆಂಗಳೂರು, ಮೇ 17: ಜೆಡಿಎಸ್ ಭದ್ರಕೋಟೆಯಲ್ಲಿ ಜಾತ್ಯಾತೀಯ ಜನತಾ ದಳ (ಜೆಡಿಎಸ್) ಪ್ರಾಬಲ್ಯ ಮುರಿಯುವುದೇ ಬಿಜೆಪಿ, ಕಾಂಗ್ರೆಸ್ ಗೆ ಪ್ರತಿಬಾರಿಯ ಸವಾಲು. ಬೇಲೂರು ಕ್ಷೇತ್ರದಲ್ಲಿ ಗೆದ್ದು ಕಳೆದ ಬಾರಿಯ ಫಲಿತಾಂಶ ಉತ್ತಮಗೊಳಿಸುವ ಯೋಜನೆ ಹಾಕಿಕೊಂಡಿದ್ದ ಕೈ ಪಡೆಗೆ ನಿರಾಶೆಯಾಗಿದೆ. ಮೊಟ್ಟ ಮೊದಲ ಬಾರಿಗೆ ಹಲವು ವರ್ಷಗಳ ನಂತರ ಜಿಲ್ಲೆಯಲ್ಲಿ ಕಮಲ ಅರಳಿದೆ.

ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರೇ ಪ್ರಾಧಾನ್ಯ. ಅದರಲ್ಲೂ ಒಕ್ಕಲಿಗರ ಉಪಜಾತಿ ಓಲೈಸಿಕೊಂಡವರಿಗೆ ಕೆಲವು ನಿಶ್ಚಿತ. ಉಳಿದಂತೆ ಮುಸ್ಲಿಮರು, ಅಲ್ಪಸಂಖ್ಯಾತರು, ಲಿಂಗಾಯತರು, ಕುರುಬರು ಜಿಲ್ಲೆಯ ಕೆಲ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

Karnataka Assembly elections 2018 : Hassan District Winners Losers

2013ರ ಫಲಿತಾಂಶದಂತೆ ಹಾಸನ ಜಿಲ್ಲೆಯ 7 ಕ್ಷೇತ್ರಗಳ ಕಾಂಗ್ರೆಸ್ 2 ಹಾಗೂ ಬಿಜೆಪಿ 0, ಜೆಡಿಎಸ್ 5 ಗಳಿಸಿತ್ತು. 2018ರಲ್ಲಿ ಹಾಸನದಲ್ಲಿ ಬಿಜೆಪಿ 1989ರ ನಂತರ ಮತ್ತೆ ಖಾತೆ ತೆರೆದಿದೆ. ಮಿಕ್ಕಂತೆ ಕಾಂಗ್ರೆಸ್ 2 ಸ್ಥಾನ ಕಳೆದುಕೊಂಡಿದ್ದಲ್ಲದೆ, ಈ ಬಾರಿ ಒಂದು ಸೀಟು ಕೂಡಾ ಗೆದ್ದಿಲ್ಲ.

ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪರಿಚಯ ಓದಲು ಕ್ಲಿಕ್ ಮಾಡಿ

ಬೇಲೂರಿನಲ್ಲಿ ಹಾಲಿ ಶಾಸಕ ಕಾಂಗ್ರೆಸ್ಸಿನ ವೈ.ಎನ್ ರುದ್ರೇಶ್ ಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಅಭ್ಯರ್ಥಿ ಸ್ಥಾನಕ್ಕೆ ಅವರ ಪತ್ನಿ ಕೀರ್ತನಾ ಅವರನ್ನು ಕರೆ ತರಲಾಯಿತು. ಆದರೆ, ಅನುಕಂಪದ ಅಲೆ ವರ್ಕ್ ಔಟ್ ಆಗಲಿಲ್ಲ. ಕಳೆದ ಬಾರಿ 6 ಸಾವಿರ ಅಂತರದ ಮತಗಳಿಂದ ಸೋಲು ಕಂಡಿದ್ದ ಜೆಡಿಎಸ್ ನ ಕೆ.ಎಸ್ ಲಿಂಗೇಶ್ ಈ ಬಾರಿ ಭರ್ಜರಿ ಗೆಲುವು ದಾಖಲಿಸಿದರು.

ಸಕಲೇಶಪುರದಲ್ಲಿ ಅಧಿಕಾರಿ ಸಿದ್ದಯ್ಯ ಮೂರನೇ ಸ್ಥಾನಕ್ಕೆ ಕುಸಿದರೆ, ಹಾಸನ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್ ಎಸ್ ಪ್ರಕಾಶ್ ಗೆ ಅಚ್ಚರಿಯ ಸೋಲು, ಅರಕಲಗೂಡು ಮಂಜುಗೆ ಸೋಲು ಅನಿರೀಕ್ಷಿತವಾಗಿತ್ತು.

ಹಾಸನ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ಶ್ರವಣ ಬೆಳಗೊಳ
ಸಿ.ಎನ್ ಬಾಲಕೃಷ್ಣ
1,05,516 ಜೆಡಿಎಸ್
ಸಿ.ಎಸ್ ಪುಟ್ಟೇಗೌಡ
ಕಾಂಗ್ರೆಸ್
52,504
ಆರಸೀಕೆರೆ
ಕೆ.ಎಂ ಶಿವಲಿಂಗೇಗೌಡ
93,985 ಜೆಡಿಎಸ್
ಜಿ. ಬಿ ಶಶಿಧರ್
ಕಾಂಗ್ರೆಸ್ 50297
ಬೇಲೂರು
ಕೆ.ಎಸ್ ಲಿಂಗೇಶ್
63 698
ಜೆಡಿಎಸ್
ಎಚ್. ಕೆ ಸುರೇಶ್
ಕಾಂಗ್ರೆಸ್ 44132
ಹಾಸನ
ಪ್ರೀತಂ ಜೆ ಗೌಡ 63348 ಬಿಜೆಪಿ ಎಚ್ ಎಸ್ ಪ್ರಕಾಶ್
ಜೆಡಿಎಸ್
50342
ಹೊಳೆನರಸೀಪುರ
ಎಚ್ ಡಿ ರೇವಣ್ಣ
1,08,541 ಜೆಡಿಎಸ್
ಬಿ.ಪಿ ಮಂಜೇಗೌಡ
ಕಾಂಗ್ರೆಸ್ 64709
ಅರಕಲಗೂಡು ಎ. ಟಿ ರಾಮಸ್ವಾಮಿ
85064 ಜೆಡಿಎಸ್
ಎ ಮಂಜು
ಕಾಂಗ್ರೆಸ್ 74411

ಸಕಲೇಶಪುರ

(ಎಸ್ ಸಿ)

ಎಚ್. ಕೆ ಕುಮಾರಸ್ವಾಮಿ
85064 ಜೆಡಿಎಸ್
ನಾರ್ವೆ ಸೋಮಶೇಖರ್
ಬಿಜೆಪಿ 57320
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+