• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2ನೇ ಮದುವೆಯ ನಂತರವೂ ಅನೈತಿಕ ಸಂಬಂಧಕ್ಕೆ ತಂದೆಯಿಂದ ಅಡ್ಡಿ: ಮಗಳು ಏನ್ಮಾಡಿದ್ಳು ಗೊತ್ತಾ?

|

ಹಾಸನ, ಸೆ 1: ಎರಡು ಮದುವೆಯಾದ ಮೇಲೂ, ಅನೈತಿಕ ಸಂಬಂಧವನ್ನು ಮುಂದುವರಿಸಿದ ಮಗಳ ನಡೆಯನ್ನು ಪ್ರಶ್ನಿಸಿದ್ದಕ್ಕೆ, ತಂದೆಯನ್ನೇ ಮಗಳು ಕೊಲೆಗೈದ ಘಟನೆ, ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಮಕ್ಕೆ ಕಣ್ಣಿಲ್ಲ...

ಪ್ರಿಯಕರ ಜೊತೆ ಸೇರಿ, ತಂದೆಯನ್ನು ಕೊಲೆಗೈದು, ಮಳ್ಳಿಯಂತೆ, ಪೊಲೀಸರ ಮುಂದೆ ನಾಟಕವಾಡಲು ಹೋದ, ಮಗಳನ್ನು ಹಾಸನ ಜಿಲ್ಲಾ ಪೊಲೀಸರು ಅಂದರ್ ಮಾಡಿದ್ದಾರೆ.

ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು, ಪ್ರಿಯಕರನ ಜೊತೆ ಸುತ್ತಾಡಲು ತಂದೆ ಅಡ್ದ ಬರುತ್ತಿದ್ದಾರೆಂದು ಅವರನ್ನು ಸುಟ್ಟು ಹಾಕಿದ ಘಟನೆ, ಕೆಲವು ದಿನಗಳ ಹಿಂದೆ ವರದಿಯಾಗಿತ್ತು.

ಅಕ್ರಮ ಸಂಬಂಧದ ಗಲಾಟೆಯಲ್ಲಿ 75 ವರ್ಷದ ವೃದ್ಧರ ಕೊಲೆಯಾಯಿತಾ?

ಬೆಂಗಳೂರಿನ ಮುನೇಶ್ವರ ನಗರದ ನಿವಾಸಿಯಾಗಿರುವ ಮುನಿರಾಜು, ಮಗಳಿಂದ ಕೊಲೆಯಾದ ದುರ್ದೈವಿ. ಈತನ ಪುತ್ರಿ, ಆಕೆಯ ಪ್ರಿಯಕರ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯ ಹಿಂದೆ ಈಕೆಯ ಫ್ಲಾಪ್ ಪ್ಲಾನ್ ಹೀಗಿತ್ತು:

ಮದುವೆಯಾದ ಆರಂಭದಲ್ಲೇ ಪತಿಯಿಂದ ವಿಚ್ಚೇದನ

ಮದುವೆಯಾದ ಆರಂಭದಲ್ಲೇ ಪತಿಯಿಂದ ವಿಚ್ಚೇದನ

ಮೃತ ತಂದೆಯ ಮಗಳು ವಿದ್ಯಾ (23), ಮದುವೆಯಾದ ಆರಂಭದಲ್ಲೇ ಪತಿಯಿಂದ ವಿಚ್ಚೇದನ ಪಡೆದಿದ್ದಳು. ಇದಾದ ನಂತರ, ನಾಗಮಂಗಲ ತಾಲೂಕಿನ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದಳು. ಒಂದು ವರ್ಷದ ಹಿಂದೆ, ಈಕೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದಳು. ವಿಮಾ ಸಂಸ್ಥೆಯಿಂದ ಮತ್ತು ವಿಚ್ಚೇದನ ಪಡೆದ ಮೊದಲ ಪತಿಯಿಂದ, ಈಕೆಗೆ, ಲಕ್ಷಾಂತರ ರೂಪಾಯಿ ಬರುವುದರಲ್ಲಿತ್ತು.

ಕಾರು ಚಾಲಕ ಚಿದಾನಂದ ಜೊತೆ ಅನೈತಿಕ ಸಂಬಂಧ

ಕಾರು ಚಾಲಕ ಚಿದಾನಂದ ಜೊತೆ ಅನೈತಿಕ ಸಂಬಂಧ

ಸಂತೋಷ್ ಜೊತೆ ಎರಡನೇ ಮದುವೆಯಾಗಿದ್ದರೂ, ಕಾರು ಚಾಲಕ ಚಿದಾನಂದ (25) ಜೊತೆ ಅನೈತಿಕ ಸಂಬಂಧವನ್ನು ಈಕೆ ಹೊಂದಿದ್ದಳು. ವಿಷಯ ತಿಳಿದ ಈಕೆಯ ತಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ತಂದೆಯ ಎಚ್ಚರಿಕೆಯ ನಂತರವೂ, ತನ್ನ ಅಕ್ರಮ ಸಂಬಂಧವನ್ನು ಈಕೆ ಮುಂದುವರಿಸಿದ್ದಳು. ಇದರಿಂದ ಸಿಟ್ಟಾದ ತಂದೆ, ಈಕೆಗೆ ಬರಬೇಕಾಗಿರುವ ವಿಮಾ ಹಣವನ್ನು ಮತ್ತು ಜೀವನಾಂಶವನ್ನು ತನಗೆ ನೀಡುವಂತೆ ಒತ್ತಾಯಿಸಲಾರಂಭಿಸಿದರು.

ಅಕ್ರಮ ಡಿಸ್ಕೋಥೆಕ್: ಹೈಗ್ರೌಂಡ್ಸ್ ಪೊಲೀಸರಿಂದ ಸ್ಯಾಂಡಲ್ ವುಡ್ ನಟನ ಬಂಧನ

ಚಿದಾನಂದಗೆ ಹದಿನೈದು ಲಕ್ಷ ರೂಪಾಯಿಯ ಸುಪಾರಿ

ಚಿದಾನಂದಗೆ ಹದಿನೈದು ಲಕ್ಷ ರೂಪಾಯಿಯ ಸುಪಾರಿ

ಇದರಿಂದ ಸಿಟ್ಟಾದ ಮಗಳು ವಿದ್ಯಾ, ತಂದೆಯನ್ನು ಮುಗಿಸಲು, ತಾನು ಅಕ್ರಮ ಸಂಬಂಧ ಹೊಂದಿದ್ದ ಚಿದಾನಂದಗೆ ಹದಿನೈದು ಲಕ್ಷ ರೂಪಾಯಿಯ ಸುಪಾರಿಯನ್ನು ನೀಡಿದ್ದಳು. ಅದರಂತೇ, ಚಿದಾನಂದ ತನ್ನ ಸ್ನೇಹಿತ ರಘು ಜೊತೆ ಸೇರಿ, ಕೊಲೆಗೆ ಸಂಚು ರೂಪಿಸಿದ್ದಾನೆ. ಆಗಸ್ಟ್ 23ರ ರಾತ್ರಿ ಮುನಿರಾಜುಗೆ ಕರೆ ಮಾಡಿದ ಚಿದಾನಂದ, ಹಾಸನದಿಂದ ಬೆಂಗಳೂರಿಗೆ ಕಾರು ಚಾಲನೆ ಮಾಡಲು ಬರುವಂತೆ ಮುನಿರಾಜು ಅವರಲ್ಲಿ ಮನವಿ ಮಾಡಿದರು. ಅದರಂತೆ, ಮುನಿರಾಜು ಬಂದು, ಕಾರು ಓಡಿಸುತ್ತಾ, ಆಲೂರು ಬಳಿ ಬಂದಾಗ, ಹಿಂಬದಿಯಿಂದ, ಆತನ ಕುತ್ತಿಗೆಗೆ ಕೇಬಲ್ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದರು.

ಹೇಮಾವತಿ ಹಿನ್ನೀರಿನಲ್ಲಿ ಶವ

ಹೇಮಾವತಿ ಹಿನ್ನೀರಿನಲ್ಲಿ ಶವ

ಇದಾದ ನಂತರ, ಹೇಮಾವತಿ ಹಿನ್ನೀರಿನಲ್ಲಿ ಶವವನ್ನು ಬಿಸಾಕಿ ಹೋಗಿದ್ದರು. ಎಲ್ಲಾ ವಿಚಾರವನ್ನು ವಿದ್ಯಾಗೆ ಬೇರೆ ಸಿಮ್ ನಿಂದ ಕರೆಮಾಡಿ ಅಪ್ಡೇಟ್ ಮಾಡಿದ್ದರು. ಇದಾದ ನಂತರ, ಒಂದು ವಾರದ ನಂತರ, ತಂದೆ ನಾಪತ್ತೆಯಾಗಿದ್ದಾರೆಂದು ಹಿರೇಸಾವಿ ಠಾಣೆಯಲ್ಲಿ, ಏನೂ ಅರಿಯದಂತೆ, ವಿದ್ಯಾ ದೂರು ನೀಡಿದ್ದಳು.

 ಮಗಳ ಪೈಶಾಚಿಕ ಕೆಲಸ ಹೊರಕ್ಕೆ

ಮಗಳ ಪೈಶಾಚಿಕ ಕೆಲಸ ಹೊರಕ್ಕೆ

ಅಪರಿಚಿತ ವ್ಯಕ್ತಿಗಳ ಶವಗಳ ಭಾವಚಿತ್ರವನ್ನು ವಿದ್ಯಾಗೆ ಪೊಲೀಸರು ತೋರಿಸಿದಾಗ, ತನ್ನ ತಂದೆಯ ಮೃತ ದೇಹವನ್ನು ವಿದ್ಯಾ ಗುರುತಿಸಿದ್ದಳು. ಈ ಎಲ್ಲಾ ಕೆಲಸಕ್ಕೆ, ಚಿದಾನಂದ, ಪಕ್ಕದ ಮನೆಯವರೊಬ್ಬರ ಸಿಮ್ ಅನ್ನು ಎಗರಿಸಿ, ಎಲ್ಲಾ ಕರೆಗಳನ್ನು ಅದರಿಂದ ಮಾಡುತ್ತಿದ್ದರು. ಈ ಜಾಡನ್ನು ಬೇಧಿಸಿದಾಗ, ಮಗಳ ಪೈಶಾಚಿಕ ಕೆಲಸ ಹೊರಕ್ಕೆ ಬಂದಿದೆ.

English summary
Illict Relationship Daughter Given Supari To Kill Her Father To Her Boy Friend for 15 lacs. This incident reported in Aluru, in Hassan district limit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X